ಪಾವಗಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಳಿ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಮಾಜಿ ಸಚಿವ ಹಾಗೂ ಶಾಸಕ ವೆಂಕಟರವಣಪ್ಪ ಚಾಲನೆ ನೀಡಿದರು. ರೈತರು ಬಿತ್ತನೆ ಬೀಜವನ್ನು ಕೃಷಿ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದರು.
ತಾಲ್ಲೂಕು 6 ಕೇಂದ್ರಗಳಲ್ಲಿ ಬಿತ್ತನೆ ಶೆಂಗಾ ವಿತರಿಸಲಾಗುವುದು, ಫಹಣಿ, ಆಧಾರ್, ಬೀಜ ಪರವಾನಗಿ, ಜಾತಿ ಪ್ರಮಾಣ ಪತ್ರ, ಎಫ್ ಐ ಡಿ ಸಂಖ್ಯೆ ನೀಡಿ ಬೀಜ ಪಡೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೆ.6 ಬಿತ್ತನೆ ಬೀಜ ಸಾಮಾನ್ಯ ವರ್ಗದ ರೈತರಿಗೆ ಕ್ವಿಂಟಾಲ್ ಗೆ ರಿಯಾಯಿತಿ ಧರ 5700 ರೂ, ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ 4800 ರೂ. ಟಿ.ಎಂ.ವಿ 2 ಬಿತ್ತನೆ ಬೀಜಕ್ಕೆ 5900 ಸಾಮಾನ್ಯ ವರ್ಗದವರಿಗೆ 5200 ರೂ ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಧರ ನಿಗದಿಪಡಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ.ವೆಂಕಟೇಶ್, ಪಾಪಣ್ಣ, ಗೌರಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ನಾಗರಾಜು, ಉಪ ನಿರ್ದೇಶಕ ಅಶೋಕ್, ಸಹಾಯಕ ನಿರ್ದೇಶಕಿ ವಿಜಯಮೂರ್ತಿ, ರಾಮಾಂಜಿ, ಪ್ರವೀಣ್, ಕೆಒಎಫ್ ಅಧ್ಯಕ್ಷ ರಾಮಾಂಜಿನರೆಡ್ಡಿ, ಜಿಲ್ಲಾ ವ್ಯವಸ್ಥಾಪಕ ಶಿವಲಿಂಗಯ್ಯ , ಬಾಲಾಜಿ, ರೈತ ಮುಖಂಡ ನರಸಿಂಹರೆಡ್ಡಿ, ಪೂಜಾರಪ್ಪ, ಕೃಷ್ಣರಾವ್, ಶಂಕರರೆಡ್ಡಿ, ಕೋಟೆ ಪ್ರಭಾಕರ್ ಇತರರು ಉಪಸ್ಥಿತರಿದ್ದರು.