Publicstory
Tumkuru: ಗಾರ್ಡನ್ ರಸ್ತೆಯ ಸ್ಮಶಾನದ ಮುಂಭಾಗ ಅರ್ಧಕ್ಕೆ ನಿಂತಿರುವ ದೊಡ್ಡ ಚರಂಡಿ (ರಾಯಗಾಲುವೆ) ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮತ್ತು ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೋರಾಟ ಸಮಿತಿಯ ಸಂಚಾಲಕ ಟಿ.ಹೆಚ್. ರಾಮು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನಗರದ ಹೃದಯಭಾಗದಲ್ಲಿರುವ ಹಾಗೂ ಸರ್ಕಾರಿ ಆಡಳಿತ ಯಂತ್ರದ ಕೂದಲೆಳೆಯ ಅಂತರದಲ್ಲಿರುವ ಚಿಕ್ಕಪೇಟೆಯ ಗಾರ್ಡನ್ರಸ್ತೆಯ ಶನಿಮಹಾತ್ಮ ದೇವಾಲಯದ ಅಕ್ಕಪಕ್ಕದ ನಿವಾಸಿಗಳು ಮಳೆ ಬಂದಾಗ ಕಲುಷಿತ ನೀರು ಸಂಗ್ರಹವಾಗಿ ನರಕಯಾತನೆಯನ್ನು ಪಡುವ ಸ್ಥಿತಿ ಇದೆ.
ಇದೇ ಭಾಗದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಮಳೆನೀರು ಸಂಗ್ರಹವಾಗಿ ಶವಸಂಸ್ಕಾರಕ್ಕೂ ಪರದಾಡುವ ಸ್ಥಿತಿ ನಿಮರ್ಾಣವಾಗುತ್ತದೆ. ಅರ್ಧಕ್ಕೆ ನಿಂತಿರುವ ದೊಡ್ಡಚರಂಡಿ (ರಾಯಗಾಲುವೆ) ಸಮಸ್ಯೆಯನ್ನು ಇತ್ಯಾರ್ಥಪಡಿಸುವಂತೆ ತುಮಕೂರು ಮಹಾನಗರಪಾಲಿಕೆಗೆ ಹಲವು ಬಾರಿ ಮನಿವಿ ಸಲ್ಲಿಸಿದರು.
ಯುವ ಮುಖಂಡ ಎಸ್. ರಾಘವೇಂದ್ರ ಮಾತನಾಡಿ, ತುಮಕೂರು ಅಮಾನಿಕೆರೆಯಿಂದ ಪ್ರಾರಂಭವಾಗುವ (ರಾಯಗಾಲುವೆ) ದೊಡ್ಡಚರಂಡಿಯು ಬಾವಿಕಟ್ಟೆ ಕಲ್ಯಾಣ ಮಂಟಪದ ಹಿಂಭಾಗ ಸ್ಮಶಾನದ ಮುಂಭಾಗ ದೊಡ್ಡ ಚರಂಡಿ ಅರ್ದಕ್ಕೆ ನಿಂತು ಸುಮಾರು ವರ್ಷಗಳೇ ಕಳೆದಿವೆ ಈ ದೊಡ್ಡ ಚರಂಡಿಯೂ ಭೀಮಸಂದ್ರದ ಕೆರೆಗೆ ಅಳವಡಿಸಿರುವ ನೀರು ಶುದ್ಧಿಕರಣ ಘಟಕಕ್ಕೆ ಸಂಪರ್ಕವನ್ನು ಹೊಂದುತ್ತದೆ ಭೀಮಸಂದ್ರ ಕೆರೆಗೆ ಸಂಪರ್ಕ ಹೊಂದುವ ಚರಂಡಿಯು ಅರ್ದಕ್ಕೆ ನಿಂತು ಹಲವು ವರ್ಷಗಳೆ ಕಳೆದರೂ ಸಹ ಇದುವರೆಗೂ ಸಂಬಂಧಪಟ್ಟ ಇಲಾಖೆಯಾಗಲಿ, ಅಧಿಕಾರಿಗಳಾಗಲಿ ಇಲ್ಲಿನ ಸಮಸ್ಯೆಯನ್ನು ಇತ್ಯಾರ್ಥಪಡಿಸುವಂತೆ ಹಲವು ಬಾರಿ ಮನವಿಗಳನ್ನು ನೀಡಿದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಮಳೆ ಬಂದಾಗ ಕೊಳಚೆ ನೀರು ಸರಗವಾಗಿ ಹರಿಯಲು ಸೂಕ್ತ ಚರಂಡಿಯ ವ್ಯವಸ್ಥೆ ಇಲ್ಲದೆ ಇಲ್ಲಿನ ಹೊಲ ಗದ್ದೆಗಳಿಗೆ ಪ್ಲಾಸ್ಟಿಕ್, ಕಸಕಡ್ಡಿ ಕಲುಷಿತ ನೀರು ಸೇರಿ ವಾಸನೆ ಬರುವುದರಿಂದ ಇಲ್ಲಿನ ಜನರು ವಾಸಮಾಡುವುದೇ ಕಷ್ಟವಾಗಿದೆ. ಅಲ್ಲದೆ ಇರುವ ಒಂದು ಚಿಕ್ಕ ರಸ್ತೆಯೂ ಸಹ ಮುಚ್ಚಿ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಕಿಡಿಕಾರಿದರು.
ಮಹಾನಗರಪಾಲಿಕೆಗೆ ಹಲವು ಬಾರಿ ಮನವಿ ನೀಡಲಾಗಿದೆ. ಅಮೃತ್ ಯೋಜನೆಯಡಿಯಲ್ಲಿ ಕೆಲಸ ಆರಂಭಿಸುವುದಾಗಿ ಹೇಳಿ ಇದುವರೆಗೂ ಆರಂಬಿಸಿಲ್ಲ. ಇಲ್ಲಿನ ನಿವಾಸಿಗಳಿಗೆ ಬರಿ ಆಶ್ವಾಸನೆಗಳನ್ನು ನೀಡುತ್ತಿದ್ದು ಜಿಲ್ಲಾಧಿಕಾರಿಗಳು ಸಮಸ್ಯೆಯ ಇತ್ಯಾರ್ಥಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಹೋರಾಟ ಸಮಿತಿಯ ಟಿ. ಗೋವಿಂದರಾಜು, ಗವಿರಾಜು, ಗಂಗಣ್ಣ ಸೇರಿದಂತೆ ಇತರರು ಇದ್ದರು.