ತುಮಕೂರು ಲೈವ್

ತುಮಕೂರು: ಈ ಗೌಪ್ಯತೆಯ ಗುಟ್ಟೇನು?

ಉಪ್ಪಾರಹಳ್ಳಿ ಸೇಕ್ರೆಡ್ ಹಾರ್ಟ್ ಶಾಲೆ ಪಕ್ಕದ ರಸ್ತೆ ಕಾಮಗಾರಿಯ ವಿವರಗಳೇ ಇಲ್ಲ

ಸಿಟಿಜನ್ ರಿಪೋರ್ಟ್: ಇಮ್ರಾನ್ ಪಾಷ


ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ವಿಪರೀತ ಗೌಪ್ಯತೆ ಕಾಪಾಡಿಕೊಳ್ಳುತ್ತಿರುವ ಕಾರಣ ಈ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಕಾಮಗಾರಿಗಳು ಆರಂಭವಾಗುತ್ತಿದ್ದಂತೆ ಕಾಮಗಾರಿಗಳ ಟೆಂಡರ್ ಮೊತ್ತ, ಗುಣಮಟ್ಟದ ವಿವರ, ಕಾಮಗಾರಿ ಅವಧಿ, ನಿರ್ವಹಣೆ, ಉದ್ದ, ಅಗಲ ಮತ್ತಿತರದ ವಿವರಗಳ ನಾಮಫಲಕ ಹಾಕಬೇಕು. ಯಾವುದೇ ಕಾಮಗಾರಿ ನಡೆಸಬೇಕಾದರೂ ಪಾರದರ್ಶಕ ತೆಗೆ ಒತ್ತು ನೀಡಬೇಕು.

ಆದರೆ ತುಮಕೂರು ನಗರದಲ್ಲಿ ಕಾಮಗಾರಿಗಳ ಪಾರದರ್ಶಕ ತೆಗೆ ಒತ್ತುನೀಡಬೇಕು. ಪಾರದರ್ಶಕತೆ ಬೇಕಾದರೆ ಅದರ ಎಲ್ಲ ವಿವರಗಳು ಸಾರ್ವಜನಿಕರಿಗೆ ಗೊತ್ತಾಗಬೇಕು ಎನ್ನುತ್ತಾರೆ ನಾಗರಿಕರು.

ನಗರದಲ್ಲಿ ಕಾಮಗಾರಿಗಳು ಕಳಪೆಯಾಗಿವೆ ಹಾಗೂ ಬೇಕಾಬಿಟ್ಟಿ ನಡೆಸಲಾಗುತ್ತಿರುವುದರ ಹಿಂದೆ ಈ ಗೌಪ್ಯತೆಯೇ ಕಾರಣ ಎನ್ನುತ್ತಾರೆ ಕೆಲವು ಅಧಿಕಾರಿಗಳು.

ಗೌಪ್ಯತೆಯ ಗುಟ್ಟೇನು?
ತುಮಕೂರು ನಗರದ ಅನೇಕ ಬಡಾವಣೆಗಳಲ್ಲಿ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ ನಡೆಯುತ್ತಿರುವುದು ಸರಿಯಷ್ಟೇ.. ಆಶ್ಚರ್ಯದ ಸಂಗತಿಯೆಂದರೆ ಈ ರೀತಿ ಕಾಮಗಾರಿಗಳು ನಡೆಯುತ್ತಿರುವ ಯಾವ ಸ್ಥಳಗಳಲ್ಲೂ ಕಾಮಗಾರಿ ಬಗೆಗಿನ ನಾಮಫಲಕವನ್ನು ( ಬೋರ್ಡ್ ನ್ನು) ಹಾಕುತ್ತಿಲ್ಲ!!

ಕಾಮಗಾರಿಯ ಹೆಸರು, ಅನುದಾನದ ಹೆಸರು, ವೆಚ್ಚದ ವಿವರ, ಗುತ್ತಿಗೆದಾರರ ಹೆಸರು, ಯಾವ ಇಲಾಖೆ? ಮೊದಲಾದ ವಿವರಗಳು ಈ ನಾಮಫಲಕದಲ್ಲಿ ಇರಬೇಕು. ಪ್ರಸ್ತುತ ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಬಿಟ್ಟು ಬೇರೆ ನಡೆಯುತ್ತಿರುವ ಕಾಮಗಾರಿಗಳಲ್ಲಿ ಈ ರೀತಿಯ ಬೋರ್ಡುಗಳನ್ನು ಹಾಕುತ್ತಿಲ್ಲ !!! ಏಕೆ ಎಂಬುದು ಅರ್ಥ ವಾಗುತ್ತಿಲ್ಲ!!!

ಇಷ್ಟು ಸಣ್ಣ ಕೆಲಸಕ್ಕೆ ಇಷ್ಟು ಲಕ್ಷ ಖರ್ಚು ಅಯಿತೆ ಎಂದು ಸಾಮಾನ್ಯ ಜನ ಗಾಬರಿ ಯಿಂದ ಹೃದಯ ಒಡೆದು ಹೋಗ ಬಹುದು ಎಂಬ ದೃಷ್ಟಿಯಿಂದ ಹಾಕುವುದಿಲ್ಲ. ತೆರಿಗೆ ಕಟ್ಟುವ ಪ್ರಜೆಗಳ ಮೇಲೆ ಅಷ್ಟು ಪ್ರೀತಿ ಎಂದು ವ್ಯಂಗ್ಯವಾಡಿದರು ವಿಜಯನಗರದ ವಿಜಯೇಂದ್ರ ಕೃಷ್ಣಮೂರ್ತಿ ಅವರು.

Comment here