Publicstory. in
Tumkur: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಸರ್ಕಾರಿ ಬಾಲಕಿಯರ ಬಾಲಮಂದಿರ,ಸೆಂಟರ್ ಫಾರ್ ಸೋಷಿಯಲ್ ಇನ್ನೂಕ್ಲೂಸಿವ್ ಡೆವಲಪ್‌ಮೆಂಟ್ ಸೊಸೈಟಿ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಆಯೋಜಿಸಲಾಗಿತ್ತು .
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾದ ಶ್ರೀನಿವಾಸ್ ಮಾತನಾಡಿ ಡಾ.ಬಾಬಾಸಾಹೇಬ್ ಬಿ.ಆರ್ ಅಂಬೇಡ್ಕರ್ ರವರು ಈ ದೇಶದ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಅವರ ಜ್ಞಾನ ಇಡೀ ಜಗತ್ತಿಗೆ ಮಾದರಿಯಾಗಿದೆ .
ವಿದ್ಯಾರ್ಥಿಗಳು ಇತ್ತೀಚೆಗೆ ಆಧುನಿಕ ತಂತ್ರಜ್ಞಾನದ ಸಾಧನೆಗಳ ಹಿಂದೆ ಬಿದ್ದು ಯಶಸ್ಸಿನ ಗುರಿ ಮರೆಯುತ್ತಿದ್ದಾರೆ ,ಅಂಬೇಡ್ಕರ್ ಪುಸ್ತಕ ಪ್ರೇಮಿಯಾದರೆ ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ಸಲಕರಣೆಗಳ ಪ್ರೇಮಿಗಳಾಗಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.ನಿಜವಾಗಲು ದೇಶ ಸೇವೆ ಮಾಡಬೇಕೆಂದರೆ ಅಂಬೇಡ್ಕರ್ ಮಾರ್ಗದಲ್ಲಿ ನಡಿದು ಸಾದನೆ ಮಾಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ತುಮಕೂರು ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ.ಎಂ ಸುಜಾತರವರು ಶಿಕ್ಷಣದ ಮೂಲಕವೇ ಅಂಬೇಡ್ಕರ್ ವಿಶ್ವದ ಮಟ್ಟದಲ್ಲಿ ಹೆಸರು ಗಳಿಸಿ ದೇಶಕ್ಕೆ ಕೀರ್ತಿ ತಂದರು ರಾಷ್ಟ್ರದ ಅಭಿವೃದ್ಧಿ ಅಷ್ಟೇ ಅಲ್ಲದೇ ದೇಶದ ಎಲ್ಲಾ ಹೆಣ್ಣುಮಕ್ಕಳ ಹಕ್ಕುಗಳಿಗೆ ಶ್ರಮಿಸಿದರು ಎಂದರು.
ಕಾನೂನು ಮೂಲಕ ಎಲ್ಲಾರಿಗೂ ಸಮಾನತೆ ಸಂವಿಧಾನ ಬದ್ದ ಹಕ್ಕುಗಳು ಇಂದಿಗೂ ಜಾರಿಜಾಗದಿರುವುದು ನಿಜಕ್ಕೂ ದುರಂತದ ಸಂಗತಿ ಹಾಗಾಗಿ ಹೆಣ್ಣು ಮಕ್ಕಳು ಶಿಕ್ಷಣ ಹೆಚ್ಚು ಪಡೆದು ತಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ಮಾಡಬೇಕು ಇದಕ್ಕೆ ಅಂಬೇಡ್ಕರ್ ರವರ ಶಿಕ್ಷಣ ಸಂಘಟನೆ ಹೋರಾಟ ತ್ರಿವಳಿ ಸೂತ್ರಗಳನ್ನು ಅದರ್ಶವಾಗಿ ಇಟ್ಟುಕೊಳ್ಳಬೇಕು ಎಂದರು .
ಅದ್ಯಕ್ಷೀಯ ನುಡಿಗಳನ್ನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ವಾಸಂತಿ ಉಪ್ಪಾರ್ ರವರು ಅಂಬೇಡ್ಕರ್ ರವರ ಚಿಂತನೆಗಳನ್ನು ಸಮಾಜಕ್ಕೆ ಸಾರ್ವಕಾಲಿಕವಾಗಿ ಬೇಕಾಗಿವೆ.ಸಂವಿಧಾನ ರಚನೆಯಷ್ಟೇ ಅಲ್ಲದೆ ನೀರಾವರಿ ,ಕೃಷಿ ,ಅರ್ಥಿಕತೆ ,ಇತಿಹಾಸ ಮುಂತಾದ ಕ್ಷೇತ್ರದಲ್ಲಿ ಇವರ ಸಾದನೆ ಇಂದಿಗೂ ಅಮರವಾಗಿದೆ ಅವರ ಜ್ಞಾನದ ಆಸಕ್ತಿಅವರ ಜ್ಞಾನದ ಆಸಕ್ತಿ ಇಂದಿನ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು .
ಅಂಬೇಡ್ಕರ್ ಕುರಿತಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ,ಆಶುಭಾಷಣ ಸ್ಪರ್ಧೆ ,ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಹಾಯಕ ಪ್ರಾಧ್ಯಾಪಕರಾದ ಸಚಿನ್ ಬಿ.ಎಸ್ ರವರು ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೇಲ್ವಿಚಾರಕರಾದ ಪುಷ್ಪಲತಾ,ಸಮಲೋಚಕಿ ದಿವ್ಯರವರು ಭಾಗವಹಿಸಿದ್ದರು .