Wednesday, November 13, 2024
Google search engine
Homegovernanceಕಾಯಕದಲ್ಲಿ ಶ್ರೇಷ್ಠ-ಕನಿಷ್ಠ ಎಂಬುದಿಲ್ಲ : ಜಿಲ್ಲಾಧಿಕಾರಿ ವೈಎಸ್ ಪಾಟೀಲ

ಕಾಯಕದಲ್ಲಿ ಶ್ರೇಷ್ಠ-ಕನಿಷ್ಠ ಎಂಬುದಿಲ್ಲ : ಜಿಲ್ಲಾಧಿಕಾರಿ ವೈಎಸ್ ಪಾಟೀಲ

Publicstory/prajayoga

ತುಮಕೂರು: ಕೆಲಸದಲ್ಲಿ ಯಾವುದು ಹೆಚ್ಚಿಲ್ಲ, ಕಡಿಮೆಯೂ ಇಲ್ಲ. ಯಾವುದೇ ಕೆಲಸ, ಹುದ್ದೆಯಾದರೂ ಶಿಸ್ತಿನಿಂದ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸಲಹೆ ನೀಡಿದರು.

ಕರ್ನಾಟಕ ಸರ್ಕಾರ ವಾಹನ ಚಾಲಕರ ಸಂಘದ ನೂತನ ಅತಿಥಿಗೃಹ ಮತ್ತು ನವೀಕೃತ ಸಭಾಂಗಣ ಉದ್ಘಾಟನೆ ಹಾಗೂ ನಿವೃತ್ತ ಚಾಲಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಚಾಲಕರು ಅಧಿಕಾರಿಗಳ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ವೈಯಕ್ತಿಕವಾಗಿ ಇರುವ ಬಾಂಧವ್ಯ ವೃದ್ಧಿಯಾಗಬೇಕು ಎಂದರು.

