ತುಮಕೂರು ಲೈವ್

ಲಾಕ್ ಡೌನ್: ತಿಪಟೂರಿನಲ್ಲಿ 140 ಕುಟುಂಬಕ್ಕೆ ದಿನಸಿ ವಿತರಣೆ

Publicstory. in


ತಿಪಟೂರು: ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಏ.14 ರವರೆಗೆ ದೇಶಾದ್ಯಂತ ಲಾಕ್ ಡೌನ್ ಮಾಡಿದ್ದು, ಇದರ ಹಿನ್ನೆಲೆಯಲ್ಲಿ ಎಷ್ಟೋ ನಗರದ, ಹಳ್ಳಿಯ ಜನರಿಗೆ ಮನೆಬಿಟ್ಟು ಆಚೆ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ಈಡೇನಹಳ್ಳಿ ಗ್ರಾಮದ ಸ್ವಾಮಿ ಕೆ.ಆರ್. ಮತ್ತು ಕ್ಯಾಪ್ಜೆಮಿನಿ ಟೀಮ್, ಬೆಂಗಳೂರು ಇವರ ವತಿಯಿಂದ ತಿಪಟೂರು ತಾಲ್ಲೂಕಿನ ಈಡೇನಹಳ್ಳಿ, ಈಡೇನಹಳ್ಳಿ ಪಾಳ್ಯ, ಕಾಲೋನಿಗಳ 140 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ, 1 ಕೆ.ಜಿ. ತೊಗರಿಬೇಳೆ, 1 ಕೆ.ಜಿ. ಸಕ್ಕರೆ, ಅಡುಗೆಎಣ್ಣೆ, ಲೈಫ್ ಬಾಯ್ ಸೋಪು, ದಂತವರ್ಧಕ ಮತ್ತು ಇತರೆ ಸಾಮಗ್ರಿಗಳನ್ನು ವಿತರಣೆ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ ಈಡೇನಹಳ್ಳಿ, ಈಡೇನಹಳ್ಳಿ ಪಾಳ್ಯ, ಕಾಲೋನಿ, ನವಗ್ರಾಮದ ಮುಖಂಡರು, ಹುಚ್ಚಗೊಂಡನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷರಾದ ಜಗದಾಂಬ ಚಂದ್ರಶೇಖರ್, ಗಂಗಾಧರ್ ಉಪಸ್ಥಿತರಿದ್ದರು.

Comment here