Pubicstory.in
Tumkuru; ಕಲ್ಪತರು ನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಪ್ಯೂ ಗೆ ಭಾರೀ ಬೆಂಬಲ ವ್ಯಕ್ತವಾಯಿತು.
ಸಂಜೆ ಸಿದ್ಧರಬೆಟ್ಟದಲ್ಲಿ ಪ್ರಪಂಚದಾದ್ಯಂತ ಹೆಮ್ಮಾರಿ ಯಾಗಿ ಮೆರೆಯುತ್ತಿರುವ ಕೋರನ ವೈರಸ್‌ಗಳ ನಿರ್ಮೂಲನೆಗೆ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈದ್ಯರ ತಂಡಕ್ಕೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ದರಬೆಟ್ಟದ ಶ್ರೀಗಳು ಶಂಕನಾದ ಮಾಡುವ ಮೂಲಕ ಭಗವಂತನಲ್ಲಿ ಪ್ರಾರ್ಥಿಸಿ ಶುಭಹಾರೈಸಿದರು.
ಜಿಲ್ಲೆಯ ಎಲ್ಲ ಕಡೆಯು ಜನರು ಚಪ್ಪಾಳೆ, ಜಾಗಟೆ ಹೊಡೆಯುವ ಮೂಲಕ ಬೆಂಬಲ ಸೂಚಿಸಿದರು. ಕೃತಜ್ಞತೆ ಅರ್ಪಿಸಿದರು.
ಜನತಾ ಕರ್ಫ್ಯೂಗೆ ಉತ್ತಮ ಬೆಂಬಲ. ಎಲ್ಲ
ತಾಲೂಕುಗಳ ವಿವಿಧ ಗ್ರಾಮಗಳಲ್ಲೂ ಬಂದ್ ಆಚರಣೆ. ಬಸ್, ಆಟೋ ಸಂಚಾರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧ.
ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದದ್ದವು.
ಚರ್ಚ್ ನಲ್ಲಿ ನಡೆಯದ ಪ್ರಾರ್ಥನೆ
ಇದೊಂದು ಬಹಳ ದುಃಖಕರ ದಿನ-ಕಷ್ಟಕರ ದಿನ
ಮೊದಲನೇ ಬಾರಿಗೆ ಇಷ್ಟು ಕಷ್ಟಕರ ದಿನವನ್ನು ನೋಡುತ್ತಿದ್ದೇನೆ.
ದೇವರು ಕೊರೋನಾ ಖಾಯಿಲೆಯನ್ನು ಪ್ರಪಂಚದಿಂದ ನಿವಾರಿಸಲಿ
ಕ್ರಿಶ್ಚಿಯನ್ ಬಾಂಧವರು ಸಾಮೂಹಿಕ ಪ್ರಾರ್ಥನೆಗೆ ಬಂದಿಲ್ಲ.
ಪ್ರಧಾನಿಯವರ ಜನತಾ ಕರ್ಪ್ಯೂವನ್ನು ನಾವು ಸ್ವಾಗತಿಸುತ್ತೇವೆ.
ಮಾರ್ಚ್ 31ರ ತನಕ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸ್ಥಗಿತ.
ಸಾಮೂಹಿಕ ಪ್ರಾರ್ಥನೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ.
ಸಂಕಟದ ಸಮಯದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು
ಒಂದೇ ತಾಯಿಯ ಮಕ್ಕಳಂತೆ ಬದುಕೋಣ
ಉಡುಪಿಯ ಧರ್ಮಗುರು ಫಾ. ವೆಲೇರಿಯನ್ ಮೆಂಡೋನ್ಸಾ ಹೇಳಿದ್ದಾರೆ.
ಜನತಾ ಕಫ್ರ್ಯೂಗೆ ಕರಾವಳಿ ಸ್ತಬ್ಧ
ದ.ಕ ಮತ್ತು ಉಡುಪಿ ಜಿಲ್ಲೆ ಸಂಪೂರ್ಣ ಸ್ತಬ್ಧ
ರಸ್ತೆಗಿಳಿಯದ ಬಸ್, ಆಟೋ, ಟ್ಯಾಕ್ಸಿ
ಬಿಕೋ ಎನ್ನುತ್ತಿರುವ ನಗರಗಳು.
ಜನತಾ ಕಫ್ರ್ಯೂಗೆ ಮನೆಯಿಂದ ಹೊರಬಾರದ ಜನತೆ.
ದೇಶದೆಲ್ಲೆಡೆ ಜನತಾ ಕಫ್ರ್ಯೂಗೆ ಅಭೂತಪೂರ್ವ ಬೆಂಬಲ.
ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್
ಕೊರೊನಾ ಸೋಂಕು ತಡೆಗಟ್ಟುವಂತೆ ಸರ್ಕಾರದ ಕ್ರಮ.
ಒಂದು ದಿನ ಮನೆಯಲ್ಲೇ ಕೂತು ಸ್ವಯಂ ನಿರ್ಬಂಧ
ದ.ಕ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ
ಬಂಟ್ವಾಳ, ಉಳ್ಳಾಲ, ಮೂಡುಬಿದ್ರೆ, ಕಡಬ ಸಂಪೂರ್ಣ ಸ್ತಬ್ಧ.
ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಬೈಂದೂರು, ಉಡುಪಿ, ಕಾಪು ತಾಲೂಕಿನಲ್ಲಿ ಜನತಾ ಕಫ್ರ್ಯೂಗೆ ಬೆಂಬಲ ವ್ಯಕ್ತವಾಯಿತು.