ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಕೆಎಸ್ಆರ್.ಟಿ.ಸಿ ಜಿಲ್ಲಾ ಅಧಿಕಾರಿ ಗಜೇಂದ್ರಕುಮಾರ್ ಸಮ್ಮುಖದಲ್ಲೇ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಂ.ಡಿ.ಕಮ್ಮಾರ್ ವಿಷ ಸೇವಿಸಿದ ಚಾಲಕ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಹಲವು ವರ್ಷಗಳಿಂದ ಕೆಎಸ್ಆರ್.ಟಿ.ಸಿ. ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕೆಲಸದ ವೇಳೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ವಿಷ ಸೇವಿಸಿದ ಚಾಲಕ ಎಂ.ಡಿ.ಕಮ್ಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷ ಸೇವಿಸಿದ ಚಾಲಕ; ಆತ್ಮಹತ್ಯೆಗೆ ಯತ್ನ

Comment here