ಮಧುಗಿರಿ: ಹೆಂಡತಿಯನ್ನು ಕೊಂದು ಮನೆಯ ಮಂಚದ ಕೆಳಗೆಯೇ ಈತ ಹೂತು ಹಾಕಿದ್ದ.
ಏನು ಗೊತ್ತಿಲ್ಲದಂತೆ ನಟಿಸುತ್ತಿದ್ದ. ಅತ್ತ ಹೆಂಡತಿ ತಂದೆ ತಾಯಿ ಮಗಳು ಎಲ್ಲಿಗೆ ಹೋದಳೆಂದು ತಿಳಿಯದೇ ಕಂಗಾಲಾಗಿ ಪೊಲೀಸರಿಗೆ ದೂರು ನೀಡಿದ್ದರು.
ಅಷ್ಟೂ ಸಾಲದೆಂಬಂತೆ ಮಾವನ ಮಗಳನ್ನು ಈತ ಮದುವೆಯಾಗಿದ್ದ. ಈಕೆ ಅಪ್ರಾಪ್ತೆಯಾಗಿದ್ದರೂ ಮದುವೆಯಾಗಿದ್ದ. ತನ್ನ. ಇಬ್ಬರು ಸಹೋದರರೊಂದಿಗೆ ಸೇರಿ ಈ ಅಪ್ರಾಪ್ತ ಪತ್ನಿಯನ್ನು ಮನೆಯೊಳಗೆ ಸಾಯಿಸಿ ನಂತರ ಮೂವರು ಸೇರಿಕೊಂಡು ಮನೆಯೊಳಗೆ ಮಂಚದ ಕೆಳಗೆ ಗುಂಡಿ ತೋಡಿ ಹೂತು ಹಾಕಿದ್ದರು.
ಈ ಘಟನೆ ಮಧುಗಿರಿ ತಾಲ್ಲೂಕಿನ ಇಕಲೋಟಿ ಗ್ರಾಮದಲ್ಲಿ ನಡೆದಿದೆ.
ಡಿಸೆಂಬರ್ 7ರಂದು ಘಟನೆ ನಡೆದಿತ್ತು. ಈ ಅಪ್ರಾಪ್ತ ಪತ್ನಿಗೆ ಹದಿನೇಳು ವರ್ಷವಾಗಿತ್ರು. ಗ್ರಾಮದ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟು ಗಂಡ ನರಸಿಂಹ ಈ ಕೃತ್ಯ ಎಸಗಿದ್ದಾನೆ. ಪ್ರಕರಣವನ್ನು ಮಧುಗಿರಿ ಪೊಲೀಸರು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.