ತುಮಕೂರು ಲೈವ್

ಸ್ನಾಪ್ ಡೀಲ್ ಹೆಸರಲ್ಲಿ ಸಾವಿರಾರು ರೂಪಾಯಿ ದೋಖಾ..!

ತುಮಕೂರು

ಕೌನ್ ಬನೆಗಾ ಕರೋಡಪತಿ ಹೆಸರಲ್ಲಿ ವಂಚನೆ ಮಾಡಿರುವ ಪ್ರಕರಣವೊಂದು ಮಾಸುವ ಮೊದಲೆ ಅಂತಹದ್ದೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸ್ನ್ಯಾಪ್‌ ಡೀಲ್‌ ಕಂಪನಿಯಿಂದ 4.25 ಲಕ್ಷ ಬಹುಮಾನ ಗೆದ್ದಿರುವುದಾಗಿ ಕರೆ ಮಾಡಿ ವಂಚನೆ ಮಾಡಿರುವ ಘಟನೆ ಧಾರವಾಡದ ವಿದ್ಯಾಗಿರಿಯಲ್ಲಿ ನಡೆದಿದೆ.

ಮಧುಮತಿ ಕುಂದಗೊಳ ಎಂಬುವವರಿಗೆ ಕರೆ ಮಾಡಿರುವ ಖದೀಮ ಸ್ನ್ಯಾಪ್ ಡೀಲ್ ಕಂಪನಿಯಿಂದ 4.25 ಲಕ್ಷ ಬಹುಮಾನ ಗೆದ್ದಿರುವುದಾಗಿ ನಂಬಿಸಿದ್ದಾರೆ. ಬಹಯಮಾನ ಪಡೆಯಲು ಮೊದಲು ನಮ್ಮ ಖಾತೆಗೆ 78 ಸಾವಿರ ವರ್ಗಾವಣೆ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ಮಧುಮತಿಯವರಿ ಹಣ ವರ್ಗಾವಣೆ ಮಾಡಿದ್ದಾರೆ. ಆ ನಂತರ ಕರೆ ಮಾಡಿದ ವ್ಯಕ್ತಿ ಯಾವುದೇ ಪ್ರತಿಕ್ರಿಯೆ‌ ನೀಡದೆ ತನ್ನ ಮೊಬೈಲ್ ಸ್ವಿಚ್ ಮಾಡಿಕೊಂಡಿದ್ದಾನೆ.

ಎಷ್ಟೆ ಬಾರಿ ಕರೆ ಮಾಡಿದರೂ ಮೊಬೈಲ್ ರಿಂಗಣಿಸದ ಕಾರಣ ಇದು ಉದ್ದೇಶ ಪೂರ್ವಕವಾಗಿ ಕರೆ ಮಾಡಿ ಹಣ ಕಸಿದುಕೊಂಡು ಮೋಸ ಗೊಳಿಸಿರುವ ಅಂಶ ಗಮನಕ್ಕೆ ಬಂದಿದೆ.

ಕರೆ ಮಾಡಿದ್ದ ವ್ಯಕ್ತಿ, ಕಂಪನಿಯಿಂದ ಬಹುಮಾನ ಪಡೆಯಲು ಶುಲ್ಕ ಪಾವತಿಸಬೇಕು ಎಂದು ಮಧುಮತಿ ಅವರಿಗೆ ಹೇಳಿದ್ದರಿಂದ ಅದನ್ನು ನಂಬಿದ ಅವರು, ಫೋನ್‌ಪೇ ಮತ್ತು ಗೂಗಲ್‌ ಪೇ ಮೂಲಕ ಹಣ ಪಾವತಿ ಮಾಡಿದ್ದರು.

ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

Comment here