ಸತೀಶ್ ಯಲಚಗೆರೆ
ಇನ್ನೂ, ಇನ್ನೂ ಕಾಯಲಾಗದು
ಇವರೇಕೆ ಇಷ್ಟು ತಡ
ತಡಬಡ ಸದ್ದು
ಹೂವು, ಹಣ್ಣುಗಳ ಸರಪರ
ನನಗೋ ಕಾತರ!
ದೀಪದ ಶಾಸ್ತ್ರ ಎಂದರೆ ಇದೇಕೋ ಇಷ್ಟು ತಡವೇ?
ಎಲ್ಲ ಪಕ್ಕ ಕೂತು ಹರಟುವವರೇ?
ನಮ್ಮಿಬ್ಬರನ್ನೂ ಬಿಟ್ಟರೆ!
ಅಲ್ಲಿ ಹೊಸ್ತಿಲಿಗೆ ಪೂಜೆ
ಐದೇ ಜನ ಸೇರಿ ಮಾಡಬೇಕಂತೆ
ಆರು ಜನ ಬೇಕಿಲ್ಲ… ಎನ್ನುವವರ ಮಾತು!
ಆರೋ, ಏಳೋ ಬೇಗಾದರೆ ಬೇಡವೇನು?
ದೊಡ್ಡ ಸೊಸೆಯೇ ಆಗಬೇಕಂತೆ ಹಣ್ಣಿನ ತಟ್ಟೆ ಹಿಡಿಯಲು…
ಅಯ್ಯೋ! ಈ ಮಾಸ್ಕ್ ಬೇರೆ ಜಾರುತ್ತದೇ?
ಕೊರೊನಾ ನಡುವೆಯೋ ಮದುವೆ ಕನಸುಗಳು!
ಕೊನೆಗೂ ಸೇರಿದರು, ಹಚ್ಚಿದರು ದೇವರ ದೀಪ
ಇನ್ನೂ ನಾವಿಬ್ಬರೂ ಹಚ್ಚಬೇಕು ಬದುಕಿನ ದೀಪ..
ಹಚ್ಚಿದವು ಕನಸಿನ ದೀಪ
ಬೆಳಗಲಿ, ಬೆರಗು ಮೂಡಿಸಲಿ,
ಕನಸ ದಾರಿಗೆ ಬೆಳಕಿನ ಹಣತೆ….
ಇಬ್ಬರ ಕಣ್ಣಲ್ಲೂ ದೀಪದ ಬಿಂಬ
ಎದೆಯಲ್ಲಿ ಸಾವಿರ ಕುಣಿತ….