ದೇವರಹೊಸಹಳ್ಳಿ ಧನಂಜಯ
ಬಣ್ಣದ ಚಿಟ್ಟೆ
ಕೋಟಿ ಹೂ ಮುಟ್ಟಿದರು
ಜೇನ್ ಆಗಲಿಲ್ಲ
ದುಂಬಿಯ ಶ್ರಮ
ಜೇನು ಹುಟ್ಟಿ ಸೇರಿತು
ಸದ್ದು ಮಾಡದೆ
ಭ್ರಮೆ ಬಿತ್ತಿದ
ಪಾತರಗಿತ್ತಿ ಪಾತ್ರೆ
ತುಂಬಲೇ ಇಲ್ಲ
ನಿಮ್ಮೂರಿನ ಸುದ್ದಿ, ಲೇಖನ, ನಿಮ್ಮ ಬರಹಗಳನ್ನು ವಾಟ್ಸಾಪ್ ಮಾಡಿ: 9844817737
ಹಿತ್ಲವ್ರೆ ಹೂವು
ದುಂಬಿ ವರಿಸಿ ಜೇನು
ಕತ್ತಲೆ ನಿಧಿ
ಲೋಕದ ತುಂಬಾ
ಸಂಚಾರಿ ಚಿಟ್ಟೆ, ಮಟ್ಟೆ
ಮಣ್ಣು ಸೇರಿತ್ತು
ಜೇನ ಕೊಳ್ಳೆಯು
ಜೀವ ಪಲ್ಲವಯಾನ
ಪರಾಗ ರಾಗ
ತನ್ನ ಶ್ರಮವ
ತಾನೆ ಉಣ್ಣದ ಜೇನು
ಜಗದ ಗುರು.
ಈ ಕವಿತೆಯ ಪ್ರತೀ ಪ್ಯಾರವೂ ಒಂದೊಂದು ಹಾಯ್ಕುಗಳಾಗಿವೆ.
ಒಟ್ಟಾಗಿ ನೋಡಿದಾಗ ಸಮಗ್ರ ಕವಿತೆಯೂ ಆಗಿದೆ.
ಹಾಯ್ಕು ಎಂಬುದು ಜಪಾನಿನ ವಿಶಿಷ್ಟ ಕವಿತೆ ಕಟ್ಟುವ ಕ್ರಮ.
3 ಸಾಲುಗಳುಳ್ಳ 17 ಅಕ್ಷರದ ಕವಿತೆಗಳು ಮೊದಲ ಸಾಲಿನಲ್ಲಿ 5 ಎರಡನೇ ಸಾಲಿನಲ್ಲಿ 7 ಹಾಗೂ ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರುತ್ತವೆ ಒತ್ತಕ್ಷರಗಳು ಮತ್ತು ಅರ್ಕಾವತ್ತು ಗಳನ್ನು ಒಂದೇ ಅಕ್ಷರ ಎಂದು ಪರಿಗಣಿಸಲಾಗುತ್ತದೆ ಅರ್ಧ ಅಕ್ಷರಗಳನ್ನು ಪರಿಗಣಿಸಲಾಗುವುದಿಲ್ಲ-ಕವಿ