ತುಮಕೂರು ಲೈವ್

ಪೌರತ್ವ ಕಾಯ್ದೆ ಬೆಂಬಲಿಸಿ ಜಾಥಾ

ಮಧುಗಿರಿ : ಪೌರತ್ವ ಕಾಯ್ದೆ ಬೆಂಬಲಿಸಿ ರಾಷ್ಟ್ರೀಯ ನಾಗರಿಕ ವೇದಿಕೆಯಿಂದ ಜ.7 ರಂದು ತುಮಕೂರಿನಲ್ಲಿ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ತುಮಕೂರಿನ ಜನ ಕಾಯ್ದೆ ಪರ ಇದ್ದೇವೆ ಎಂದು ಈ ಜಾಥದಲ್ಲಿ ತೋರಿಸಲಾಗುತ್ತದೆ ಹಾಗೂ ಕಾಯ್ದೆಯ ಸತ್ಯಾಸತ್ಯತೆಯ ಬಗ್ಗೆ ಅರವು ಮೂಡಿಸಲಾಗುವುದು.

ಈ ಜಾಥ ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಈ ಕಾಯ್ದೆಯಿಂದ ಯಾವುದೇ ಮುಸ್ಲಿಂ ಬಾಂಧವರಿಗೆ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ಅವರು ಮುಸ್ಲಿಮರನ್ನು ಎತ್ತಿ ಕಟ್ಟಿ ದೇಶದಲ್ಲಿ ಹಿಂಸಾಚಾರ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ವರದಾಯಿನಿ ಸೇವಾ ಟ್ರಸ್ಟ್ ನ ಗಾಯತ್ರಿ ನಾರಾಯಣ್, ಪಂತಜಲಿ ಯೋಗ ಸಮಿತಿ ನರಸಿಂಹಮೂರ್ತಿ. ಪ್ರೇರಣಾ ಫೌಂಡೇಶನ್ ಅಧ್ಯಕ್ಷ ಎಸ್.ಆರ್.ರಮೇಶ್ ಮುಖಂಡರುಗಳಾದ ಸುರೇಶ್, ಆದಿಶೇಷ ಗುಪ್ತ, ಪಾಂಡುರಂಗ ರೆಡ್ಡಿ, ಲಕ್ಷ್ಮಿಪತಿ, ನಾಗೇಂದ್ರ, ಕಂಬದ ರಂಗಪ್ಪ, ರಾಜಣ್ಣ, ಬಸವರಾಜು, ನಾಗರಾಜು, ಪುಟ್ಟತಾಯಮ್ಮ, ನಾಗೇಶ್ ಹಾಗೂ ಮುಂತಾದವರು ಇದ್ದರು.
ಫೋಟೊ ಶೀರ್ಷಿಕೆ 04 ಮಧುಗಿರಿ 01 – ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ತಾಲೂಕು ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು.

Comment here