ಪಬ್ಲಿಕ್ ಸ್ಟೋರಿ
ತುರುವೇಕೆರೆ:, ಬದುಕಿನ ಸಂಭ್ರಮಗಳನ್ನು ಅಸಹಾಯಕರಿಗೆ, ದೀನದಲಿತರಿಗೆ ಸಹಾಯ ಹಸ್ತ ನೀಡುವ ಮೂಲಕ ಆಚರಿಸಿಕೊಂಡರೆ ಆ ಕ್ಷಣಗಳಿಗೆ ಸಾರ್ಥಕತೆ ಮೂಡುತ್ತದೆ ಎಂದು ಎಂದು ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.
ರೋಟರಿ ಭವನದಲ್ಲಿ ನಡೆದ ರೋಟೇರಿಯನ್ ಸದಸ್ಯರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ರೋಟರಿ ಸಂಸ್ಥೆ ಸಮುದಾಯದ ಸೇವೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಮಾಜದಲ್ಲಿನ ದುರ್ಬಲರಿಗೆ ಸಹಾಯ ಹಸ್ತ ಚಾಚುವ ಮೂಲಕ ರೋಟರಿ ಸಂಸ್ಥೆ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಗ್ಯಾಂಗ್ರೀನ್‌ನಿಂದ ಬಳಲುತ್ತಿರುವ ಗುಜರಿ ವ್ಯಾಪಾರಿ ಮಹಮದ್ ಖಾನ್ ಅವರಿಗೆ ಅಭಿನೇತ್ರಿ ಮೆಡಿಕಲ್ಸ್ನ ಮಾಲೀಕರಾದ ನರಸಿಂಹಮೂರ್ತಿ ಅವರು ತಮ್ಮ ಅಜ್ಜಿ ಗೌರಮ್ಮನವರ ನೆನಪಿನಲ್ಲಿ ಕೊಡುಗೆಯಾಗಿ ನೀಡಿದ ಔಷಧಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲ್ಲೂಕು ಶಿಕ್ಷಕರ ಸಂಘದ ಉಪಾಧ್ಯಾಕ್ಷರಾಗಿ ಆಯ್ಕೆಯಾದ ಎಂ.ಬಸವರಾಜ್ ಅವರನನು ಅವರನ್ನು ಅಭಿನಂದಿಸಲಾಯಿತು. ಇನ್ನರ್‌ವೀಲ್ ಅಧ್ಯಕ್ಷೆ ಗೀತಾ ಸುರೇಶ್, ರೋಟರಿ ಟ್ರಸ್ಟ್ ಕಾರ್ಯದರ್ಶಿ ಸಾ.ಶಿ.ದೇವರಾಜ್, ಖಜಾಂಚಿ ಎಚ್.ಆರ್. ತುಕಾರಾಮ್, ಡಾ.ಚೇತನ್, ಬರಹಗಾರ ಪ್ರಸಾದ್, ಮಂಜುಳಾ ಪ್ರಭುಸ್ವಾಮಿ, ತೇಜಸ್ವಿನಿ ಸುಧೀರ್, ಇತರರು ಭಾಗವಹಿಸಿದ್ದರು.
ರೋಟರಿ ಅಧ್ಯಕ್ಷ ಜಿ.ಪ್ರಭುಸ್ವಾಮಿ ಸ್ವಾಗತಿಸಿದರು. ಪೂರ್ಣಿಮ ವಂದಿಸಿದರು. ಕಾರ್ಯದರ್ಶಿ ಶಿವರಾಜ್ ನಿರೂಪಿಸಿದರು.