ಶಿಕ್ಷಣ ತಜ್ಞರಾದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರ ಸಂಕ್ಷಿಪ್ತ ಜೀವನ ಚರಿತ್ರೆ ” ಶಿಕ್ಷಣ ಶಿಲ್ಪಿ ” ಕೃತಿಯು ಪಬ್ಲಿಕ್ ಸ್ಟೋರಿಯಲ್ಲಿ ಕೆಲವು ವಾರದಿಂದ ಪ್ರಕಟವಾಗುತ್ತಿದೆ. ಮೊದಲ ಕಂತನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ಸಂಚಿಕೆಯಿಂದ…..
ಎಷ್ಟೋ ಸಂಸ್ಥೆಗಳಲ್ಲಿ ಬೃಹತ್ತತೆ ಇರುತ್ತದೆ, ಗುಣಾತ್ಮಕತೆ ಇರುವುದಿಲ್ಲ. ಗುಣಾತ್ಮಕತೆ ಇದ್ದಲ್ಲಿ ಬೃಹತ್ತತೆ ಇರುವುದಿಲ್ಲ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಹೆಗ್ಗಳಿಕೆಯೇ ಬೇರೆ ಅದು ಇವೆರಡನ್ನು ಸಾಧಿಸಿದೆ. ಶಿಶು ವಿಹಾರದಿಂದ ಆರಂಭಿಸಿ ಪಿಎಚ್.ಡಿ ಪದವಿಯನ್ನೂ ಒಂದೇ ಸೂರಿನಡಿ ಗಳಿಸುವ ಅವಕಾಶವಿರುವಂತೆ ರೂಪಿಸಿದ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಇಟಿ (ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್) ಒಂದು. ಭಾರತದ 28ನೇ ಶ್ರೇಷ್ಠ ಕಾಲೇಜೆಂಬ ಅಧಿಕೃತ ಕೀರ್ತಿ ಶೇಷಾದ್ರಿಪುರಂ ವಿದ್ಯಾಸಂಸ್ಥೆಗೆ ಲಭಿಸಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ( ಸೂಡನ್, ಭೂತಾನ್,ಮಲೇಷ್ಯಾ,ಬಾಂಗ್ಲಾದೇಶ,ನೇಪಾಳ, ಕೋಸ್ಟರಿಕಾ ಮತ್ತು ಸೌದಿ ಅರೇಬಿಯದಂತಹ ದೇಶಗಳ) ವಿದ್ಯಾರ್ಥಿಗಳು ಶಿಕ್ಷಣ ಪಡೆದಿರುವುದು ಹೆಮ್ಮೆಯ ವಿಷಯ. ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿರುವ ಇವರಿಗೆ, ಉತ್ತಮ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿರುವ ಇವರಿಗೆ, ಉತ್ತಮ ಶಿಕ್ಷಣ ಮಾತ್ರವೇ ಒಳ್ಳೆಯ ಬದುಕನ್ನು ಕಟ್ಟಿಕೊಡಬಲ್ಲದು ಎಂಬ ನಂಬಿಕೆ. ಇಂದಿನ ದುಬಾರಿ ಶಿಕ್ಷಣದಲ್ಲಿ ಎಟುಕುವ ಬೆಲೆಗೆ ಗುಣಮಟ್ಟದ ಶಿಕ್ಷಣಕೊಡುವುದೇ ಇವರ ಧ್ಯೇಯವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ, ಮೌಲ್ಯ, ದೇಶಪ್ರೇಮವನ್ನು ಬಿತ್ತುವ ಕಾಯಕಕ್ಕೂ ಬದ್ಧರಾಗಿ, ನಾಡಿನ ಸುಧಾರಕರನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಬೋಧನೆ ಕೊಡಿಸುತ್ತಿರುವುದು ಶ್ಲಾಘನೀಯ ಕೆಲಸ.
ಮುಂದುವರೆಯುವುದು..