ಮೌಲ್ಯಗಳನ್ನು ಬಿತ್ತಬೇಕಾಗಿರುವ ಮಾದ್ಯಮಗಳು ಸ್ಥಗಿತಗೊಂಡಾಗ ಮೌಲ್ಯವರ್ದನೆ ಸಾಧ್ಯವೇ…
ಇಂದಿನ ಸಿನಿಮಾ ಮತ್ತು ಮಾದ್ಯಮಗಳ ಉದ್ಯಮ ನೀತಿ ಕಾರಣ ಯುವಜನತೆಯನ್ನು ಕ್ರೌರ್ಯ, ಅಹಂಕಾರ, ಉನ್ಮಾದದಲ್ಲಿ ಮುಳುಗುವಂತೆ ಮಾಡಲಾಗುತ್ತಿದೆ. ಮಾರ್ಗದರ್ಶನ ( ತಂದೆ, ತಾಯಿ) ಮಾಡಬೇಕಾದವರೆಲ್ಲ ಕೈ ಕಟ್ಟಿ ಕೂರುವಂತಾಗಿದೆ.
ಇಂತಹ ಸಂದರ್ಭದಲ್ಲಿ ಮೌಲ್ಯಯುತ ಮಹನೀಯರ ಜೀವನ, ಅವರ ಆದರ್ಶಗಳು ಯುವಜನತೆಯ ಕಣ್ತೆರೆಸುವ ಕೆಲಸ ಮಾಡುತ್ತವೆ. ಮಹನೀಯರ ಜೀವನ ಚರಿತ್ರೆ ಗಳು ಯುವಜನತೆಗೆ ತಲುಪಿಸಬೇಕಾದ ಸಾಮಾಜಿಕ ತುರ್ತು ಇದೆ ಎಂಬುದನ್ನು ಎಲ್ಲರೂ ಹೇಳುತ್ತಿದ್ದಾರೆ. ಈ ಕೆಲಸಕ್ಕೀಗ ಪಬ್ಲಿಕ್ ಸ್ಟೋರಿ ಮುಂದಾಗುತ್ತಿದೆ.
ಮೊದಲಿನ ಸಿನಿಮಾಗಳು ಹೇಗಿರುತ್ತಿದ್ದವು. ವಿಶಾಲಾಕ್ಷಿ ದಕ್ಷಿಣ ಮೂರ್ತಿಯವರ “ವ್ಯಾಪ್ತಿ- ಪ್ರಾಪ್ತಿ” ಕಾದಂಬರಿ. ಡಾ. ರಾಜ್ ಕುಮಾರ್ ನಟನೆಯ ಆಕಸ್ಮಿಕ ಸಿನಿಮಾವಾದಾಗ ಅನೇಕ ಮದ್ಯದಂಗಡಿಗಳನ್ನು ಜನರೇ ಸ್ವಯಂ ಪ್ರೇರಿತವಾಗಿ ಮುಚ್ಚಿಸಿದರು.
“ನನ್ನ ಬದುಕು ಯಾರೊಬ್ಬರಿಗೂ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ ಯಾವುದೋ ಮೂಲೆಯಲ್ಲಿನ ಊರಿನಲ್ಲಿ ಹುಟ್ಟಿ ಸಾಮಾಜಿಕವಾಗಿ ಸೌಲಭ್ಯಗಳಿಂದ ವಂಚಿತವಾಗಿರುವ ಮಗುವಿಗೆ ಅದರಂಥದೆ ಪರಿಸರದಲ್ಲಿದ್ದ ನನ್ನ ಭವಿಷ್ಯ ಅರಳಿದ್ದನ್ನು ಓದಿದಾಗ ಭರವಸೆ ಮೂಡಬಹುದು. ಅಂತಹ ಮಕ್ಕಳಿಗೆ ತಾವು ಹಿಂದುಳಿದವರು, ಅಸಮರ್ಥರು ಅನ್ನುವ ಭ್ರಮೆಯಿಂದ ಬಿಡುಗಡೆ ಹೊಂದಲು ನನ್ನ ಬದುಕು ಸ್ಪೂರ್ತಿ ನೀಡಬಹುದೇನೋ” ಡಾ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಅವರ ಆತ್ಮಕಥೆ ” ವಿಂಗ್ಸ್ ಆಫ್ ಫೈರ್ ” ಕೃತಿಯನ್ನು ರಚಿಸಿದ ಕಾರಣವನ್ನು ಕುರಿತು ಹೇಳಿದ ಮಾತು ನೆನಪಾಗುತ್ತಿದೆ.
ಡಾ.ಅಬ್ದುಲ್ ಕಲಾಂ, ಡಾ.ರಾಜ್ ಕುಮಾರ್ ಅವರಂತೆ ಆದರ್ಶದ ಸಮಾಜ ನಿರ್ಮಾಣದತ್ತ ತಮ್ಮ ಬದುಕನ್ನೇ ಮುಡುಪಾಗಿಟ್ಟಿದ್ದಾರೆ ಡಾ. ವೂಡೇ ಪಿ. ಕೃಷ್ಣ ಅವರು. ಆದರ್ಶ ತುಂಬುವ ಸರಳತೆ, ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಹೆಸರಾದ ನಾಡೋಜ ಡಾ. ವೂಡೇ ಪಿ ಕೃಷ್ಣ ಅವರ ಹೆಸರು ಶಿಕ್ಷಣ ಕ್ಷೇತ್ರದಲ್ಲಿ ಜನಜನಿತ.
ಅಪ್ಪಟ ಗಾಂಧಿವಾದಿ, ಸ್ವತಂತ್ರ ಹೋರಾಟದಗಾರರಾದ ವೂಡೇದ ಹನುಮಂತಪ್ಪನವರ ಕುಟುಂಬದ ಈ ಚೇತನ ಸಮಾಜಸೇವಾ ಗುಣಗಳ ಆಗರ. ಇವರ ಜೀವನ ಚರಿತ್ರೆ “ಶಿಕ್ಷಣ ಶಿಲ್ಪಿ” ಕೃತಿ ಯನ್ನು ನಮ್ಮ publicstory.in ನಲ್ಲಿ ಮುಂದಿನ ಭಾನುವಾರದಿಂದ ವಾರಕ್ಕೊಮ್ಮೆ ಪ್ರಕಟಿಸಲಾಗುವುದು.
ಆರೇಳು ದೇಶಗಳಲ್ಲಿ ಓದುಗರನ್ನು ಸೃಷ್ಟಿಸಿಕೊಂಡಿರುವ publicstory ಓದುಗ ಬಳಗದ ಯುವಜನತೆಗೆ ಇವರ ಜೀವನ ಚಿತ್ರ ಸ್ಪೂರ್ತಿ ಮತ್ತು ಮಾರ್ಗದರ್ಶನವಾಗುತ್ತದೆ ಎಂಬ ಭರವಸೆ ನಮಗಿದೆ.
ಸಂಪಾದಕಿ- ಡಾ. ಶ್ವೇತಾರಾಣಿ ಹೆಚ್. Publicstory.in