ಸಾಹಿತ್ಯ ಸಂವಾದ

ಹಾರ ಹೆಣ ಭಾರ

ದೇವರಹಳ್ಳಿ ಧನಂಜಯ


ಇದು ನಿಜದ ಕಾಲ.
ಸಹಜ ನಿಜ
ಮರೆಮಾಚಲು, ಸುಳ್ಳು
ಬೊಬ್ಬೆ ಹಾಕುತಿಹ ಬೂ ರಿ ಕಾಲ.

ಸತ್ಯ ಸರಳ ದಾರ
ಹಸಿರು,ಕೇಸರಿ,ಬಿಳಿಯ ಬಣ್ಣಗಳ
ಹೂ ಹಾವಾಗಿಸಿ, ಪೋಣಿಸಲಾಗುತ್ತಿದೆ.
ದಾರ ಮರೆಮಾಚಲಾಗುತ್ತಿದೆ.
ದಾರ ಮರೆಮಾಚಿದ ಹಾರ ಹೆಣ ಭಾರ.

ದುಡ್ಡಿಗಾಗಿ ದೂರ ಹೋದವರು,
ಸಾವ ಉಡುಗೊರೆ ತಂದಿದ್ದಾರೆ.
ದೇಶಪ್ರೇಮದ ಹೊಸ ಭಾಷ್ಯ
ಸ್ಟೇ ಹಟ್ ಹೋಂ ಎಂದಿದ್ದಾರೆ.
ನಾಡು ನುಡಿ ಬೆವರ ಧ್ವೇಷಿಗಳು,
ದೇಶಪ್ರೇಮಿಗಳು ಆಗುತ್ತಿದ್ದಾರೆ.

ಸಾವ ತಂದ ಅರಾಮಿಗಳು
ಐಷಾರಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಡವರು ಬೀದಿ ಹೆಣವಾಗಿ ದ್ದಾರೆ.
ಮಾಧ್ಯಮಿಗಳು ಕೇಸರಿ ಬ್ರಶ್ ಹಿಡಿದು,
ಬಿದ್ದ ಹೆಣಗಳಿಗೆ ಹಸಿರು ಬಣ್ಣ ಬಳಿಯುತ್ತಿದ್ದಾರೆ.

ಕೀಲೆಣ್ಣೆ ಯನ್ನೂ ಕಿಲುಬು ಕಾಸಿಗೆ
ಮಾರಿರುವ ಯಜಮಾನ, ಚಕ್ರ ಕಳಚಿಟ್ಟು,
ಮಹಾಭಾರತ ಯುದ್ಧ ಘೋಷಿಸಿ,
ಅಂತರ ಕಾಯ್ದುಕೊಂಡಿದ್ದಾರೆ.
ಬಡವರು,ದುಡಿಯುವವರು ಬೀದಿಗೆ ಬಿದ್ದಿದ್ದಾರೆ.
ದೇಶ ಬದಲಾಗುತ್ತಿದೆ.

Comment here