Wednesday, May 22, 2024
Google search engine
Homeತುಮಕೂರು ಲೈವ್ದುಂಡ ಗ್ರಾಮ ಆದರ್ಶ ಗ್ರಾಮ ಮಾಡಲು ಪಣತೊಟ್ಟ ಭಾರತ ಜನ ಸೇವಾ ಪ್ರತಿಷ್ಠಾನ

ದುಂಡ ಗ್ರಾಮ ಆದರ್ಶ ಗ್ರಾಮ ಮಾಡಲು ಪಣತೊಟ್ಟ ಭಾರತ ಜನ ಸೇವಾ ಪ್ರತಿಷ್ಠಾನ

Publicstory


ತುರುವೇಕೆರೆ: ‘ದೇಶದ ಅಭಿವೃದ್ದಿ ಗ್ರಾಮಗಳ ಮೂಲಕವೇ ಆಗಬೇಕಿರುವುದರಿಂದ; ತಾಲ್ಲೂಕಿನ ದುಂಡ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ಆಯ್ಕೆ ಮಾಡಿಕೊಳ್ಳಲಾಗಿದೆಂದು’ ಬೆಂಗಳೂರಿನ ಭಾರತ ಜನ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಪ್ರೊ.ಮಮತಾ.ಡಿ.ಜಿ ಹೇಳಿದರು.
ತಾಲ್ಲೂಕಿನ ದಂಡ ಗ್ರಾಮದಲ್ಲಿ ಬೆಂಗಳೂರಿನ ಭಾರತ ಜನ ಸೇವಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಆದರ್ಶ ಗ್ರಾಮ ಉದ್ಘಾಟನೆ ಮತ್ತು ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.
ಗ್ರಾಮಗಳಿಂದ ಆಯ್ಕೆಯಾಗಿ ಬಂದ ಎಷ್ಟೊಂದು ಜನಪ್ರತಿನಿಧಿಗಳು ಅಧಿಕಾರ ನಡೆಸಿದರೂ ಯಾವ ಗ್ರಾಮಗಳ ಉದ್ದಾರ ಇನ್ನೂ ಸಾದ್ಯವಾಗಿಲ್ಲವೆಂದು ವಿಷಾಧ ವ್ಯಕ್ತಪಡಿಸಿದರು.

ದೇಶದ ಜನರು ಕಟ್ಟುವ ಟ್ಯಾಕ್ಸ್ ಹಣ ಏನಾಯಿತು. ಅದರಲ್ಲಿ ಅಲ್ಪವನ್ನಾದರೂ ಬಳಸಿದರೆ ಈ ದೇಶದ ಮೂಲಭೂತ ಸಮಸ್ಯೆಗಳಲ್ಲಿ ಒಂದಾದ ಬಡತನವನ್ನು ಬಡ ಸಹಿತ ಕಿತ್ತು ಹಾಕ ಬಹುದಿತ್ತು.
ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿರುವ ದುಂಡಾ ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು, ಮಕ್ಕಳಿಗೆ ಬಾಲಚೇತನ ಕಾರ್ಯಕ್ರಮ, ಯೋಗ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು. ಯುವಕರಿಗೆ ನಾಯಕತ್ವದ ತರಬೇತಿ ನೀಡುವುದು, ಸಾವಯವ ಕೃಷಿಯ ಮಹತ್ವ, ಗಿಡಗಳನ್ನು ನೆಡುವುದು, ಆರೋಗ್ಯ ತಪಾಸಣಾ ಶಿಬಿರ ಆಯೋಜನೆ, ಮದ್ಯಪಾನ, ದೂಮಪಾನದ ಅರಿವು, ದನಕರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂಗಳ ಬಗ್ಗೆ ಅರಿವು,
ಸಾರ್ವಜನಿಕ ಗ್ರಂಥಾಲಯ ಸ್ಥಾಪನೆ, ವ್ಯಕ್ತಿ ವಿಕಸನ ತರಬೇತಿ, ಸಣ್ಣ ಮತ್ತು ಗುಡಿಕೈಗಾರಿಕೆಗೆ ಆದ್ಯತೆ.

