ಈ ಬಾರಿ ಬುದ್ಧ ಪೂರ್ಣಿಮಾವನ್ನು ಮೇ 5 ರಂದು ಶುಕ್ರವಾರ ಆಚರಿಸಲಾಗಿದೆ. ಗೌತಮ ಬುದ್ಧನು ತನ್ನ ಪ್ರವಚನಗಳಲ್ಲಿ ಮನುಷ್ಯ ತನ್ನ ಜೀವನವನ್ನು ಹೇಗೆ ಸಂತೋಷ ಮತ್ತು ಯಶಸ್ವಿಗೊಳಿಸಬಹುದು ಎಂದು ಹೇಳಿದ್ದಾನೆ. ಬುದ್ಧ ಹೇಳಿದ ವಿಷಯಗಳನ್ನು ನಾವು ಅಳವಡಿಸಿಕೊಳ್ಳುವುದರಿಂದ ಜೀವನದ ಅನೇಕ ತೊಂದರೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಗೌತಮ ಬುದ್ಧ ಬೌದ್ಧ ಧರ್ಮದ ಸ್ಥಾಪಕ ಮತ್ತು ಹಿಂದೂ ಧರ್ಮದಲ್ಲಿ ಅವನನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ
ಕವನ: ಬಿಡದ ಹೊರತು
ಬಿಟ್ಟಿದ್ದೇ ಬರುವುದು
ಇದ್ದದ್ದು ಇದ್ದಲ್ಲೇ ಇರುವುದು.
ಬಿಟ್ಟಿದ್ದು
ಹೆಚ್ಚಾದಷ್ಟೂ
..ಇರುವುದೇ ಹೊರೆ ಎನಿಸುವುದು.
ಬಿಡುವದು
ಬಲವಂತವಾಗಬರದು..
ಬಿಡದೆ ಹೋದಲ್ಲಿ
ಸಾವು ನೋವಾಗುವುದು..
ಮಧ್ಯ ವಯಸ್ಸಿಗೂ
ಮುಕ್ತಿ ..ಬೇಡದೆ ಹೋದಲ್ಲಿ
ಮತ್ತೆ ಆಟದ ಸಾಮಾನಿಗೆ
ಅತ್ತ ಮಗುವಂತೆ…
ಬಿಡಲು ಗಟ್ಟಿ ಮನಸು ಬೇಕು
ಪಡೆಯಲು ಅಲ್ಲ.
ಬಿಡಲು ಏನೂ ಇಲ್ಲ
ಕೊಡಲು ಬೇಕಾದಷ್ಟು ಇದೆ.
ಬಿಟ್ಟದ್ದು ನಿನ್ನ ಅಹಂಕಾರ
ಬೇರೆ ಏನೂ ಅಲ್ಲ.
ಬಿಟ್ಟದ್ದು ನೀನೇ
ನಿನಗೆ ಹಾಕಿಕೊಂಡ ಉರುಳು..
ಬಿಡುವುದು
ಬವಣೆಯನ್ನು
ಬದುಕನ್ನಲ್ಲ.
ಎಲ್ಲರಿಗೂ
ಬದ್ಧನಾದರೆ
ಬುದ್ಧ ಆಗೆ ಆಗುವೆ
ಯಾರನ್ನೂ ನೋಯಿಸದೆ.
– ಡಾ. ರಜನಿ