Thursday, November 21, 2024
Google search engine
Homeಜೀವನ ಚರಿತ್ರೆಬಹುಮುಖ ವ್ಯಕ್ತಿತ್ವದ ವೂಡೇ ಪಿ.ಕೃಷ್ಣ

ಬಹುಮುಖ ವ್ಯಕ್ತಿತ್ವದ ವೂಡೇ ಪಿ.ಕೃಷ್ಣ

ಕಳೆದ ಸಂಚಿಕೆಯಿಂದ……. ಸಂಚಿಕೆ -೪

ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕಳೆದ ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಳೆಯುವ ಸಿರಿ

ಸ್ವಾತಂತ್ರ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದ ಶ್ರೀಯುತರ ರಕ್ತದಲ್ಲಿ ರಾಷ್ಟ್ರಭಕ್ತಿ, ಸಾಮಾಜಿಕ ಬದ್ದತೆ, ಪರೋಪಕಾರ ಇವೇ ಮೊದಲಾದ ಗುಣಗಳು ಸಹಜವಾಗಿ ಮೈದಾಳಿವೆ. ಕೃಷ್ಣಾರಜೀವನದಲ್ಲಿ ಸ್ವಾಮಿ ವಿವೇಕಾನಂದರ ‘ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ’ಎಂಬುದನ್ನು ಅಕ್ಷರ ಅಳವಡಿಸಿಕೊಂಡಿದ್ದಾರೆ.

ಡಾ. ಕೃಷ್ಣ ರವರ ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ಹೆಸರಾಂತ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಪ್ರಾರಂಭವಾಯಿತು. ಬಹುಶಃ ಇವರ ಜೀವನದ ನಿರ್ಣಾಯಕ ಘಟ್ಟ ಆರಂಭವಾದದ್ದು ಇಲ್ಲಿಂದಲೇ. ಇಲ್ಲಿ ಇವರು ಶ್ರೀ ರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ತತ್ವಗಳಿಗೆ ಮಾರುಹೋದರು.

ರಾಮಕೃಷ್ಣ ಮಠದ ವಿದ್ಯಾರ್ಥಿಯಾಗಿದ್ದಾಗ.

‘ಒಳ್ಳೆಯದನ್ನೇ ಯೋಚಿಸಿ ಒಳ್ಳೆಯದನ್ನೇ ಮಾಡು’ ಇದು ಇವರ ಬದುಕಿನ ಮಂತ್ರ “ಉತ್ತಮ ಜನರು, ಉತ್ತಮ ಬಾಂಧವ್ಯವನ್ನು ಸಂಸ್ಥೆಗಳೊಡನೆ ಬೆಳೆಸಿಕೊಂಡಾಗ ನಾವು ಉತ್ತಮರಾಗುತ್ತೇವೆ. ಎಂಬುದು ಇವರ ಅಭಿಮತ. ಸ್ವಾಮಿ ವಿವೇಕಾನಂದ! ಇದು ಬರಿ ಹೆಸರಲ್ಲ. ಇದೊಂದು ಶಕ್ತಿ, ಅಸೀಮ ಸ್ಫೂರ್ತಿಯ ಸೆಲೆ. ಅವರು ನಡೆದು ತೋರಿದ ದಾರಿಯಲ್ಲಿ ಹೆಜ್ಜೆಗಳ ನೀಡುತ್ತಾ ನಡೆದು ಬದುಕಿನ ಉನ್ನತ ಮಜಲುಗಳಿಗೇರಿದ ಯುವಕರ ಸಂಖ್ಯೆ ಅದೆಷ್ಟೋ. ಇವರ ಹಾದಿಯಲ್ಲಿ ನಡೆದ ಕೃಷ್ಣ ಅವರು ಒಬ್ಬರು. ವಿದ್ಯಾರ್ಥಿ ದೆಸೆಯಲ್ಲಿಯೇ ವಿವೇಕಾನಂದರ ಸಮಗ್ರ ಸಾಹಿತ್ಯವನ್ನು ಅ ಮೂಲಾಗ್ರವಾಗಿ ತಪಸ್ಸಿನಂತೆ ಓದಿ ಪ್ರಭಾವಿತರಾದರು.

