ಲಕ್ಷ್ಮೀಕಾಂತರಾಜು ಎಂ.ಜಿ
ತುಮಕೂರು: ತುಮಕೂರು ಜಿಲ್ಲೆ ಭೌಗೋಳಿಕವಾಗಿ ಶುದ್ಧ ಬಯಲು ಸೀಮೆ ಪ್ರದೇಶ. ಇಲ್ಲಿ ದಟ್ಟಾರಣ್ಯ ಇಲ್ಲವೇ ಇಲ್ಲ. ಇರುವ ಅರಣ್ಯ ಪ್ರದೇಶ ಕುರುಚುಲು ಅರಣ್ಣದಿಂದ ಕೂಡಿದ್ದು ಇತ್ತೀಚಿನ ವರ್ಷಗಳಲ್ಲಿ ಈ ಕಾಡು ಚಿರತೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.
ಈಚೆಗೆ ಹೆಬ್ಬೂರು ಸಮೀಪ ಚಿರತೆಗೆ ಬಲಿಯಾದ ಮಗು
ಹೌದು. ತುಮಕೂರು ಜಿಲ್ಲೆಯು ದೊಡ್ಡ ದೊಡ್ಡ ಕಾಡು ಹೊಂದಿಲ್ಲದಿದ್ದರೂ ಇಲ್ಲಿರು ಕುರುಚುಲು ಕಾಡಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಅರಣ್ಯದಂಚಿನ ಗ್ರಾಮಗಳಲ್ಲೀಗ ಚಿರತೆಗಳ ಭಯದ ವಾತಾವರಣ ಹೆಚ್ಚಾಗಿದ್ದು ರೈತಾಪಿ ವರ್ಗ ತೋಟಗಳಲ್ಲಿ ಹಗಲೊತ್ತು ಭಯದಲ್ಲಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಉಂಟಾಗಿದೆ.
ಗುಬ್ಬಿ ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ ಕಂಡ ಚಿರತೆ
ಇತ್ತೀಚೆಗೆ ಗುಬ್ಬಿ ತಾಲ್ಲೂಕು ಮಣಿಕುಪ್ಪೆಯ ಆರು ವರ್ಷದ ಬಾಲಕನ ಸಾವು ಸೇರಿದಂತರ ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ 2019 ರಲ್ಲಿ ನಾಲ್ಕು ಸಾವುಗಳಾಗಿವೆ.
ತುಮಕೂರು ಜಿಲ್ಲೆಯಲ್ಲಿ ಕುರಿ ಸಾಕಣಿಕೆ ಹೆಚ್ಚಿದ್ದು ಕುರಿ ಮೇಯಿಸಲು ಅಡವಿ ಕಡೆ ಹೊರಟ ಕುರಿ ಹಿಂಡನ್ನೇ ಕಾಯುವ ಚಿರತೆಗಳು ಕುರಿ ಹೊತ್ತೊಯ್ದು ತಿನ್ನುವ ಪ್ರಕರಣಗಳು ಮಾಮೂಲಾಗಿಬಿಟ್ಟಿವೆ ಎನ್ನುತ್ತಾರೆ ಇಲ್ಲಿನ ಕುರಿಗಾಯಿಗಳು.
ಪಾವಗಡ ಸಮೀಪ ಚಿರತೆಗೆ ಬಲಿಯಾದ ಮೇಕೆಗಳು
250 ಚಿರತೆಗಳಿರುವುದು ನಿಜ: ಡಿಸಿಎಫ್
ತುಮಕೂರು ಜಿಲ್ಲೆಯಲ್ಲಿ ಎಲ್ಲ ಕಡೆ ಚಿರತೆ ಇದ್ದು ನಮ್ಮ ಸಮೀಕ್ಷೆಯ ಪ್ರಕಾರ 250 ಚಿರತೆಗಳಿವೆ. ಚಿರತೆಗಳಿವೆ ಎಂದ ಮಾತ್ರಕ್ಕೆ ಎಲ್ಲವನ್ನೂ ಹಿಡಿಯಲು ಆಗುವುದಿಲ್ಲ. ಕಾಡು ವಾಸಿ ಪ್ರಾಣಿ ಎಲ್ಲ ಚಿರತೆಗಳನ್ನ ಹಿಡಿಯುವದಾದರೆ ಕಾಡೇಕೆ? ಈ ಭಾಗದಲ್ಲಿ ಮಾನವನ ಮೇಲೆ ದಾಳಿ ಮಾಡುವ ನಾಲ್ಕೈದು ಚಿರತೆಗಳಿವೆ. ಅವುಗಳನ್ನ ಸೆರೆ ಹಿಡಿಯಲು ನಿರಂತರ ಪ್ರಯತ್ನದಲ್ಲಿದ್ದೇವೆ. ಜನ ಆತಂಕಕ್ಕೆ ಒಳಗಾಗುವುದು ಬೇಡ.
