Friday, September 6, 2024
Google search engine
Homeಪೊಲಿಟಿಕಲ್ಶಿರಾ ಉಪಚುನಾವಣೆ: ನಾಳೆಯಿಂದಲೇ ಇವರ ಮನೆಬಾಗಿಲಿಗೆ ಬರಲಿದೆ ಮತಗಟ್ಟೆ..!

ಶಿರಾ ಉಪಚುನಾವಣೆ: ನಾಳೆಯಿಂದಲೇ ಇವರ ಮನೆಬಾಗಿಲಿಗೆ ಬರಲಿದೆ ಮತಗಟ್ಟೆ..!

Publicstory. in


ತುಮಕೂರು: ನಾಳೆಯಿಂದೇ (ಅ.25, ಭಾನುವಾರದಿಂದ) ಶಿರಾ ಕ್ಷೇತ್ರದ ಐದು ಸಾವಿರ ಮತದಾರರಿಗೆ ಮನೆ ಬಾಗಿಲಿಗೆ ಬರುವ ಮತಗಟ್ಟೆಯಲ್ಲಿ ಮತದಾನ ಮಾಡುವ ಅವಕಾಶ ಸಿಗಲಿದೆ.ಶಿರಾ ಉಪ ಚುನಾವಣೆ ಮತದಾನ ನ.3. ಇದೇನಪ್ಪ ಇವರೇನು ವಿಶೇಷೇನಾ, ಚುನಾವಣಾ ಪ್ರಚಾರ ಮುಗಿಯುವ ಮೊದಲೇ ಮತದಾನ ಮಾಡಲು ಎಂದು ಹುಬ್ಬೇರಿಸಬೇಡಿ.ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಸಲ ಇವರ ಮನೆ ಬಾಗಿಲಿಗೆ ಮತಗಟ್ಟೆ ಹೋಗುತ್ತಿದೆ, ಅದೂ ಚುನಾವಣೆ ಮತದಾನ ದಿನಾಂಕ ಇನ್ನೂ ವಾರ ಇರುವ ಮೊದಲೇ ಇವರೆಲ್ಲ ಅವರಿಗೆ ಬೇಕಾದವರಿಗೆ ಮತ ಹಾಕಲಿದ್ದಾರೆ.ಇದು ಅಂಚೆ ಮತದಾನಕ್ಕಿಂತಲು ಭಿನ್ನ.

ಪ್ರತಿ ಮನೆಗೂ ಮತಗಟ್ಟೆಯೊಂದಿಗೆ ಚುನಾವಣಾ ಸಿಬ್ಬಂದಿ ತೆರಳಿ ಮತ ಹಾಕಿಸಿಕೊಂಡು ಬರಲಿದ್ದಾರೆ.ಅದೇನಪ್ಪ, ಹೀಗೆ ಎಂದು ಅಚ್ಚರಿಪಡಬೇಡಿ. ಇದು ಯಾರಿಗೆಲ್ಲ, ಏಕಾಗಿ ಮಾಡಲಾಗುತ್ತಿದೆ ಎಂಬುದನ್ನು ಮುಂದೆ ಓದಿ.’ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು’ ಎಂಬುದು ಚುನಾವಣಾ ಆಯೋಗದ ಉದ್ದೇಶ.

ಕೋವಿಡ್-19 ಸಂಕಷ್ಟದಲ್ಲಿ ಮೊದಲಬಾರಿಗೆ ರಾಜ್ಯದಲ್ಲಿ ಎದುರಾಗಿರುವ ಉಪಚುನಾವಣೆಯಲ್ಲಿ ಕೋವಿಡ್ ಪಾವಿಟಿವ್ ವ್ಯಕ್ತಿ, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಸುಗಮವಾಗಿ ಮತ ಚಲಾಯಿಸಲು ಚುನಾವಣಾ ಆಯೋಗ ಇಂತಹ ಅವಕಾಶ ನೀಡಿರುವುದು ಮತದಾರರ ಮೆಚ್ಚುಗೆಗೆ ಪಾತ್ರವಾಗಿದೆ.

