Thursday, November 21, 2024
Google search engine
Homeಸಾಹಿತ್ಯ ಸಂವಾದಪುಸ್ತಕ ಪರಿಚಯ: ಎಸ್. ಗಂಗಾಧರಯ್ಯ ಅವರ ಮಣ್ಣಿನ ಮುಚ್ಚಳ

ಪುಸ್ತಕ ಪರಿಚಯ: ಎಸ್. ಗಂಗಾಧರಯ್ಯ ಅವರ ಮಣ್ಣಿನ ಮುಚ್ಚಳ

ಎಸ್. ಗಂಗಾಧರಯ್ಯ ಅವರು ನಾಡಿನ ಪ್ರಖ್ಯಾತ ಕತೆಗಾರರು. ಸಿಟಿಯ ಅವಕಾಶಗಳನ್ನು ನಿರಾಕರಿಸುತ್ತಾ ಹಳ್ಳಿಯಲ್ಲೇ ಉಳಿದ ಅವರು ಈ ಕಾಲದ ಹಳ್ಳಿಗಳ ಉಸಿರು, ನಿಟ್ಟುಸಿರು, ನಗು, ಅಳುವಿನ ದನಿ. ರೈತ ಹೋರಾಟಕ್ಕು ಅವರ ಕೊಡುಗೆ ಅನನ್ಯ. ಅವರ ಹೊಸ ಕಥಾ ಸಂಕಲ. ಮಣ್ಣಿ‌ನ ಮುಚ್ಚಳ ಕುರಿತು https://publicstory.in ಪುಸ್ತಕ ಪರಿಚಯದಲ್ಲಿ ಹಿರಿಯ ಪತ್ರಕರ್ತರು, ಪ್ರಕಾಶಕರು ಆದ ಉಜ್ಜಜ್ಜಿ ರಾಜಣ್ಣ ಕಥಾ ಸಂಕಲನ ಕುರಿತು ಬರೆದಿದ್ದಾರೆ.

ಗಾ

ಯದೊಳಗಿನ ಕಲಾಂಶವನ್ನು ತೆಗೆದು ನೋವು ಶಮನ ಮಾಡುವಂತಹ ಚಿಕಿತ್ಸಾ ಗುಣ ಮೈದಾಳಿ ಬೆಳೆದ ಕತೆಗಳಿವು.

ಸಮಾಜಕ್ಕೆ ಹತ್ತಿರುವ ಒಣ ತುರುಬೆಗೆ ಮದ್ದಾಗಿರುವವು. ಕೂದಲೆಳೆ ಗಾತ್ರದ ಕೊಳವಂಕದ ಮುಳ್ಳು ಅಂಗಾಲಿಗೆ ಒಕ್ಕರೆ ಇಡೀ ಅಂಗಾಲು ದದುವುಗಟ್ಟಿ ಊದಿ ಅದರ ಸೇರಿಗೆ ಉರಿ ಉಕ್ಕಾಮಳ್ಳುವುದು. ಅದು ಕೊಡುವ ಬಾಧೆ ಅಷ್ಟಿಷ್ಟಲ್ಲ. ಅಂಗಾಲು ಬಣ್ಣದ ಆ ಕೊಳವಂಕ ಇರುವ ಜಾಗ ಹುಡುಕುವುದೂ ಬಹು ಕಷ್ಟ.


ಪುಸ್ತಕ ಬೇಕಿದ್ದವರು ವಾಟ್ಸಾಪ್ ಮಾಡಿ; 9844817737


ಅಂತಹುದೇ ಹುಡುಕಾಟದಲ್ಲಿ ತೊಡಗಿರುವ ಕತಾ ವಸ್ತು ಸಾರ್ವಕಾಲಿಕವಾಗಿ ಓದುಗರ ಒಕ್ಬಳಿಕೆಯಲ್ಲಿರುವಂತಹುಗಳು ಎಸ್ ಗಂಗಾಧರಯ್ಯ ನವರ ಕತೆಗಳು.

ಕೊಳವಂಕ ಒಕ್ಕ ಜಾಗಕ್ಕಿಂತವಾ ಅಂಗಾಲಿನ ಇತರೆ ಅಂಗಾಂಶಗಳ ಮೇಲೆ ಬೀರುವ, ಅದರ ಪ್ರಭಾವ ಹಚ್ಚಾಗಿರುತ್ತದೆ. ಹಾಗೆ, ಈ ಸಂಕಲನದ ಕತೆಗಳು ಮುಖ್ಯವಾಗಿ ಕೊಳವಂಕ ಒಕ್ಕ ಜಾಗವನ್ನು ಹುಡುಕಿ ನೋವನ್ನು ಕಡಿಮೆ ಮಾಡಲು ಸದಾ ಪ್ರಯತ್ನ ಮಾಡುತ್ತವೆ.

