Publicstory. in
Tumkuru: ಶಿರಾದ ವ್ಯಕ್ತಿಯೊಬ್ಬರಿಗೆ ಶನಿವಾರ ಕೊರೊನಾ ಸೋಂಕು ತಗುಲಿದ್ದು, ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದನು. ಈತ 45 ವರ್ಷದವನಾಗಿದ್ದು ಪಿ–764 ಎಂದು ಗುರುತಿನ ಸಂಖ್ಯೆ ನೀಡಲಾಗಿದೆ.
ಈತನನ್ನು ಈತನ ಮಗ ಬೆಂಗಳೂರಿಂದ ಮೇ 5 ರಂದು ಶಿರಾ ಪಟ್ಟಣಕ್ಕೆ ಕರೆ ತಂದಿದ್ದನು. ಈ ವ್ಯಕ್ತಿ ಬೆಂಗಳೂರಿನ ಪಾದಾರಾಯನಪುರದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದಗದನು. ಪಾದರಾಯನಪುರ ಕೋವಿಡ್ ಹಾಸ್ಪಾಟ್ ಎಂದು ಗುರುತಿಸಲಾಗಿತ್ತು.
ಈ ವ್ಯಕ್ತಿಯ ಗಂಟಲು ದ್ರವವನ್ನು ಮೇ 5ರಂದೇ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು(ಮೇ 9) ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ.
ವ್ಯಕ್ತಿ ತಂಗಿದ್ದ ಶಿರಾದ 100 ಮೀಟರ್ ಸ್ಥಳವನ್ನು ನಿರ್ಬಂಧಿತ ವಲಯವನ್ನಾಗಿ ಘೋಷಿಸಲಾಗಿದೆ, ಈ ಭಾಗವನ್ನು ಹೊರತುಪಡಿಸಿ ಉಳಿದೆಡೆ ವಿವಿಧ ಚಟುವಟಿಕೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ: ಪಾವಗಡ
https://publicstory.in/ಇಬ್ಬರು-ತಬ್ಲಿಘಿಗಳ-ಸ್ಥಳಾಂತರ