ಎಂಥದೇ ಸಂದರ್ಭ ಇರಲಿ, ಎಷ್ಟೇ ಕಷ್ಟ ಇರಲಿ, ಕಡೇ ಪಕ್ಷ ದೂರವಾಣಿಯಲ್ಲಾದರೂ ಸಂಪರ್ಕದಲ್ಲಿದ್ದು ಕೊಂಡೇ ರೋಗಿಗಳೊಂದಿಗೆ ನಿಲ್ಲುವವರು ನಮ್ ಡಾಕ್ಟರ್ ಡಾ. ರಜನಿ ಅವರು.
ವೈದ್ಯರುಗಳು ದೇವರ ಸ್ವರೂಪ ಎಂಬ ಮಾತಿನಲ್ಲಿ ಎರಡು ಮಾತಿಲ್ಲ. ಇವರೆಲ್ಲ ಹಳೇ ಕಾಲದ ವೈದ್ಯರು. ಹೆಸರಾಂತ ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಅವರ ಶಿಷ್ಯೆ. ಒಳ್ಳೆಯ ಕವಿಯತ್ರಿಯೂ ಹೌದು.
ಯಾರೋ ಗೊತ್ತೇ ಇಲ್ಲದ ರೋಗಿಗೆ ಮಧ್ಯರಾತ್ರಿಯಲ್ಲಿ ತುರ್ತು ರಕ್ತ ಬೇಕಾದಾಗ ತಮ್ಮ ರಕ್ತವನ್ನು ಕೊಡುತ್ತಲೇ ಚಿಕಿತ್ಸೆ ನೀಡಿದವರು. ರೋಗಿಯ ಕಾಳಜಿಯೇ ಅವರಿಗೆ ಮುಖ್ಯ. ಮಕ್ಕಳ ಚಿಕಿತ್ಸೆಯಲ್ಲಿ ಅವರದು ಎತ್ತಿದ ಕೈ.
ಕೊರೊನಾ ಕಾಲದಲ್ಲಿ ರೋಗಿಯನ್ನು ಮುಟ್ಟಲು ಎಲ್ಲ ವೈದ್ಯರುಗಳು ಹೆದರುತ್ತಿದ್ದಾಗ ಅವರ ಎದೆಗೆ ಸೆತಾಸ್ಕೋಪ್ ಹಿಡಿದು ಧೈರ್ಯ ತುಂಬಿದವರು.
ಸೋಂಕಿನಿಂದ ಮುಕ್ತರಾದವರು ಸಹ ಅವರ ವೈದ್ಯರುಗಳು ಅವರನ್ನು ಮುಟ್ಟಿನೋಡಲಿಲ್ಲ ಎಂದು ಇವರಲ್ಲಿಗೆ ಬಂದು ಮುಟ್ಟಿಸಿಕೊಂಡು ನಿರಾಳದಾವರನೇಕರು.
ಡಾ. ರಜನಿ ಅವರಿಗೇನೆ ಕೊರೊನಾ ಸೋಂಕು ಬಾಧಿಸಿದಾಗ ಮನೆಯಲ್ಲಿದ್ದುಕೊಂಡೇ ದೂರವಾಣಿ ಮೂಲಕ ಕೆಲ ಸೋಂಕಿತರಿಗೆ ಧೈರ್ಯ, ಚಿಕಿತ್ಸೆ ನೀಡಿದರು.
ವೇದಿಕೆ ಯಾವುದಾದರೂ ಸರಿಯೇ, ಸರಿ ದಾರಿಯಲ್ಲೇ ಸಾಗುವ, ಎಂಥವರಾದರೂ ಸರಿಯೇ ತಪ್ಪು ಮಾಡಿದ್ದರೆ ಮುಖಕ್ಕೆ ನೇರವಾಗಿ ಮಾತನಾಡುವ ಚಾತಿ ಅವರದು.
ಮಂಡ್ಯದ ಗುಣ ನಮ್ಮದು ಎಂದು ನಿರ್ಭಿಡೆಯಿಂದ ಹೇಳುವ ಅವರಿಗೆ ಅವರ ಭಾಷಣ, ಮಾತಿನಿಂದಾಗಿಯೇ ನೂರಾರು ಮಹಿಳಾ ಅಭಿಮಾನಿಗಳನ್ನು ಸಂಪಾದನೆ ಆಗಿದ್ದಾರೆ.
ರಾತ್ರಿ ಹತ್ತಾದರೂ ಸರಿಯೇ ಡಾ. ರಜನಿ ಅವರೇ ಚಿಕಿತ್ಸೆ ನೀಡಬೇಕು ಎಂದು ಕಾಯುವವರೇ ಹೆಚ್ಚು. ಹಳ್ಳಿ ಜನರ ಪ್ರೀತಿಯ ವೈದ್ಯೆ ಡಾ. ರಜನಿ ಅವರಿಗೆ ವೈದ್ಯರ ದಿನಾಚಣೆಯ ಶುಭಾಷಯಗಳು ಮೇಡಂ.
-ಸಿ.ಕೆ.ಮಹೇಂದ್ರ