ತುಮಕೂರ್ ಲೈವ್

ತುಮಕೂರಿನತ್ತ ಸಹಕಾರಿಗಳ‌‌‌‌ ಚಿತ್ತ

ತುಮಕೂರು: ನಗರದಲ್ಲಿ ಗುರುವಾರ (ನ.14) ನಡೆಯುವ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಭಾಗವಹಿಸಲು ರಾಜ್ಯದ ಎಲ್ಲ ಸಹಕಾರಿಗಳು, ಸಹಕಾರಿ ಮುಖಂಡರು ತುಮಕೂರಿನತ್ತ ಮುಖ ಮಾಡಿದ್ದಾರೆ.

ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ, ಅವರ ಪುತ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅರ್.ರಾಜೇಂದ್ರ ಅವರ ಉತ್ಸಾಹ ಹಾಗೂ ಸಪ್ತಾಹದ ಹೊಣೆ ಹೊತ್ತ ಕಾರಣ ಸಮಾರಂಭಕ್ಕೆ ರಂಗು ಬಂದಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಉದ್ಘಾಟನೆಗೆ ಕರೆಸುವ ಹಿಂದೆ ರಾಜಣ್ಣ ಅವರ ಶ್ರಮ ಇದೆ. ಬಿಎಸ್ ವೈ ಅವರೇ ಕಾರ್ಯಕ್ರಮ ಉದ್ಘಾಟನೆ ಮಾಡಬೇಕು ಎಂದು ಅವರು ಸ್ವತಃ ಆಸಕ್ತಿ ವಹಿಸಿ ಅವರನ್ನು ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲೂ ಸಮಾರಂಭ ಆಸಕ್ತಿ ಮೂಡಿಸಿದೆ.
ಸಹಕಾರ ಸಂಘಗಳು ಉತ್ತೇಜನ ನೀಡುವಲ್ಲಿ ಮುಖ್ಯಮಂತ್ರಿ ಏನಾದರೂ ಕೊಡುಗೆ ಘೋಷಿಸುತ್ತಾರೆಯೇ ಎಂಬ ಚಿತ್ತ ಸಹಕಾರಿಗಳಲ್ಲಿದೆ.

ಬುಧವಾರ ತಡರಾತ್ರಿಯಾದರೂ ನಿರ್ದೇಶಕ ಆರ್.ರಾಜೇಂದ್ರ ಸಮಾರಂಭ ನಡೆಯುವ ಕಾಲೇಜು ಮೈದಾನದಲ್ಲಿ ಇದ್ದರು. ಸಂಸದ ಜಿ.ಎಸ್.ಬಸವರಾಜ್ ಅವರೂ ಭೇಟಿ ನೀಡಿದ್ದರು. ಸಂಸದರಿಗೆ ರಾಜೇಂದ್ರ ಅವರು ಕಾರ್ಯಕ್ರಮದ ತಯಾರಿ,ಸಮಾರಂಭದ ವಿವರದ ಮಾಹಿತಿ ನೀಡಿದರು. ಮುಖಂಡ ರಾಜೇಶ್ ದೊಡ್ಮನೆ ಇತರರು ಇದ್ದ ರು.

Comment here