ಚಿತ್ರ: ಡಿ.ಎಸ್.ಕುಮಾರ್
ಕೃಷ್ಣ ಜನ್ಮಾಷ್ಟಮಿ ಯಂದು
ಕೃಷ್ಣನ ಕೂಳಲು ಬರೇ ಬಾಲಕೃಷ್ಣ ನ ಆಟದ ವಸ್ತುವಾಗಿ ಕಂಡಿಲ್ಲ…. ಭವ ಕಳಚಿಸುವ ಸಂದೇಶ ಎನಿಸಿದೆ ಕವಯತ್ರಿಗೆ.
ಕೃಷ್ಣಾ
***********************
ಕೂಳಲೆಂಬ
ಕೂಳಲಿಗೆ
ಹೆಸರು ಕೂಟ್ಟವನು..
ಉಸಿರು ಊದಿದವನು..
ಕರೆಯದೇ
ಕರೆದವನು…
ಬಿದಿರಿಗೆ ಬಿಡುಗಡೆ
ನೀಡಿದವನು..
ತಂತುಗಳ
ಹೂರತಾಗಿಯೂ
ಮಿಡಿಸುವವನು…
ಒಳಗೆ
ಖಾಲಿಯಾಗದ ಹೊರತು
ನಾದ ಹೂಮ್ಮದು ಎಂದು
ತಿಳಿಸಿಕೊಟ್ಟವನು…
ಯಾವ
ಸಪ್ತ ಸ್ವರಗಳ ರಂಧ್ರಗಳು…
ನುಡಿಸುವವನ …ಅಧೀನ
ಕೂಳಲೇ ಕೃಷ್ಣನೇ?
ನಾದ ಕೃಷ್ಣನೇ?
ಕೇಳಿದ್ದು ನಾದವೇ?
ತೆರೆದದ್ದು
ಕಿವಿಯೇ?
ಹೃದಯವೇ?
ಆತ್ಮವೇ?
ಕೊನೆಯಾದದ್ದು
ಭವವೇ?
ಡಾ. ರಜನಿ