Monday, December 9, 2024
Google search engine
Homeತುಮಕೂರು ಲೈವ್ತುರುವೇಕೆರೆಗೆ ಬಂತು ₹1 ಕೋಟಿ ವೆಚ್ಚದ ಆಕ್ಸಿಜನ್ ಪ್ಲಾಂಟ್

ತುರುವೇಕೆರೆಗೆ ಬಂತು ₹1 ಕೋಟಿ ವೆಚ್ಚದ ಆಕ್ಸಿಜನ್ ಪ್ಲಾಂಟ್

Publicstory


ತುರುವೇಕೆರೆ:

ತಾಲ್ಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪಣ ತೊಟ್ಟಿರುವ ಶಾಸಕ ಮಸಾಲ ಜಯರಾಮ್ ಅವರು ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಒಂದು ಕೋಟಿ ವೆಚ್ಚ ರೂಪಾಯಿಯ ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದರು.

ತಾಲ್ಲೂಕಿನ ಅಮ್ಮಸಂದ್ರದ ಹೈಡಲ್ ಬರ್ಗ್ಸಿಮೆಂಟ್ ಕಾರ್ಖಾನೆಯ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸುತ್ತಿರುವ ಆಮ್ಲಜನಕ ಪ್ಲ್ಯಾಂಟ್ ಆದೇಶ ಪತ್ರವನ್ನು ಕಂಪನಿಯ ಅಧಿಕಾರಿಗಳಿಂದ ಶಾಸಕರು ಸ್ವೀಕರಿಸಿ ಮಾತನಾಡಿದರು.

ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರ ಜೊತೆಯಲ್ಲಿ ಶಾಸಕರಾದ ಮಸಾಲ ಜಯರಾಮ್ ಅವರು ಚರ್ಚಿಸಿದಂತೆ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ, ಹೈಡಲ್ ಬರ್ಗ್ ಸಿಮೆಂಟ್ ಕಂಪನಿಯ ನೆರವಿನೊಂದಿಗೆ ಸಾರ್ವಜನಿಕ ಅಸ್ವತ್ರೆಗೆ ಹೊಸದಾಗಿ ಸುಮಾರು 60 ಬೆಡ್ ಗಳಿಗೆ ಅನುಕೂಲವಾಗುವಂತೆ ಸುಮಾರು 1ಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ಆಕ್ಸಿಜನ್ ಕಲ್ಪಿಸುವ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಸುಮಾರು 8 ವಾರಗಳ ಒಳಗೆ ಕಾಮಗಾರಿಯನ್ನು ಮುಗಿಸಿ ಕೊಡುವುದಾಗಿ ಕಂಪನಿಯವರು ತಿಳಿಸಿದ್ದಾರೆ.
ತಾಲ್ಲೂಕು ಆಡಳಿತ, ವೈದ್ಯಾಧಿಕಾರಿಗಳು, ದಾದಿಯರು ಮೊದಲಾದ ಕೊರೊನಾ ವಾರಿಯರ್ಸ್ಗಳ ಸತತ ಶ್ರಮದಿಂದ ತಾಲ್ಲೂಕಿನಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು

ತಾಲ್ಲೂಕಿನಲ್ಲಿ ಆಮ್ಲಜನಕದ ಸಮಸ್ಯೆ ಏನೂ ಇಲ್ಲ ಆದರೂ ಮುಜಾಗೃತೆಯಾಗಿ ಆಮ್ಲಜನಕ ಘಟಕ ಆರಂಭಿಸಲಾಗುತ್ತಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಬೆಡ್ಗಳನ್ನು ಇನ್ನೂ ಹೆಚ್ಚಿಸಬೇಕಾಗಿದೆ. ಕೋವಿಡ್ 19ರ 3ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಈಗಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇನ್ನು 2 ತಿಂಗಳಲ್ಲಿ ಆಮ್ಲಜನಕದ ಕೊರತೆ ನೀಗಲಿದೆ. ಏಕಕಾಲದಲ್ಲಿ ಸು. 40 ಕೋವಿಡ್ ರೋಗಿಗಳಿಗೆ ಆಮ್ಲಜನಕ ನೀಡಬಹುದಾಗಿದೆ ಎಂದು ಹೇಳಿದರು.

ಇದೇ ರೀತಿ ಆರ್ಟ್ ಆಫ್ ಲೀವಿಂಗ್ ಕಂಪನಿಗೂ ಪತ್ರ ಬರೆಯಲಾಗಿದ್ದು ಇವುಗಳ ಜೊತೆಗೆ ಇನ್ನೂ ಅನೇಕ ದೊಡ್ಡ ಕಂಪನಿಗಳನ್ನು ಭೇಟಿ ಮಾಡಿದ್ದು ಬೆಡ್ ವ್ಯವಸ್ಥೆ ಸೇರಿದಂತೆ ಹಲವಾರ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಆಮ್ಲಜನಕ ಪ್ಲಾಂಟ್ ಸ್ಥಾಪನೆ ಮಾಡಲು ಸಹಕಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಹೈಡಲ್ ಬರ್ಗ್ ಕಂಪನಿಯವರಿಗೂ ತಾಲ್ಲೂಕಿನ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಮೂರ್ತಿ, ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆ ಎಚ್.ಆರ್.ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸುಪ್ರಿಯಾ, ಡಾ.ನವೀನ್, ಡಾ.ಪವನ್ಕುಮಾರ್.ಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್ ಕುಮಾರ್, ಸದಸ್ಯರಾದ ಚಿದಾನಂದ್, ಮುಖಂಡರಾದ ದುಂಡಾರೇಣುಕಪ್ಪ, ಯೋಗಾನಂದ್, ಚಂದ್ರಣ್ಣ, ವಿ.ಬಿ.ಸುರೇಶ್, ಸೋಮಶೇಖರ್, ಜಯರಾಮ್, ದಿನೇಶ್, ಸುರೇಶ್ ಆಸ್ಪತ್ರೆ ಸಿಬ್ಬಂದಿ ಬೋರೇಗೌಡ ಸೇರಿದಂತೆ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?