ಕಳೆದ ಸಂಚಿಕೆಯಿಂದ…….
2011 ರಲ್ಲಿ ಸ್ಥಾಪಿಸಲಾದ ಶೇಷಾದ್ರಿಪುರಂ ಅಕಾಡೆಮಿ ಫಾರ್ ಗ್ಲೋಬಲ್ ಎಕ್ಸಲೆನ್ಸ್ ಸಂಸ್ಥೆ -ಉತ್ಸಾಹಭರಿತ ವಿದ್ಯಾರ್ಥಿಗಳ ಸುಧಾರಿತ ಕಲಿಕೆಯನ್ನು ಉತ್ತೇಜಿಸುವ ಮೂಲಕ ಅಮೆರಿಕಾದ ಉತ್ತರ ಈಶಾನ್ಯ ರಾಜ್ಯ ವಿಶ್ವವಿದ್ಯಾಲಯ ಒಕ್ಲಹೋಮ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಯೂನಿವರ್ಸಿಟಿ ಆಫ್ ವಿಸ್ಕಾನ್ಸಿಸ್ ರಿವರ್ ಫಾಲ್ಸ್, ಇಂಗ್ಲಂಡಿನ ಯೂನಿವರ್ಸಿಟಿ ಆಫ್ ಚೆಸ್ಟರ್ ದಂತಹ ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕವನ್ನು ಏರ್ಪಡಿಸಿದೆ. ಉನ್ನತ ವ್ಯಾಸಂಗ ಪಡೆಯಲು ಅಮೆರಿಕ ಮತ್ತು ಯು ಕೆ ವಿಶ್ವವಿದ್ಯಾಲಯಗಳಲ್ಲಿ ಅನೇಕ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿರುವುದು ಕೃಷ್ಣರವರ ಶಿಕ್ಷಣ ಕ್ಷೇತ್ರದ ಆಸಕ್ತಿಗೆ, ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಖ್ಯಾತಿಯನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಕೃಷ್ಣ ಅವರ ಶ್ರಮ ಶ್ಲಾಘನೀಯವಾದದು.
150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ರಾಷ್ಟ್ರಗಳಿಂದ ಬಂದು ಶೇಷಾದ್ರಿಪುರಂ ಕಾಲೇಜುಗಳಲ್ಲಿ ಪದವಿಗಳನ್ನು ಪಡೆದಿರುವುದು ಮತ್ತು ಪದವಿಗಳನ್ನು ಪಡೆಯಲು ಪ್ರವೇಶ ಪಡೆದಿರುವುದನ್ನು ಗಮನಿಸಿದರೆ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನಿಜಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಕೃಷ್ಣರವರ ಪಾತ್ರ ಬಹಳ ಮುಖ್ಯವಾದದ್ದು ಅನಿಸುತ್ತದೆ.
ಶಿಕ್ಷಣ ಕ್ಷೇತ್ರ ಇವರಿಗೆ ಬಹಳ ಅಪ್ಯಾಯಮಾನವಾದ ಒಂದು ಪವಿತ್ರ ಕ್ಷೇತ್ರ. ಪ್ರತಿಯೊಬ್ಬರಿಗೂ ವಿದ್ಯೆಯನ್ನು ಪಡೆಯುವ ಹಕ್ಕಿದೆ ಎಂದು ಪ್ರತಿಪಾದಿಸುವ ಇವರು ಇದನ್ನು ತಮ್ಮ ಜೀವನದ ಧ್ಯೇಯವಾಗಿರಿಸಿಕೊಂಡು ಶಾಲಾ-ಕಾಲೇಜುಗಳ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಅಮೂಲ್ಯ ಹಾಗೂ ಅನುಪಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿರುವ ಕಾರಣ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಖಾಸಗೀ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ ಒಂದು ಅಸ್ತಿತ್ವದಲ್ಲಿದೆ. ಅದಕ್ಕೆ ಡಾ.ಕೃಷ್ಣ ಅವರು ಕಾರ್ಯದರ್ಶಿಗಳು. ಎನ್. ಎಸ್. ಎಸ್. ಸೇವೆಗಾಗಿ ದೊರೆತ ರಾಷ್ಟ್ರ ಪ್ರಶಸ್ತಿಗಳ ಸಾಲಿನಲ್ಲಿ ಡಾ. ಕೃಷ್ಣರವರ ನೇತೃತ್ವದ ಶೇಷಾದ್ರಿಪುರಂ ಕಾಲೇಜಿಗೆ ಇಂದಿರಾಗಾಂಧಿ ರಾಷ್ಟ್ರ ಪ್ರಶಸ್ತಿ ದೊರೆತಿದೆ, ಶ್ರೇಷ್ಠ ಘಟಕ ರಾಜ್ಯಪ್ರಶಸ್ತಿಗೂ ಆಯ್ಕೆಯಾಗಿದೆ.
ಮುಂದುವರೆಯುವುದು………