ತುಮಕೂರ್ ಲೈವ್

ಪ್ರಾಮಾಣಿಕತೆ ಬದುಕಿನ ಅವಿಭಾಜ್ಯ ಅಂಗವಾಗಬೇಕು

ಪ್ರಾಮಾಣಿಕತೆ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಮಾತಿಗೂ ಕೃತಿಗೂ ಸಂಬಂಧವಿರಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯವು ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಜಾಗೃತಿ ಅರಿವು ಸಪ್ತಾಹ’ದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಪ್ರಾಮಾಣಿಕತೆ ಹಾಗೂ ಸಮಗ್ರತೆ ಇಲ್ಲದ ಬದುಕು ವ್ಯರ್ಥ. ಸ್ವಚ್ಛ ಪರಿಸರದ ಜತೆಗೆ ಸ್ವಚ್ಛ ಸಮಾಜದ ನಿರ್ಮಾಣವೂ ಆಗಬೇಕೆಂದರೆ ಭ್ರಷ್ಟಾಚಾರ ತೊಲಗಬೇಕು ಎಂದರು.

ಸಮಾಜದಲ್ಲಿ ಮೌಲ್ಯಗಳು ಅವನತಿಯತ್ತ ಸಾಗುತ್ತಿವೆ. ಲಂಚ ಕೊಡುವುದು, ಪಡೆಯುವುದು ಎರಡೂ ತಪ್ಪು ಎಂಬ ಅರಿವು ಸಮಾಜದಲ್ಲಿ ಮೂಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಕೆಲಸವನ್ನು ಅನಗತ್ಯವಾಗಿ ಮುಂದೂಡುವುದೂ ಭ್ರಷ್ಟಾಚಾರದ ಒಂದು ಭಾಗ ಎಂದರು.

ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಜೆ. ಸುರೇಶ್, ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ ಉಪಸ್ಥಿತರಿದ್ದರು.

Comment here