Tumkuru: ಒಂಟಿ ಸಲಗವೊಂದು ದಾಳಿ ನಡೆಸಿ ವ್ಯಕ್ತಿಯೊಬ್ಬರನ್ನು ಗಾಯಗೊಳಿಸಿರುವ ಘಟನೆ ತುಮಕೂರು ತಾಲೂಕು ಕೋಳಿಹಳ್ಳಿಯಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿ 75 ವರ್ಷದ ಮೂರ್ತಪ್ಪ ಎಂದು ಗುರುತಿಸಲಾಗಿದೆ. ಮಾರ್ಚ್ 9ರಂದು ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ತೋಟದ ಸಾಲಿನಲ್ಲಿರುವ ಮನೆಯ ಮುಂದೆ ಕೆಲಸ ಮಾಡುತ್ತಿದ್ದಾಗ ದಿಢೀರನೇ ನುಗ್ಗಿ ಕಾಲಿನಿಂದ ತುಳಿದು ಹಾಕಿದೆ.
ಕಳೆದ ಒಂದು ವಾರದಿಂದಲೇ ತುಮಕೂರು, ಗುಬ್ಬಿ ಮತ್ತು ತುರುವೇಕೆರೆ ತಾಲೂಕುಗಳಲ್ಲಿ ತಿರುಗುತ್ತಿರುವ ಒಂಟಿ ಸಲಗ ಭಯ ಬೀಳಿಸಿದೆ.
ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಲಗದ ಚಲನವಲನದ ಕುರಿತು ನಿಗಾ ಇರಿಸಿದ್ದಾರೆ. ಒಂದು ಕಡೆ ಚಿರತೆ ಮನುಷ್ಯರ ರಕ್ತ ಹೀರಿ ಸಾಯುಸುತ್ತಿದ್ದರೆ ಮತ್ತೊಂದು ಕಡೆ ಒಂಟಿ ಸಲಗದ ಕಾಟ ಜೋರಾಗಿದೆ. ಕೂಡಲೇ ರೈತರ ನೆರವಿಗೆ ಬರಬೇಕೆಂದು ಅರಣ್ಯ ಇಲಾಕೆಯನ್ನು ಜನರು ಒತ್ತಾಯಿಸಿದ್ದಾರೆ.