ಹುದ್ದೆಯಾವುದಾದರೂ ಅವರಿಗೆ ಗೌರವ ಸಲ್ಲಿಸಬೇಕು ಎನ್ನುವುದು ಬಸವಣ್ಣ ನವರ ಕಾಯಕತತ್ವದ ಕಲ್ಪನೆ.
ಸಂಘ,ಸಂಘಟನೆಗಳು ತಮ್ಮ ಧ್ಯೇಯೋದ್ದೇಶವನ್ನು ಈಡೇರಿಸಿಕೊಳ್ಳಬೇಕು. ಕಟ್ಟ ಕಡೆಯ ಚಾಲಕನಿಗೂ ಸೌಲಭ್ಯ ದೊರೆಯು ವಂತಾಗಬೇಕು ಎಂದರು. ಮಹಾಭಾರತದಲ್ಲಿ ಶ್ರೀಕೃಷ್ಣರು ಸಾರಥಿಯಾಗಿದ್ದರು. ಇದು ಅಧಿಕಾರಿಗಳಿಗೆ ಚಾಲಕರು ಸಾರಥಿ ಯಾಗಿದ್ದಾರೆ. ಅಂತಹ ಮಹತ್ವದ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಬೇಕು. ಚಾಲಕರು ಅಡ್ಡದಾರಿ ಹಿಡಿಯದಂತೆ ಜೀವನ ನಡೆಸಬೇಕು. ಅದಕ್ಕೆ ಪೂರಕವಾಗಿ ಸಂಘಟನೆ ಕೆಲಸ ಮಾಡಬೇಕು. ಸಂಘಟನೆಯ ಮೂಲಕ ಒಳಿತನ್ನು ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಅಧಿಕಾರಿಗಳು ಮತ್ತು ಚಾಲಕರು ಒಂದೇ ಕುಟುಂಬದವರು ಎನ್ನುವ ಭಾವನೆ ಇರಬೇಕು. ಕುಟುಂಬದ ರಹಸ್ಯವನ್ನು ಹೊರಗೆ ಹೇಳಬಾರದು. ಚಾಲಕರಿಗೆ ಮಾತಿಗಿಂತ ಕಿವಿ ಚುರುಕಾಗಿರಬೇಕು. ಶಿಸ್ತು ಮತ್ತು ಜಾಗರೂಕತೆ ಚಾಲಕರಿಗೆ ಅವಶ್ಯಕವಿದೆ. ನಡೆದಾಡುವ ದೇವರಾದ ಡಾ.ಶಿವಕುಮಾರ ಸ್ವಾಮೀಜಿಗಳನ್ನು ನೋಡಿರುವ ನಾವೆಲ್ಲರೂ ಅವರ ಮಾದರಿಗಳನ್ನು ಅನುಸರಿಸುವ ಮೂಲಕ ಜಿಲ್ಲೆಯ ಹೆಸರನ್ನು ಉಳಿಸಬೇಕಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಮಾತನಾಡಿ, ಚಾಲಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ನಿವೃತ್ತರಾದ ನಂತರ ಸಾಕಷ್ಟು ಚಾಲಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆರೋಗ್ಯಯುತವಾಗಿರಲು ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತಿ ಸಿಇಒ ಡಾ.ವಿದ್ಯಾಕುಮಾರಿ ಮಾತನಾಡಿ, ಸಾಹಸಿ ಪ್ರವೃತ್ತಿಯಿಂದ ಸಾಧನೆ ಮಾಡಬಹುದು. ಅದಕ್ಕಿಂತ ಹೆಚ್ಚಿನ ಸಾಹಸ ಚಾಲಕರದ್ದು, ಶಿಸ್ತಿನಿಂದ ಅಧಿಕಾರಿಗಳ ರಕ್ಷಣೆ ಮಾಡುವ ಚಾಲಕವೃಂದದವರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸಬೇಕು. ಸಾರ್ವಜನಿಕ ಜೀವನದಲ್ಲಿರುವವರಿಗೆ ಖಾಸಗಿ ಜೀವನವೂ ಮುಖ್ಯ. ಸಾರ್ವಜನಿಕ ಜೀವನಕ್ಕೆ ಒತ್ತು ನೀಡಿ. ಕುಟುಂಬಕ್ಕೆ ಸಮಯ ನೀಡದೇ ಇರುವುದು ಸರಿಯಲ್ಲ. ಅವರಿಗೆ ಸಮಯವನ್ನು ನೀಡುವ ಮೂಲಕ ಕುಟುಂಬವನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶ್ರಮಕ್ಕೆ ಗೌರವವಿದೆ, ನಿಷ್ಠೆಯಿಂದ ಕೆಲಸ ಮಾಡುವವರಿಗೆ ಗೌರವ ಸಲ್ಲುತ್ತದೆ. ಚಾಲಕರು ಕೇವಲ ವಾಹನ ಚಲಾಯಿಸುವುದಿಲ್ಲ. ವಾಹನದಲ್ಲಿ ಕುಳಿತವರ ಜೀವ, ಜೀವನವನ್ನು ಚಲಾಯಿಸುತ್ತಾರೆ, ರಕ್ಷಿಸುತ್ತಾರೆ. ಇಂತಹವರಿಗೆ ಗೌರವ ಸಲ್ಲಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಒಟ್ಟಾಗಿ ಬಂದಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಜಯರಾಮ್, ಸರಕಾರದ ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ಹಾಲೇಶ್, ಸಂಘದ ಜಿಲ್ಲಾಘಟಕದ ಅಧ್ಯಕ್ಷ ಜಯರಾಮಯ್ಯ,ಕಾರ್ಯದರ್ಶಿ ಬಿ.ಜಿ.ಪುಟ್ಟರಾಜು,ಎನ್.ರಂಗಪ್ಪ, ಪ್ರಚಾರ ಸಮಿತಿಯ ಶ್ರೀಧರ್, ಕಾರ್ಯಾಧ್ಯಕ್ಷ ಯೋಗೀಶ್, ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ, ಜಂಟಿ ಕಾರ್ಯದರ್ಶಿ ಕೆಂಪೇಗೌಡ, ಮಲ್ಲೇಶ್ ಕುಮಾರ್,  ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಚಾಲಕರಾದ ಬಸವರಾಜು, ಜ್ಞಾನೇಶ್, ಆವಲಪ್ಪ, ಆಜೀಜ್, ಮಲ್ಲಪ್ಪ, ನಾಗರಾಜು, ಈರಣ್ಣ, ಶ್ರೀನಿವಾಸ್, ಪರಮೇಶ್ವರಪ್ಪ ಸೇರಿದಂತೆ ನಿವೃತ್ತರಾದವರನ್ನು ಸನ್ಮಾನಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?