ದೇವರಹಳ್ಳಿ ಧನಂಜಯ
ಬಲಾಢ್ಯ ಬಾಹುಬಲಿ,
ಮಹಾವೀರನಾದದ್ದು,
ಬಲದಿಂದಲ್ಲ ತ್ಯಾಗದಿಂದ.
ತನ್ನೆಲ್ಲ ಶಕ್ತಿಯನ್ನು
ಶರಣಾಗತಿಯಾಗಿಸಿದ
ಮಹಾವೀರ ಸೋಲಿಲ್ಲದ ಸರದಾರ.
ಸುದ್ದಿ, ನಿಮ್ಮೂರಿನ ವರದಿ, ಬರಹಗಳನ್ನು ಇಲ್ಲಿಗೆ ವಾಟ್ಸಾಪ್ ಮಾಡಿ: 9844817737
ಅಂದು ಭರತನ ವಿರುದ್ಧ
ಹೋರಾಡಿ ಗೆದ್ದಿದ್ದರೆ
ಭರತಖಂಡಕ್ಕಷ್ಟೇ ರಾಜನಾಗುತ್ತಿದ್ದೆ
ಗೆಲ್ಲುವ ಕೊಲ್ಲುವ
ಭಯದ ಗುಲಾಮ ನಾಗುತಿದ್ದೆ.
ಆಯುಧಗಳ ಅಡಿಯಾಳಾಗುತ್ತಿದ್ದೆ.
ಹೊರಗಿನ ಗೆಲುವ ಸೋಲಾಗಿಸಿದೆ
ತನ್ನನ್ನು ತಾನು ಗೆಲ್ಲುವ
ಹೊಸ ಗೆಲುವಿಗೆ ನಾಂದಿಯಾದೆ.
ಶಾಂತಿ,ತ್ಯಾಗದ ಹೊಸ ಅಸ್ತ್ರವ
ಜಗತ್ತಿಗೆ ಪರಿಚಯಿಸಿದ
ಮಹಾವೀರ ವಿಶ್ವವಿಜೇತ
ಕ್ರೀಡೆ,ಕುತ್ತುಗಳನ್ನೂ ಯುದ್ಧೋನ್ಮಾದದಲ್ಲಿ
ನೋಡುವ ನಾವು ಕಲಿಯಬೇಕಿದೆ.
ನಿನ್ನಿಂದ ಶಾಂತಿಯ ಹೊಸ ಭಾಷೆ.
ಒಳಒಳಗೆ ಬೆಳೆಯಬೇಕಿದೆ.
ಸೃಷ್ಟಿಯ ಆಂತರ್ಯವ ಅರಿಯಬೇಕಿದೆ
ನಿರ್ವಾಣದ ಅರ್ಥ ತಿಳಿಯಬೇಕಿದೆ.