ತುಮಕೂರು:
ಕೋವಿಡ್ 19 ಸಂದಿಗ್ದ ಪರಿಸ್ಥಿತಿಯಲ್ಲಿ ತುಮಕೂರು ಜಿಲ್ಲಾ ಕೇಂದ್ರದಲ್ಲೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಅವ್ಯವಸ್ಥೆಯ ಅಗರದಲ್ಲೆ ವಿದ್ಯಾರ್ಥಿಗಳು ಬರೆಯುವಂತಾಯಿತು.
ನಗರದ ಜೂನಿಯರ್ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಕೊರೊನಾ ಹರಡದಂತೆ ಯಾವುದೇ ಮುಂಜಾಗೃತೆ ಕ್ರಮಗಳನ್ನು ಕೈಗೊಂಡಿರಲಿಲ್ಲ.
ಪರೀಕ್ಷೆ ಬರೆಯಲು ಹಾಜರಾದ ವಿದ್ಯಾರ್ಥಿಗಳು ನೂಕು ನೂಗಲಿನಲ್ಲೆ ತಮ್ಮ ರಿಜಿಸ್ಟರ್ ನಂಬರ್ ಹುಡುಕಲು ಪರದಾಡಿದರು.
ಯಾವುದೇ ರೀತಿಯ ಸಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮುಂಜಾಗ್ರತೆ ವಹಿಸಿರಲಿಲ್ಲ. ನೂರಾರು ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್, ಕೊಠಡಿ ಸಂಖ್ಯೆಯನ್ನು ಕೇವಲ ಎರಡು ಕಡೆಗಳಲ್ಲಿ ಹಾಕಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ನೂಕು ನುಗ್ಗಲು ಉಂಟಾಯಿತು.
ಇದರ ಜೊತೆಯಲ್ಲಿ ಕೊಠಡಿ ಒಳಗಡೆ ಹೋಗುವ ನೂರಾರು ವಿದ್ಯಾರ್ಥಿಗಳಿಗೆ ಉಷ್ಣಾಂಶ ಪರೀಕ್ಷೆಯನ್ನು ಕೇವಲ ಒಂದು ಕಡೆಯಲ್ಲಿ ಮಾತ್ರ ವ್ಯವಸ್ಥೆ ಮಾಡಿದ್ದು ಕೂಡ ಸಮಾಜಿಕ ಅಂತರ ಕಾಯ್ದುಕೊಳ್ಳಲು ಅವ್ಯವಸ್ಥೆಯಾಗಿತ್ತು. ಸ್ಯಾನಿಟೈಸರ್ ಕೂಡ ಸರಿಯಾಗಿ ಮಾಡದಿರುವುದು ಹಲವು ಪೋಷಕರಿಗೆ ಅಸಮದಾನ ಉಂಟು ಮಾಡಿತು.
ಸರ್ಕಾರ ಕೊರೊನಾ ಹಿನ್ನೆಯಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಹಲವು ಕಾರ್ಯಕ್ರಮ ರೂಪಿಸಿದ್ದರೂ ತುಮಕೂರು ಜೂನಿಯರ್ ಕಾಲೇಜಿಗೆ ಅದ್ಯಾವುದರ ಪರಿವಿಲ್ಲದೆ ಅವ್ಯವಸ್ಥೆಯಲ್ಲಿಯೇ ಪರೀಕ್ಷೆ ಪ್ರಾರಂಭಿಸಲಾಯಿತು.
ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಗುರುವಾರ ನಡೆಸಲಾಯಿತು.