ಸಿರಾ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ನಡೆಯುತ್ತಿರುವ ಮತದಾನಕ್ಕೆ ಮೊದಲೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸಂಪೂರ್ಣ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದು, ಇದಕ್ಕೂ 15 ದಿನಗಳ ಮೊದಲೇ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಂಡುಬರುವ ಕೋವಿಡ್ ಪಾಸಿಟಿವ್, 80ವರ್ಷ ಮೇಲ್ಪಟ್ಟ ಹಾಗೂವಿಕಲಚೇತನರ ಮಾಹಿತಿಯನ್ನು ಚುನಾವಣಾಧಿಕಾರಿಗಳಿಗೆ ನೀಡಿ, ಅವರಲ್ಲಿ ಸ್ವ-ಇಚ್ಛೆಯಿಂದ ಮತಗಟ್ಟೆ ಕೇಂದ್ರಕ್ಕೆ ಖುದ್ದಾಗಿ ಬಂದು ಮತದಾನದಂದೇ ಮತ ಚಲಾಯಿಸಲು ಒಪ್ಪಿರುವ ಹಾಗೂ ತಿರಸ್ಕರಿಸಿರುವ ಮತದಾರರ ಪಟ್ಟಿಯನ್ನು ನೀಡಿ, ಅಂತಿಮವಾಗಿ ಪಟ್ಟಿ ತಯಾರಿಸಲಾಗಿದೆ.

ಇದೇ ತಿಂಗಳ 25 ರಿಂದ 27ರವರೆಗೆ ಮೊದಲನೇ ಸುತ್ತಿ‌ನ ಮತದಾನ ನಡೆಯಲಿದ್ದು, ದಿ:29 ರಿಂದ 31ರವೆರೆಗೆ ಎರಡನೇ ಸುತ್ತಿನಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿ ಪತಗಟ್ಟೆಯಲ್ಲೂ ಮತಗಟ್ಟೆ ಹಂತದ ಅಧಿಕಾರಿಗಳು ಸಂಬಂಧಿಸಿದ ಮತದಾರರಿಗೆ ಮೊದಲೇ ತಿಳುವಳಿಕೆ ಪತ್ರ ತಲುಪಿಸಿದ್ದು, ಅದರಲ್ಲಿ ಮತದಾನ ಅಧಿಕಾರಿಗಳು ಮನೆಗೆ ಬರುವ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗಿದೆ.

ಅದರಂತೆ ಮತದಾರರು ಮನೆಯಲ್ಲಿ ಹಾಜರಿದ್ದು ನಿಯಮಗಳ ಅನುಸಾರ ಘೋಷಣಾ ಪತ್ರಕ್ಕೆ ಸಹಿ ಹಾಕಿ, ವಯಸ್ಸಿನ ದಾಖಲೆ ಹಾಗೂ ಸೂಕ್ತ ಗುರುತಿನ ದಾಖಲೆ ಸಲ್ಲಿಸಿ, ಮತದಾನ ಮಾಡಬಹುದಾಗಿದೆ.

ಪ್ರತಿ ಮತದಾರನಿಗೂ 10-12 ನಿಮಿಷ ಸಮಯ ನಿಗದಿ ಮಾಡಿದ್ದು, ಮತದಾನದ ಎಲ್ಲಾ ಹಂತದ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.

ತಂಡದಲ್ಲಿ ಇಬ್ಬರು ಮತದಾನ ಅಧಿಕಾರಿಗಳು, ಬಿಎಲ್ಓ, ಒಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ವಿಡಿಯೋಗ್ರಾಫರ್ ಸೇರಿದಂತೆ 5 ಜನ ಸಿಬ್ಬಂದಿ ಇರುವರು.