ಗಿರೀಶ್ . ಡಿಸಿಎಫ್
ತುಮಕೂರು
2019 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ರಸ್ತೆ ದಾಟುವಾಗ ವಾಹನಗಳ ಅಪಘಾತದಿಂದ ನಾಲ್ಕು ಚಿರತೆಗಳು ಸಾವನ್ನಪ್ಪಿದ್ದು ಈ ಸಾವಿನ ಸಂಖ್ಯೆಯು ಇಲ್ಲಿನ ಚಿರತೆಗಳ ಸಂತತಿ ಹೆಚ್ಚಿರುವುದಕ್ಕೆ ಸ್ವಷ್ಟ ಉದಾಹರಣೆಯಾಗಿದೆ.
ತುಮಕೂರು ಅರಣ್ಯ ಇಲಾಖೆಯು 2019 ರಲ್ಲಿ ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಮತ್ತು ಮಾಂಸಹಾರಿ ಪ್ರಾಣಿಗಳ ಸಮೀಕ್ಷೆ ಮಾಡಿದಾಗ ಜಿಲ್ಲೆಯ ಅರಣ್ಯದಲ್ಲಿ 250 ಚಿರತೆಗಳಿರುವುದು ವರದಿಯಾಗಿದೆ. ಈ ಪ್ರಮಾಣದಲ್ಲಿ ಈ ಬಯಲು ಸೀಮೆಯ ಕಾಡಿನಲ್ಲಿ ಚಿರತೆ ಹೆಚ್ವಿದ್ದು ರೈತಾಪಿ ವರ್ಗಕ್ಕೂ ತೊಂದರೆಯಾಗಿ ಅರಣ್ಯ ಇಲಾಖೆಯ ಮಾನವ ಸಂಪನ್ಮೂಲವು ವ್ಯರ್ಥವಾಗುತ್ತಿದೆ ಎನ್ನುತ್ತಾರೆ ಇಲಾಖೆ ಹೆಸರೇಳದ ನೌಕರರೊಬ್ಬರು.
ಕಳೆದ ಎರೆಡು ವರ್ಷಗಳ ಹಿಂದೆ ತುಮಕೂರು ನಗರದ ಮಧ್ಯ ಭಾಗದ ಮನೆಯೊಂದಕ್ಕೆ ಚಿರತೆ ನುಗ್ಗಿದ್ದು ಇಲ್ಲಿನ ಚಿರತೆ ದಾಳಿಯನ್ನ ಉದಾಹರಿಸುತ್ತದೆ.
ಅರಣ್ಯನಾಶ ಹಾಗೂ ಪ್ರಾಣಿಗಳ ಆವಾಸ ಸ್ಥಾನವನ್ನ ಮಾನವ ದಿನೇ ದಿನೆ ಅಕ್ರಮಿಸಿರುವಿದು ಕಾಡಿನ ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ ಎನ್ನುತ್ತಾರೆ ಪರಿಸರವಾದಿಗಳು.
ಈ ಬಯಲು ಸೀಮೆಯಲ್ಲಿಇತ್ತೀಚಿನ ವರ್ಷಗಳಲ್ಲಿ ಹೆಚ್ಷಾಗಿರುವ ಕೋಳಿಫಾರಂಗಳಿಂದ ಸಹ ಆಕರ್ಷಿತವಾದ ಚಿರತೆಗಳು ಗ್ರಾಮಗಳತ್ತ ಮುಖ ಮಾಡಲು ಇದು ಸಹ ಕಾರಣವಾಗಿದೆ.
ಚಿರತೆಗಳ ದಾಳಿಗಳಿಂದ ಸಾವೀಗೀಡಾದ ಮನೆಯವರಿಗೆ ಈಗ ಸರ್ಕಾರದ ಹೊಸ ಆದೇಶದಂತೆ ಅರಣ್ಯ ಇಲಾಖೆ 7.5 ಲಕ್ಷ ಪರಿಹಾರ ನೀಡುತ್ತಿದೆ. ಇದರಿಂದ ಇಲಾಖೆಗೆ ಹೊರೆಯಾಗುವದರ ಜೊತೆಗೆ ಅರಣ್ಯದ ಇತರೆ ಕೆಲಸ ಮಾಡುವುದು ಬಿಟ್ಟು ಚಿರತೆಗಳ ಚಲನವಲನ ನೋಡುವುದೇ ಕೆಲಸವಾಗಿದೆ.
ಜಿಲ್ಲೆಯಲ್ಲಿ ಕೃತಕ ನೀರಾವರಿ ಪ್ರಮಾಣವೇ ಹೆಚ್ಚು. ಆದ್ದರಿಂದ ರೈತರು ಪಂಪುಸೆಟ್ಟುಗಳಿಂದ ನೀರನ್ನ ತೋಟಗಳಿಗೆ ಬಿಡಲು ರಾತ್ರಿ ವೇಳೆಯಲ್ಲಿ ಹೆಚ್ಚು ಹೋಗುತ್ತಾರೆ. ಈಗ ಬೇಸಿಗೆ ಆರಂಭವಾಗಿದ್ದು ರಾತ್ರಿ ವೇಳೆ ತೋಟಕ್ಕೆ ಹೋಗುವ ಅನಿವಾರ್ಯತೆ ಹೆಚ್ಚಿದ್ದು ಇದೇ ಸಮಯಕ್ಕೆ ಚಿರತೆಗಳ ಹಾವಳಿಯಿಂದ ರೈತ ಕಂಗಲಾಗಿರುವುದಂತೂ ಸತ್ಯ.