ತುಮಕೂರು ಲೈವ್

ಮಾಜಿ ಸಚಿವ ಮಂಜುನಾಥ್ ಗೆ ತುಮಕೂರಿನಲ್ಲಿ ಇಂದು ಅಂತಿಮ ನಮನ

ಮಂಜುನಾಥ್, ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ


Tumkuru: ಜೆಡಿಎಸ್ ನ ಮಾಜಿ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಆದ ಡಿ. ಮಂಜುನಾಥ್ ಅವರ ಪಾರ್ಥಿವ ಶರೀರ ಇಂದು ( ಫೆ 4-02-2020] ಬೆಳಿಗ್ಗೆ 11 ಗಂಟೆಗೆ ತುಮಕೂರು ಮಹಾನಗರ ಪಾಲಿಕೆ ಆವರಣಕ್ಕೆ ಬರಲಿದ್ದು ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಮೃತರಿಗೆ ಪತ್ನಿ, ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಹಿರಿಯೂರು ತಾಲ್ಲೂ
ಕಿನ ಜವಗೊಂಡನ ಹಳ್ಳಿಯ ತೋಟದಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಅವರು ಕೆಲ ಅನಾರೋಗ್ಯದಿಂದ ಬಳಲುತ್ತಿದ್ದರು.

ಇವರ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಜಾಜೂರು ಗ್ರಾಮ. ದುರುಗಪ್ಪ ಮತ್ತು ಯಲ್ಲಮ್ಮ ದಂಪತಿಗೆ ಜನಿಸಿದ್ದ ಮೂವರು ಹೆಣ್ಣು, ಏಳು ಗಂಡು ಮಕ್ಕಳಲ್ಲಿ ಮಂಜುನಾಥ್‌ ಮೂರನೇಯವರು.

ದಲಿತರಿಗೆ ಶಿಕ್ಷಣ ಗಗನಕುಸುಮವಾಗಿದ್ದ ಕಾಲದಲ್ಲಿ ಇವರು ಓದಿದರು. ಇವರವ ತಂದೆ ದುರುಗಪ್ಪ ಅವರ ಶ್ರಮ ಪುತ್ರನ ಯಶಸ್ಸಿಗೆ ಕಾರಣ ಎಂಬುದನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದರು.

Comment here