ಮಧುಗಿರಿ : ಕ್ಲಿನಿಕಲ್ ಕಾರ್ಯಗಳ ಸಹಾಯಕ್ಕೆ ಮಾತ್ರ ತಮ್ಮನ್ನು ಬಳಸಿಕೊಳ್ಳಬೇಕೆಂದು ಸರ್ಕಾರಿ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್ -2 ನೌಕರರ ಸಂಘದ ಪದಾಧಿಕಾರಿಗಳು ಭಾನುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2013 – 14 ನೇ ಸಾಲಿನಲ್ಲಿ ಆಯ್ಕೆಯಾದ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್ -2 ನೌಕರರು ಗಳಿಗೆ ಆದೇಶ ಪತ್ರದಲ್ಲಿ ಸ್ಪಷ್ಟವಾಗಿ ಕ್ಲಿನಿಕಲ್ ಕಾರ್ಯಗಳ ಸಹಾಯಕ್ಕೆ ಮಾತ್ರ ಎಂದು ತಿಳಿಸಲಾಗಿದೆ.
ಜಿಲ್ಲೆಯಲ್ಲಿ 90 ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಗ್ರೂಪ್ ಡಿ ನೌಕರರು ಎಂದ ಮೇಲೆ ಎಲ್ಲರೂ ಒಂದೇ. ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ಬೆದರಿಕೆ ಹಾಕಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.
ಸರ್ಕಾರ ಆದೇಶ ಪತ್ರದಲ್ಲಿ ಕ್ಲಿನಿಕಲ್ ಕಾರ್ಯಗಳ ಸಹಾಯಕ್ಕೆ ಮಾತ್ರ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ, ವೈದ್ಯರು ಹಾಗೂ ಅಧಿಕಾರಿಗಳು ನಾನ್ ಕ್ಲಿನಿಕಲ್ ಕೆಲಸಗಳನ್ನು ಮಾಡುವಂತೆ ಸೂಚಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಸರ್ಕಾರಿ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್ -2 ನೌಕರರ ಸಮಸ್ಯೆಯನ್ನು ಬಗೆಹರಿಸಬೇಕೆಂದು ನೌಕರರ ಸಂಘದ ಚೇತನ್ ಕುಮಾರ್ , ಆಸನ್ ,ಮುದ್ದಲಿಂಗೇಶ್ , ಭಾಗ್ಯಶ್ರೀ , ರವಿ ಆಗ್ರಹಿಸಿದ್ದಾರೆ.