ಮಹಿಳೆಯರಿಗೆ ವರಮಾನ ಗಳಿಸುವುದು, ಶೌಚಾಲ ನಿರ್ಮಾಣದ ಅರಿವು ಮೂಡಿಸುವುದು, ಮಕ್ಕಳಿಗೆ ಕ್ರೀಡಾಕೂಟ ಏರ್ಪಡಿಸುವುದು, ಶಾಲೆಯ ಗೋಡೆಯ ಮೇಲೆ ಚಿತ್ರ ಬಿಡಿಸುವುದು, ಪ್ರಜಾಪ್ರಭುತ್ವದ ಬಗ್ಗೆ ಅರಿವು, ಮತದಾನದ ಬಗ್ಗೆ ಜಾಗೃತಿ, ಶಾಲೆಗೆ ಕ್ರೀಡಾ ಮತ್ತು ಇನ್ನಿತರ ಸಲಕರಣೆಗಳನ್ನು ವಿತರಿಸುವುದು, ಗುಡಿಸಲು ಮುಕ್ತ ಗ್ರಾಮ ದೇವಾಲಯದ ಜೀರ್ಣೋದ್ದಾರಕ್ಕೆ ನೆರವು, ಗೋಶಾಲೆಗಳ ನಿರ್ಮಾಣ, ಗೋವುಗಳನ್ನು ದತ್ತು ಸ್ವೀಕರಿಸುವುದು, ಅನಾಥ ಮಕ್ಕಳಿಗೆ ಶಿಕ್ಷಣ ನೀಡುವುದು ಹೀಗೆ ಹಲವು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬೆಂಗಳೂರು ಕ್ರೈಸ್ಟ್ ಅಕಾಡೆಮಿ ಇನ್ಸಿಟ್ಯೂಟ್ ಆಫ್ ಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶ್ರೀಮತಿ.ವಿ. ಅವರು ಶರೀರ ಮತ್ತು ಮನಸ್ಸಿನ ಆರೋಗ್ಯ, ದ್ಯಾನ ಮಹತ್ವ, ಸಹಕಾರ ಮನೋಭಾವಗಳ ಬಗ್ಗೆ ತಿಳಿಸಿಕೊಟ್ಟರು.

ಬೆಂಗಳೂರು ವಿಜಯ ಕಾಲೇಜು ಸಹಾಯಕ ಪ್ರಾಧ್ಯಾಪಕಿ ರಾಧಾ.ಆರ್.ವಿ ಅವರು ಸಾವಯವ ಕೃಷಿ ಮತ್ತು ಆಹಾರ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಇದಕ್ಕೂ ಮೊದಲು ಭಾರತ ಜನ ಸೇವಾ ಪ್ರತಿಷ್ಠಾನದ ಸದಸ್ಯರುಗಳನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ಜನಪದ ಸೊಗಡಿನ ಸೋಮನಕುಣಿ ಮತ್ತು ವಾದ್ಯಗೋಷ್ಠಿಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಡಿ.ಬಿ.ಶಿವಕುಮಾರ ಸ್ವಾಮಿ, ಲತಾ, ನವೀನ್ ಕುಮಾರ್, ಡಿ.ಎಂ.ಸುರೇಶ್, ಎಸ್.ರೇಣುಕಯ್ಯ, ದೊರೆರಾಜು, ಆಹ್ವಾನಿತರಾದ ಡಾ.ಕವಿತಾ ಶಾಸ್ತ್ರಿ, ಲಕ್ಷ್ಮಿ, ಸುಪ್ರೀತ, ಪ್ರೊ.ನಳಿನಿ ಕೆ.ಎನ್, ಲಕ್ಷ್ಮಿಆರ್.ಆರ್, ರೂಪಶ್ರೀ, ಸೌಮ್ಯ, ನಂದಿನಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?