ಜಸ್ಟ್ ನ್ಯೂಸ್

ಗುರು ಶರಣರ ಮಾರ್ಗದರ್ಶನ ಅವಿಸ್ಮರಣೀಯ:

ಪಬ್ಲಿಕ್ ಸ್ಟೋರಿ

ಪಾವಗಡ: ಉತ್ತಮ ಆಡಳಿತ ನಡೆಸುವಲ್ಲಿ ವೀರಶೈವ ಧರ್ಮ ಗುರುಗಳ ಮಾರ್ಗದರ್ಶನ ಸ್ಮರಣೀಯ ಎಂದು ಇತಿಹಾಸ ಲೇಖಕ ವಿ.ಆರ್. ಚೆಲುವರಾಜನ್ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ನಡೆದ ಎರಡನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಗುರು ರುದ್ರಮುನಿ ಸ್ವಾಮಿಗಳು, ಪಾವಗಡ ಕೋಟೆ ಕಟ್ಟುವಂತೆ ವಿಜಯನಗರ ಅರಸು ವೆಂಕಟಪತಿ ರಾಜು ಅವರಿಗೆ ಸಲಹೆ ನೀಡಿದ್ದರು. ಮುಂದಿನ ದಿನಗಳಲ್ಲಿ ಪಟ್ಟಣ ಅಭಿವೃದ್ಧಿ ಹೊಂದಲಿದೆ ಎಂದು ಭವಿಷ್ಯ ನುಡಿದಿದ್ದರು ಎಂದರು.


ನಿಡಗಲ್ಲಿನ ಅರಸರಿಗೆ ಸಂತಾನವಿಲ್ಲದೆ ರಾಜ್ಯಭಾರ ಮುಂದುವರೆಸುವ ಚಿಂತೆಯಲ್ಲಿದ್ದಾಗ ದೊರೆ ತಿಮ್ಮಣ್ಣನಾಯಕ ಮತ್ತು ದಾನಶೀಲಮ್ಮ ನಾಗತಿಗೆ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಆಶೀರ್ವಾದ ಮಾಡಿ ಕೊಟ್ಟ ಕುಂಬಳ ಕಾಯಿ ಸೇವಿಸಿ ಸಂತಾನ ಭಾಗ್ಯ ಪಡೆದರು. ಅವರ 7 ಮಂದಿ ಪುತ್ರರು ಏಳು ಸಂಸ್ಥಾನಗಳನ್ನೇ ಸ್ಥಾಪಿಸಿದ ಇತಿಹಾಸ ಇದೆ. ತಿಪ್ಪೇರುದ್ರಸ್ವಾಮಿಗಳು ತಮ್ಮ ಜೀವನವನ್ನು ನಿಡಗಲ್ಲು ಪ್ರಾಂತ್ಯದಲ್ಲಿ ಪ್ರಾರಂಭಮಾಡಿದರು. ತಾಲ್ಲೂಕಿನಾಧ್ಯಂತ ವೀರಶೈವರ ಮಠಗಳು ಸ್ಥಾಪನೆ ಯಾಗಿದ್ದ ಸಾಕ್ಷಿಗಳನ್ನು ಇಂದಿಗೂ ಕಾಣಬಹುದಾಗಿದೆ ಎಂದು ತಿಳಿಸಿದರು.


ಶರಣಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ, ಶರಣ ಸಾಹಿತ್ಯದ ಕೊಡುಗೆ ಅಪಾರ.  ಬ್ಯಾಡನೂರು ಚೆನ್ನಬಸಣ್ಣ ಅವರು ಕಾಯಕ ನಿಷ್ಠೆಗೆ ಹೆಸರಾದವರು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ, ಬ್ಯಾಡನೂರು ಗ್ರಾಮ ಅನುಭವ ಮಂಟಪದಂತೆ ಕಂಗೊಳಿಸಿದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಂತರಗಂಗೆ ಶಂಕರಪ್ಪ ಅಧಿಕಾರ ಸ್ವೀಕರಿಸಿದರು.

ಪ್ರಾಧ್ಯಾಪಕ ಡಾ.ಚಿತ್ತಯ್ಯ ಪೂಜಾರ್, ವಚನಗಳು ಮೂಢನಂಬಿಕೆ ಅಸಮಾನತೆಯ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಿದವು ಎಂದರು.

ಶಿವಶರಣೆಯರು, ಬಸವಣ್ಣ, ಸ್ವತಂತ್ರ ಹೋರಾಟಗಾರರ ವೇಶ ತೊಟ್ಟ ಶಾಲಾ ಮಕ್ಕಳು, ವೀರಗಾಸೆ, ಜನಪದ ಕಲಾತಂಡಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದವು.
ಶಾರದಾವಿದ್ಯಾಪೀಠದ ಕಾರ್ಯದರ್ಶಿ ಎನ್.ಸಿ.ನಾಗಭೂಷಣ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಅರ್.ಟಿ ಖಾನ್, ಬ್ಯಾಡನೂರು ಚೆನ್ನಬಸಣ್ಣ, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಬ್ಯಾಡನೂರು ಶಾಂತವೀರಪ್ಪ, ವೈದ್ಯ ತಿಪ್ಪೇರುದ್ರಸ್ವಾಮಿ, ನಂದೀಶಬಾಬು, ಹ. ರಾಮಚಂದ್ರಪ್ಪ, ಪ್ರಾಂಶುಪಾಲ ಮಾರಪ್ಪ, ನಾಗಭೂಷಣರೆಡ್ಡಿ. ಹನುಮಂತರಾಯ ಉಪಸ್ಥಿತರಿದ್ದರು.

Comment here