ಸಾಮಾಜಿಕ ದೆಶೆ ಮಾರ್ಗದೊಳಗೆ ಅನೇಕ ಪ್ರಸ್ಥಿಮೆಗಳಿಗೆ ಸಂಕಲನದ ಕತೆಗಳನ್ನು ಆರಾಕಿಕೊಂಡು ಉತ್ತಾರ ಕಂಡುಕೊಳ್ಳಲು ಕತೆಗಳು ಒಂದು ರೀತಿಯಲ್ಲಿ ಹೇಳುವುದಾದರೆ ಶ್ರಮ ಶೀಲ ಗುಣವುಳ್ಳಂತಹುಗಳಾಗಿರುವವು. ಒಂದೊಂದು ಕುದಿಯಲ್ಲೂ ಕತೆಗಳು ಹದವಾಗಿ, ನಂತರ ನಂತರ ಸಮಾಜದ ಉರಿ ಮುಂಕು ಮಾಡಿ ಕೆಂಡದ ಪರಿಮಳದಲ್ಲಿ ರುಚಿಗಟ್ಟುವ ಪದಾತದಂತಾಗಿವೆ.

ಮರಕ್ಕೆ ಸೀಡೆತ್ತಿದೆ, ಅದಕ್ಕತ್ತಿರುವ ಸೀಡೆಯನ್ನು ಕತೆಗಳು ಸೋಸುತ್ತವೆ. ಬಯಲು ಬಟುವಾಳದ ಬೈತಲೆಯಾದಿಯಾಗಿ ಮೈ ತಡವರಸಿ ಇಸ್ರಂಬಾಗಿ ಬೆಳೆದಿರುವ ಸಂಕಲದ ಕತಾವರಣದಲ್ಲಿ ಹಾಳಾಗಿ ಹೋದ ಭೌಗೋಳಿಕ ವಿನ್ಯಾಸವನ್ನು ಹದ ಮಾಡಿಕೊಂಡು ಜೀವಿಸಬೇಕಾದ ದರ್ದನ್ನ ಒತ್ತಿ ಹೇಳತ್ತಾನೆ ಕತೆಗಾರ ಜೀವ ವೈವಿಧ್ಯತೆಯ ಅನುಪಾಲನಾ ದೃಷ್ಟಿಯನ್ನು ಮುಂಗಂಡಂತೆ ಕತೆಗಾರರು ಪಾತ್ರಗಳನ್ನು ಬೆಳೆಸಿಕೊಂಡು ಬಳಸಿಕೊಂಡಿರುವ ಹೆಚ್ಚುಗಾರಿಕೆಯನ್ನೂವೆ ಗಮನಿಸಬಹುದು.

ಮಣ್ಣಿನ ಮುಚ್ಚಳ ಸಮಕಾಲೀನ ಸಂದರ್ಭದಲ್ಲಿ ಒಡೆದ ಬೋಕಿಯ ರಾಶಿಗುಡ್ಡೆ ಸೇರಿದೆ. ಉತ್ರಾಸ ಕದವಿರದೆ ಬೆಳೆದು ನಿಂತಿರುವ ಆ ರಾಶಿಯನ್ನು ಬೆದಕಿ ಮರುಹುಡುಕಾಡ ಮಾಡುವ ದರ್ದಿನ ಕಾಲವಿದು. ತನ್ನ ಹೂ ಮರಿಗಳು ಉಣ್ಣೋ ಕಾಳಿಗಾಗಿ ಇಡೀ ತಿಪ್ಪೆಯನ್ನೇ ಸಿದುಕುವ ತಾಯಿ ಕೋಳಿಯ ಹಾಗೆ. ಬೇಕು ಮಣ್ಣಿನ ಮುಚ್ಚಳ ಪಾಪಾಸದಲ್ಲಿ ನೀರು ಕುಡಿಯುವ ಈ ಕಾಲದಲ್ಲಿ. ತೆರೆದ ಅರವಿಯ ಮುಚ್ಚಲು. ಅದರೊಳಗೆ ಕಲಾಂಶ ಒಕ್ಕಾಡದ ಹಾಗೆ ನಿಯಂತ್ರಿಸುವ ಸಲುವಾಗಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?