ಈ ಸಂದರ್ಭದಲ್ಲಿ ಕೋವಿಡ್ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿರುವ ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಕಡ್ಡಾಯ.ಒಂದು ತಂಡಕ್ಕೆ 150 ಮತದಾರರ ಪಟ್ಟಿ ನೀಡಲಿದ್ದು, ಪ್ರತಿದಿನ 50 ಮತದಾರರಿಂದ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಂದಿನ ಮತದಾನದ ಬಗ್ಗೆ ಅಂದು ಸಂಜೆಯೇ ಮಾಹಿತಿ ನೀಡುವುದು. ಒಂದು ವೇಳೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮತದಾರ ಹಾಜರಿರಲಿಲ್ಲವಾದರೆ, ಮತ್ತೊಂದು ಸುತ್ತಿನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಅಂದೂ ಸಹ ಮತದಾನ ಮಾಡದಿದ್ದರೆ ನವೆಂಬರ್ 3 ರಂದು ನಡೆಯುವ ಮತದಾನ ಸಂದರ್ಭದಲ್ಲಿ ಮತದಾನ ಮಾಡಲು ಅರ್ಹತೆಯನ್ನು ಕಳೆದುಕೊಳ್ಳುವರು.

ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿರುವ ಚುನಾವಣಾ ಆಯೋಗ, ಇಂತಹ ಮತದಾರರಿಗೆ ನೀಡುವ ಮತಪತ್ರಗಳನ್ನು ಪೋಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ) ಎಂದು ಪರಿಗಣಿಸಿ, ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ PB PWD, PB 80+ ಎಂಬ SEAL ಹಾಕಲಾಗುತ್ತದೆ.

ಕೋವಿಡ್ ಪಾಸಿಟಿವ್ ಬಂದಿರುವ ವ್ಯಕ್ತಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಒಬ್ಬರು ಆರೋಗ್ಯ ಸಿಬ್ಬಂದಿಯ, ಪಿಪಿಇ ಕಿಟ್ ಧರಿಸಿ, ಸುರಕ್ಷತಾ ಕ್ರಮಗಳೊಂದಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಈ ರೀತಿಯ ಮತದಾನ ವೇಳೆ ಎಲ್ಲಾ ಮತದಾರರು ಮತ್ತು ಚುನಾವಣಾ ಸಿಬ್ಬಂದಿ ಎಸ್.ಓ.ಪಿ. (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಅನುಸರಿಸಬೇಕು.

ಒಂದು ವೇಳೆ ಮತದಾನದ ಸಂದರ್ಭದಲ್ಲಿ ಮಳೆ ಸುರಿಯುತ್ತಿದ್ದರೆ, ಅದನ್ನು ವಿಡಿಯೋ ಚಿತ್ರೀಕರಣ ಮಾಡಿ, ಮನೆಯ ಒಳಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಸಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 330 ಮತಗಟ್ಟೆಗಳಲ್ಲಿ 4941 ಮತದಾರರು ಹಿರಿಯ ನಾಗರಿಕರು, 3566 ವಿಕಲಚೇತನರು ಹಾಗೂ 200 ಮಂದಿ ಮತದಾರರು ಕೋವಿಡ್-19 ಪಾಸಿಟಿವ್ ವ್ಯಕ್ತಿಗಳನ್ನು ಗುರುತಿಸಿದ್ದು, ಅವರಲ್ಲಿ 2790 ಹಿರಿಯ ನಾಗರಿಕರು, 2093 ಮಂದಿ ವಿಕಲಚೇತನರು, 136 ಮಂದಿ ಕೋವಿಡ್ ಬಾಧಿತ ಮತದಾರರು ಸೇರಿದಂತೆ ಒಟ್ಟು 5019 ಮಂದಿ ತಾವಿರುವಲ್ಲಿಯೇ ಮತದಾನ ಮಾಡುತ್ತಿದ್ದು, ಈ ಬಾರಿಯ ಉಪಚುನಾವಣೆಯ ವಿಶೇಷವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?