ತುಮಕೂರು:
ಹಣಕಾಸಿನ ಸಮಸ್ಯೆಯಿಂದ ಕ್ಯಾಬ್ ಚಾಲಕನೊಬ್ಬ ನೇಣಿಗೆ ಶರಣಾಗುವ ಮುನ್ನ ವಿಡಿಯೋ ಮಾಡಿ ನಂತರವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡ್ಲಹಳ್ಳಿ ಗ್ರಾಮದ ನವಾಸಿ ನಂದೀಶಯ್ಯ ಎಂಬುವರ ಮಗ ಮಧು(25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಬೆಂಗಳೂರು ನಗರದಲ್ಲಿ ಕಾರು ಚಾಲಕನಾಗಿದ್ದ ಮಧು ಕೊರೊನಾ ಲಾಕ್ ಡೌನ್ ಹಿನ್ನಲೆ ಕಳೆದ ವಾರದ ಹಿಂದೆ ತನ್ನ ಸ್ವಗ್ರಾಮ ಕೋಡ್ಲಹಳ್ಳಿಗೆ ಬಂದಿದ್ದರು.
ಹಣಕಾಸಿನ ಸಮಸ್ಯೆ ಉಂಟಾಗಿದ್ದರಿಂದ ಕೊರಟಗೆರೆ ತಾಲ್ಲೂಕಿನ ಮಾವತ್ತೂರು ಕೆರೆ ಸಮೀಪದ ಹುಣಸೆ ಮರಕ್ಕೆ ನೇಣು ಹಾಕಿಕೊಳ್ಳುವ ಮುನ್ನ ವಿಡಿಯೋ ಮಾಡಿ ತನ್ನ ಅಣ್ಣನಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಡಿಯೋದಲ್ಲಿ ಸಮಸ್ಯೆ ಬಗ್ಗೆ ಸ್ವತಃ ಮಧು ಹೇಳಿಕೊಂಡಿದ್ದಾನೆ.
ವಿಡಿಯೋ ಜಾಡು ಹಿಡಿದು ಸಾವಿನ ಖಚಿತ ಮಾಹಿತಿ ಯನ್ನು ಕೋಳಾಲ ಪೊಲೀಸರು ಕಲೆ ಹಾಕುತ್ತಿದ್ದಾರೆ.