Publicstory
ಕುಣಿಗಲ್: ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ನಂತರ ಬೇಸತ್ತ ಪ್ರಿಯತಮ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡ ಆರು ತಿಂಗಳ ನಂತರ ಅಸ್ಥಿಪಂಜರ ತಾಲ್ಲೂಕಿನ ಹುಲಿಯೂರುದುರ್ಗದಿಂದ ಮಾಗಡಿಗೆ ಹೋಗುವ ಮಾರ್ಗಮಧ್ಯದ ಕಾಡಿನಲ್ಲಿ ಪತ್ತೆ ಯಾಗಿದೆ.
ಶುಕ್ರವಾರ ಸಂಜೆ ಕಾಡುಶನೇಶ್ವರ ದೇವಾಲಯದ ಹಿಂಭಾಗದ ಕಾಡಿನ ಬಂಡೆ ಬಳಿ ದ್ವಿಚಕ್ರ ವಾಹನ ಪತ್ತೆ ಯಾಗಿದ್ದು,ಪೊಲೀಸರು ಪರಿಶೀಲನೆ ನಡೆಸಿದಾಗ ಅಸ್ಥಿಪಂಜರ ಪತ್ತೆ ಯಾಗಿದೆ.ವಾಹನದ ಸಂಖ್ಯೆ ಆದರಿಸಿ ಮೃತನ ವಿಳಾಸ ಪತ್ತೆಯಾಗಿದ್ದು,ಮೃತ ತಾಲ್ಲೂಕಿನ ಅರಮನೆ ಹೊನ್ನಮಾಚನಹಳ್ಳಿ ಮೂಲದ,ಬೆಂಗಳೂರು ಹೊಯ್ಸಳ ನಗರದ ನಿವಾಸಿ ಸಂತೋಷ ೩೦ಎಂದು ಗುರುತಿಸಲಾಗಿದೆ.
ಸಂತೋಷ, ತಾಲ್ಲೂಕಿನ ಕೆಬ್ಬಳಿಯ ಶಾಲಿನಿಯನ್ನು ಪ್ರೀತಿಸುತಗತಿದ್ದು,ವಿವಾಹಕ್ಕೆ ಪೋಷಕರು ನಿರಾಕರಿಸಿದ ಕಾರಣ ಶಾಲಿನಿ ಕಳೆದ ಅಕ್ಟೋಬರ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳುಪ್ರಿಯತಮೆಯ ಆತ್ಮಹತ್ಯೆ ಯ ಸುದ್ದಿ ಕೇಳಿ ಸಂತೋಷ ಸಹ ಬೆಂಗಳೂರು ನಲ್ಲಿ ಆತ್ಮಹತ್ಯೆ ಗೆ ಯತ್ನಿಸಿದ್ದನು.ಪೂಷಕರು ಚಿಕಿತ್ಸೆ ಕೊಡಿಸಿದ್ದರು.
ನಂತರ ನವೆಂಬರ್ ೨೨ರಂದು ಬೆಂಗಳೂರು ನಿಂದ ಬಂದವನು,ಕಾಡಿನ ಬಂಡೆ ಬಳಿ ವಾಹನ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು,ಶುಕ್ರವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹುಲಿಯೂರುದುರ್ಗದ ಪೊಲೀಸ್ ತಿಳಿಸಿದ್ದಾರೆ