Tuesday, September 10, 2024
Google search engine
Homeಪೊಲಿಟಿಕಲ್ಅಹಿಂದ ಚೈತನ್ಯ ಸಿದ್ದರಾಮಯ್ಯ ಧನಿಯಾಕುಮಾರ್

ಅಹಿಂದ ಚೈತನ್ಯ ಸಿದ್ದರಾಮಯ್ಯ ಧನಿಯಾಕುಮಾರ್

ಗುಬ್ಬಿ: ಅನ್ನಭಾಗ್ಯ ಯೋಜನೆ ಮೂಲಕ ಬಡವರು, ದೀನ ದಲಿತರ ಪರ ನಿಂತ ಸಿದ್ದರಾಮಯ್ಯ ಅವರು ಓರ್ವ ವ್ಯಕ್ತಿ ಅಲ್ಲ, ಅಹಿಂದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಸರಳತೆಯ ಅವರ 75 ನೇ ಜನಮ ದಿನವನ್ನು ಅದ್ದೂರಿಯಾಗಿ ಸಿದ್ದರಾಮತ್ಸೋವ ಕಾರ್ಯಕ್ರಮವನ್ನು ಆಗಸ್ಟ್ ಮಾಹೆ 3 ನೇ ತಾರೀಖು ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಧನಿಯಾಕುಮಾರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಾವಣಗೆರೆಯಲ್ಲಿ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಸಿದ್ದರಾಮೋತ್ಸವ ಕಾರ್ಯಕ್ರಮ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನಡೆಯಲಿದೆ. ಇದಕ್ಕೆ ಸಲ್ಲದ ರಾಜಕಾರಣ ಲೇಪನ ಬೇಕಿಲ್ಲ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಈ ಹಿಂದೆ ದುಡಿದ ದೇವರಾಜು ಅರಸು ನಂತರ ಸಿದ್ದರಾಮಯ್ಯ ಅವರ ಶ್ರಮ ಎಲ್ಲರೂ ಒಪ್ಪಲೇಬೇಕು. ಪ್ರಜಾಪ್ರಭುತ್ವ ಯಥಾವತ್ತಾಗಿ ಜಾರಿಗೊಳಿಸಲು ಇಂತಹ ಧೀಮಂತ ನಾಯಕರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಎಲ್ಲಾ ಅಹಿಂದ ಮುಖಂಡರು ಒಗ್ಗೂಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದ ಅವರು ಸಿದ್ದರಾಮಯ್ಯ ಅವರ ಆಡಳಿತದ ಸುಧಾರಣೆ ಗಮನಿಸಿದರೆ ಪಕ್ಷಾತೀತ ಹೊಗಳಿಕೆಗೆ ಅರ್ಹರು ಎಂಬುದು ತಿಳಿದ ವಿಚಾರ. ಆಗಸ್ಟ್ 3 ರಂದು ಸುಮಾರು 8 ಲಕ್ಷ ಮಂದಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ನಡೆಸಿ ಅಹಿಂದ ಸಂಘಟನೆಗೆ ಒತ್ತು ನೀಡಿ ಈ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಲು ಮನವಿ ಮಾಡಲಾಗುತ್ತಿದೆ ಎಂದರು.

ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ ಮಾತನಾಡಿ ಒಂದು ಪಕ್ಷಕ್ಕೆ ಧೀಮಂತ ಎನಿಸಿಕೊಳ್ಳದೆ ಉತ್ತಮ ಅಹಿಂದ ನಾಯಕರಾಗಿ ರಾಜ್ಯದಲ್ಲಿ ಗುರುತಿಸಿಕೊಂಡು ಕೇಂದ್ರ ಮಟ್ಟದಲ್ಲೂ ವೈಶಿಷ್ಟ್ಯ ಛಾಪು ಮೂಡಿಸಿದ ಸಿದ್ದರಾಮಯ್ಯ ಅವರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಲು ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ಅಹಿಂದ ಮುಖಂಡರು ಸಿದ್ಧರಿದ್ದಾರೆ. ಇಡೀ ಕಾರ್ಯಕ್ರಮ ಪಕ್ಷಾತೀತವಾಗಿ ಬಿಂಬಿತವಾಗಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ತೆರಳಲಿದ್ದಾರೆ. ಹಾಗೆಯೇ ಗುಬ್ಬಿ ತಾಲ್ಲೂಕಿನಲ್ಲೂ ಅವರ ಅಭಿಮಾನಿಗಳು 40 ಕ್ಕೂಅಧಿಕ ಬಸ್ಸಿನಲ್ಲಿ ದಾವಣಗೆರೆಗೆ ಹೊರಡಲಿದ್ದಾರೆ. ಈ ಜೊತೆಗೆ ಅಭಿಮಾನಿಗಳು ಅವರ ಖಾಸಗಿ ವಾಹನದಲ್ಲೂ ಸಾವಿರಾರು ಸಂಖ್ಯೆಯಲ್ಲಿ ತೆರಳಿ ಕಾರ್ಯಕ್ರಮ ಯಶಸ್ವಿಗೊಳಿಸಲಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಟಿ.ಆರ್. ಚಿಕ್ಕರಂಗಯ್ಯ ಮಾತನಾಡಿ ಕಾಂಗ್ರೆಸ್ ಪಕ್ಷ ಹೊರತಾಗಿ ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ಇದ್ದಾರೆ. ಹಾಗಾಗಿ ಶೋಷಿತರ ಸಿದ್ದರಾಮೋತ್ಸವಕ್ಕೆ ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರು ಹಾಗೂ ದಲಿತರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಅವರ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಅವರ ಜನ್ಮ ಉತ್ಸವ ಅವರ ಅಭಿಮಾನಿಗಳು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಕಾಂಗ್ರೆಸ್ ಮಹಿಳಾ ಘಟಕದ ಸೌಭಾಗ್ಯಮ್ಮ ಮಾತನಾಡಿ ಮಹಿಳಾ ಸಬಲೀಕರಣಕ್ಕೆ ಮೊದಲು ಚೈತನ್ಯ ತುಂಬಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಹಿಳಾ ಶಕ್ತಿಯನ್ನು ದೇಶಕ್ಕೆ ಪರಿಚಯಿಸಿದರು. ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಬಲತೆ ತುಂಬಿದ್ದ ಅವರು ಉತ್ತಮ ಆರ್ಥಿಕ ತಜ್ಞ. ಅವರ ಜನ್ಮ ದಿನ ನಿಜಕ್ಕೂ ಅರ್ಥಪೂರ್ಣವಾಗಲಿದೆ ಎಂದರು.

ಈ ಸಂದರ್ಭದಲ್ಲಿ ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಹಿಂದುಳಿದ ವರ್ಗಗಳ ಒಕ್ಕೂಟದ ಕೆಂಪರಾಜು, ಕುರುಬರ ಸಂಘದ ಎಸ್. ರಂಗನಾಥ್, ನಿಂಗರಾಜು, ಮುಖಂಡರಾದ ಸುರೇಶ್, ಪುರುಷೋತ್ತಮ್, ಶ್ರೀನಿವಾಸ್, ಭರತ್ ಗೌಡ, ಎಮ್ಮೆದೊಡ್ಡಿ ಜಯಣ್ಣ, ಜಿ.ವಿ.ಮಂಜುನಾಥ್, ಸಲಿಂಪಾಶ, ಜಿ.ಎಂ.ಶಿವಾನಂದ್, ತ್ಯಾಗಟೂರು ವಸಂತಮ್ಮ ಸೇರಿದಂತೆ ಇನ್ನಿತರ ಹಿಂದುಳಿದ ವರ್ಗಗಳ ಮುಖಂಡರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?