Tumukuru: . ಶಿಕ್ಷಕರ ಟಿಇಟಿ ಪರೀಕ್ಷೆ ತೊಡಕುಗಳನ್ನ ಪರಿಹಾರ ಮಾಡಲು ಚರ್ಚಿಸಲಾಗಿದೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಇಟಿ ಪರೀಕ್ಷೆಯಲ್ಲಿ C and R ರೂಲ್ ನ ಕೆಲ ಅರ್ಹತಾ ಮಟ್ಟವನ್ನ ಇಟ್ಟಿದ್ದಾರೆ. ಇದರಿಂದ ಶಿಕ್ಷಕರ ಆಯ್ಕೆ ಕಠಿಣ ವಾಗಿದೆ. ಈ ಅರ್ಹತಾ ಮಟ್ಟ ಬೇಕೋ ಬೇಡವೋ ಅನ್ನುವ ಚರ್ಚೆ ನಡೀತಿದೆ. ಸದ್ಯದಲ್ಲೇ ಪರಿಹಾರ ದೊರೆಯಲಿದೆ ಎಂದರು.
ಹಿಂದಿನ ಸರ್ಕಾರ ಹೊರಡಿಸಿದ ಆದೇಶದಂತೆ ಆರ್.ಟಿ.ಇ ಪದ್ದತಿ ಮುಂದುವರೆದಿದೆ. ಅರ್ಜಿ ಹಾಕುವ ವಿದ್ಯಾರ್ಥಿಯ ನಿವಾಸದ ೧ ಕಿ.ಮಿ.ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇರಬಾರದು. ಅದೇ ಆದೇಶ ಮುಂದುವರೆದಿದೆ…ಬದಲಾಣೆ ಬಗ್ಗೆ ಸಿಎಂ ಬಳಿ ಚರ್ಚಿಸುತ್ತೇನೆ. ಆದರೆ ಸರ್ಕಾರಿ ಶಾಲೆನೂ ಸದೃಢವಾಗಬೇಕು ಎಂಬ ಆಶಯ ನನ್ನದು ಎಂದು ತಿಳಿಸಿದರು.
ಎರಡರ ನಡುವೆ ಬ್ಯಾಲೆನ್ಸ್ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಶಾಲೆಗಳಲ್ಲಿ ಶುದ್ಧವಾದ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆರ್.ಒ.ಪ್ಲಾಂಟ್ ಗಳನ್ನು ಕೊಡುತಿದ್ದೇವೆ. ವಿದ್ಯಾರ್ಥಿಗಳಿಗೆ ನೀರು ಕುಡಿಯುವ ಅಭ್ಯಾಸ ಆಗಬೇಕು. ಆ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ವಾಟರ್ ಬೆಲ್ ಪದ್ದತಿ ಜಾರಿ ಮಾಡುತ್ತೇವೆ ಎಂದು ಹೇಳಿದರು.
ಸರ್ಕಾರಿ ಶಾಲೆಯ ಆಂಗ್ಲ ಮಾಧ್ಯಮ ತರಗತಿಗಳು ಚೆನ್ನಾಗಿ ನಡೀತಿದೆ. ಇನ್ನೂ ಹೆಚ್ಚಿನ ಪಬ್ಲಿಕ್ ಶಾಲೆಗಳು ಬೇಕಂತ ಶಾಸಕರುಗಳು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು.
ಪದವಿ ಕಾಲೇಜಿಗೆ ಭೇಟಿ
ಇದಕ್ಕೂ ಮುನ್ನ ಸಚಿವರು ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿದರು.
ಆನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಥಮ ದರ್ಜೆ ಕಾಲೇಜಿನಲ್ಲಿ 1600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸುಸಜ್ಜಿತವಾದ ಕಾಲೇಜು ನಿರ್ಮಾಣವಾಗಬೇಕಾಗಿದೆ ಎಂದರು.
ಕಾಲೇಜಿನ ವಾತಾವರಣವನ್ನು ಕಣ್ಣಾರೆ ಕಂಡಿದ್ದೇನೆ. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಜಾಗದ ತೊಡಕಿದೆ. ಅದನ್ನು ನಿವಾರಿಸಿ ಉತ್ತಮ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕ ಜ್ಯೋತಿಗಣೇಶ್, ಕಾಲೇಜಿನ ಅಧ್ಯಾಪಕರು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.