ತುಮಕೂರು: ದಲಿತ ಸಂಘಟನೆಗಳ ಒಕ್ಕೂಟ(ರಿ) ತುಮಕೂರು ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ ದಿನಾಂಕ 15/8/2020 ರಂದು ನಗರದ ಅಂಬೇಡ್ಕರ್ ಭವನ ದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳನ್ನು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷರಾದ ಡಾಕ್ಟರ್ ಎಂ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ : ಎಂ.ರಾಮಯ್ಯ, ಅಧ್ಯಕ್ಷರಾಗಿ : ರಾಜಣ್ಣ ಯಲದಬಾಗಿ, ಉಪಾಧ್ಯಕ್ಷರಾಗಿ : ಎನ್.ಎಸ್.ಸಿದ್ದೇಶ್ ನೇಗಲಾಲ, ಎಸ್.ಎಲ್. ಹನುಮಂತರಾಯಪ್ಪ, ಪ್ರಧಾನ ಕಾರ್ಯದರ್ಶಿ : ನಟರಾಜು.ಜಿ.ಎಲ್. ಖಜಾಂಚಿ : ಎಲ್.ನರಸಿಂಹಮೂರ್ತಿ ಹೆಬ್ಬಾಕ, ಸಹ ಕಾರ್ಯದರ್ಶಿ : ಎಂ.ಪ್ರಭಣ್ಣ, ಸಂಘಟನಾ ಕಾರ್ಯದರ್ಶಿ : ಸಿ.ಎಲ್.ಮಂಜುನಾಥ್, ನಗರ ಅಧ್ಯಕ್ಷ : ಪಿ.ಸಂಜಯ್, ಸಂಘಟನಾ ಕಾರ್ಯದರ್ಶಿ : ಟಿ.ಎಸ್. ಮಾರುತಿ ಅವರನ್ನು ಆಯ್ಕೆ ಮಾಡಲಾಯಿತು.
ಡಾಕ್ಟರ್ ಎಂ.ವೆಂಕಟಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಲ್ಲಿ ಸರ್ಕಾರಗಳು ಸೇವೆ ಮಾಡುವ ನೆಪದಲ್ಲಿ ಶೋಷಿತರು ಶತಮಾನಗಳಿಂದ ಉಳಿಸಿಕೊಂಡು ಬಂದ ಜಮೀನು ಕಿತ್ತುಕೊಳ್ಳಲು ಭೂಸುಧಾರಣೆ ಕಾಯ್ದೆಯಂತಹ ಕಾನೂನುಗಳನ್ನು ಜಾರಿ ಮಾಡಿವೆ.ಇದರ ವಿರುದ್ಧ ಎಲ್ಲ ಸಂಘಟನೆಗಳು ಜೊತೆಗೂಡಿ ಭೂಮಿ ಉಳಿಸುವ ಹೋರಾಟಕ್ಕೆ ಸಜ್ಜಾಗಬೇಕು ಎಂದರು. ಪ್ರಕಟಣೆ ನಟರಾಜು ಜಿ ಎಲ್ ದಲಿತ ಸಂಘಟನೆಗಳ ಒಕ್ಕೂಟ (ರಿ) ಪ್ರಧಾನ ಕಾರ್ಯಧರ್ಶಿಗಳು ಫೋನ್ : 9741717700.