ವಿವೇಕಾನಂದರ ವಾಣಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಸ್ವಾಮಿ ಜಗದಾತ್ಮಾನಂದ, ಸ್ವಾಮೀಜ ಸುರೇಶಾನಂದ, ಸ್ವಾಮಿ ಹರ್ಷಾನಂದ ಸ್ವಾಮಿ ಅಗೇಹಾನಂದ ಇವರ ಮಾರ್ಗದರ್ಶನ ಇವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದವು. ಒಮ್ಮೆ ಸ್ವಾಮಿ ರಂಗನಾಥನಂದರು ತಮ್ಮ ಭಾಷಣದಲ್ಲಿ ‘ಮಾನವನ ಧ್ಯೇಯ ಬರೀ ಹಣ ಸಂಪಾದಿಸುವುದಕ್ಕೆ ಮಾತ್ರ ಸೀಮಿತವಾಗಬಾರದು” ಎಂದು ಹೇಳಿದ ಮಾತುಗಳು ಜೀವನದ್ದುದ್ದಕ್ಕೂ ಮಾರ್ಗದರ್ಶಕವಾಗಿವೆ.

ರಾಮಕೃಷ್ಣಾಶ್ರಮದಲ್ಲಿ ಮಾಡಿದ ವಿದ್ಯಾಭ್ಯಾಸ ಇವರ ಬದುಕಿಗೆ ಬೆಳಕು ನೀಡಿತು. ಕೃಷ್ಣರವರು ಇದನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುವುದರ ಜೊತೆಗೆ “ತಾಯಿಯೇ ಮೊದಲ ಗುರು” ಎನ್ನುವುದನ್ನು ಮರೆಯುವುದಿಲ್ಲ.

ಒಮ್ಮೆ ವೃದ್ಧ ದಂಪತಿಗಳು ರೈಲ್ವೆ ಸ್ಟೇಷನ್ ನಲ್ಲಿ ತಮ್ಮ ಲಗೇಜು ಸಾಗಿಸಲು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಕೃಷ್ಣ ಅವರು ತಕ್ಷಣವೇ ಮುಂದೆ ಬಂದು ಅವರ ಲಗೇಜ್ ಅನ್ನು ಹೊತ್ತು ಬೋಗಿಗೆ ಸಾಗಿಸಿದರು. ದಂಪತಿ ಕೃಷ್ಣ ಅವರನ್ನು ಕೂಲಿ ಆಳು ಎಂದು ಭಾವಿಸಿ ಹಣ ಕೊಡಲು ಬಂದರು ಆಗ ಕೃಷ್ಣರವರು ನಗುನಗುತ್ತಲೆ ” ನಾನು ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ನನಗೆ ಏನು ಪ್ರತಿಫಲ ಬೇಡ ಅದನ್ನು ನಾನು ನಿರೀಕ್ಷಿಸುವುದಿಲ್ಲ” ಎಂದು ವಿನಮ್ರವಾಗಿ ಹೇಳಿದರು. ಬೆಳೆಯುವ ಪೈರು ಮೊಳಕೆಯಲ್ಲಿ ತನ್ನ ಗುಣ ತೋರಿಸುತ್ತದೆ ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ. ತಾನು ಮಾಡುವ ಕೆಲಸ ಕನಿಷ್ಟದ್ದು, ಶ್ರೇಷ್ಠದ್ದು ಎಂಬುದಕ್ಕಿಂತ ಪರರಿಗೆ ಅದರಲ್ಲೂ ದುರ್ಬಲರಿಗೆ ಅನುಕೂಲವಾಗುತ್ತದೆಯಾ ಎಂಬ ಚಿಂತನೆ ಮಾತ್ರ ಕೃಷ್ಣರಿಗೆ ಮುಖ್ಯವಾಗಿತ್ತು ಎಂಬುದು ತಿಳಿಯುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?