ತುಮಕೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ 8 ಮಂದಿಗೆ ಕೊರೊನ ಸೋಂಕು ಹರಡಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.
ತುರುವೇಕೆರೆಯಲ್ಲಿ 4 ಮಂದಿ ಸೋಂಕಿಗೆ ಒಳಗಾಗಿದ್ದರೆ, ಹೆಬ್ಬೂರಿನಲ್ಲಿ ಒಬ್ಬರಿಗೆ, ಇನ್ನಿಬ್ಬರು ತುಮಕೂರು, ಒಬ್ಬರು ದಾಬಸಪೇಟೆಯವರು.
ಇಂದು ಒಂದೇ ದಿನ 8 ಮಂದಿ ಸೋಂಕಿಗೆ ಒಳಗಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.
ಲಾಕ್ ಡೌನ್ ಸಡಿಲಿಕೆ ಮಾಡಿರುವ ನಡುವೆಯೇ ಕೊರೊನ ಸೋಂಕು ಹರಡುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ತುಮಕೂರು ನಗರದ ಕೆಲವು ಭಾಗಗಳನ್ನು ಸೀಲ್ ಡೌನ್ ಮಾಡಿದ್ದು, ಸಿರಾ ಮತ್ತು ತುರುವೇಕೆರೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ.