ತುರುವೇಕೆರೆ: ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ‍್ವರ ಮಠಕ್ಕೆ ತುರುವೇಕೆರೆ ಮೂಲಕ ಹೋಗುತ್ತಿರುವಾಗ ಭಾನುವಾರ ತಾಲ್ಲೂಕಿನ ಶಾಸಕ ಎಂ.ಟಿ.ಕೃಷ್ಣಪ್ಪ ನೂತನ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೂಗುಚ್ಚ ನೀಡಿ, ಸ್ವಾಗತಿಸಿದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಬಂದ ಡಿಕೆ.ಶಿಕುಮಾರ್ ಅವರು ಜಿಜೆಸಿ ಕ್ರೀಡಾಂಗಣದಲ್ಲಿ ಇಳಿಯುತ್ತಿದ್ದಂತೆ ಶಾಸಕರು ಹೂ ಮಾಲೆ ಹಾಕಿ ಅಭಿನಂಧಿಸಿದರು. ತಕ್ಷಣ ಅದೇ ಹೂ ಮಾಲೆಯನ್ನು ತೆಗೆದು ಡಿ.ಕೆ ಶಿ ಅವರು ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಹಾಕಿದರು.
ನಂತರ ಅಲ್ಲಿಂದ ವಾಹನದಲ್ಲಿ ನೊಣವಿನಕೆರೆ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಡಿ.ಕೆ.ಶಿವಕುಮಾರ್ ಜೊತೆಯಲ್ಲಿ ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ, ಕುಣಿಗಲ್ ಶಾಸಕ ಡಾ. ರಂಗನಾಥ ಜೊತೆಯಲ್ಲಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಭೂವನಹಳ್ಳಿ ದೇವರಾಜ್ ಬಿ.ಎಸ್, ಜಕ್ಕನಹಳ್ಳಿ ಬಾಬು, ಮಂಗಿಕುಪ್ಪೆ ಬಸವರಾಜು, ಕೊಂಡಜ್ಜಿ ಕಿರಣ, ಉಪನ್ಯಾಸಕ ರಾಘು ಉಪಸ್ಥಿತರಿದ್ದರು.
Comment here