ಈ ಕವಿತೆ ಈಚೆಗಷ್ಟೇ ನಿಧರಾದ ಲತಾ ಕುಲಕರ್ಣಿ ಅವರ ನೆನಪಿಗಾಗಿ ಕವಯತ್ರಿ ಡಾ. ರಜನಿ ಎಂ ಅವರು ಬರೆದಿರುವುದು. ಸಣ್ಣ ಸೂಜಿ ಹೆಸರಿನಲ್ಲೇ ಒಂದು ಕವನ ಬಂದಿದೆ. ಅದನ್ನು ಬರೆದಿದ್ದು ವೈದ್ಯಕೀಯ ಇಲಾಖೆಯಲ್ಲಿ ಜನಪ್ರಿಯರಾಗಿದ್ದ, ಚುಟುಕು ಸಾಹಿತಿಯೂ ಆಗಿದ್ದ ಲತಾ ಅವರ ಪತಿ ಕುಲಕರ್ಣಿ ಅವರು. ಕುಲಕರ್ಣಿ ಅವರು ತಮ್ಮ ಪ್ರೀತಿಯ ಪತಿ ಲತಾ ಅವರನ್ನು ಕುರಿತು ಬಹಳ ಹಿಂದೆ ಸಣ್ಣ ಸೂಜಿ ಕವಿತೆ ಬರೆದು, ಅದಕ್ಕೆ ಪ್ರಶಸ್ತಿಗಳು ಬಂದವು. ಆ ಕಾಲದಲ್ಲಿ ತುಂಬಾನೆ ಪಾಪ್ಯುಲರ್ ಆದ ಕವಿತೆ.
ಇನ್ನೂ ಡಾ. ರಜನಿ ಅವರು ಕುಲಕರ್ಣಿ ಅವರ ಸಹದ್ಯೋಗಿ. ಲತಾ ಅವರು ನಿಧನರಾದ ಹಿನ್ನೆಲೆಯಲ್ಲಿ ಸಣ್ಣ ಸೂಜಿ ಹೆಸರಿನಲ್ಲೇ ಕವಿತೆ ಬರೆಯುವ ಮೂಲಕ ನುಡಿನಮನ ಸಲ್ಲಿಸಿದ್ದಾರೆ.
ಸಣ್ಣ ಸೂಜಿ
*********
ಆಗಿಹಳು
ತಣ್ಣಗೆ
ತುಂಟ ನಗುವಿಲ್ಲ
ಛೇಡಿಕೆ ಇಲ್ಲ
ಬೇಗ ಹೋದಳೇನೋ
ಮುನಿಸಿ ಕೊಂಡು…
ಉಹೂ …..
ಹುಸಿಮುನಿಸು
ಇರಬೇಕು
ಹೊಲಿದದ್ದು ಸಾಕು
ಅನಿಸಿರಬೇಕು
ಕತ್ತರಿಸಿಕೊಂಡು
ಬಂಧನಗಳ
ಮಡಚಬೇಡ ಬಟ್ಟೆ
ಹಾಗೆ …ಹೀಗೆ…
ಕಾದಿಹಳು ಅಲ್ಲಿಂದಲೇ
ತನ್ನ ಸೂಜಿಗಣ್ಣಿಂದ…
ಅಗೋ
ಮುಡಿದು
ಸೂಜಿಮಲ್ಲಿಗೆ.
ಮೊದಲ ಚಿತ್ರದಲ್ಲಿ ಕುಲಕರ್ಣಿ ಅವರ ಸಣ್ಣ ಸೂಜಿ ಕವಿತೆ ಓದಬಹುದು.
ಎರಡನೇ ಚಿತ್ರದಲ್ಲಿರುವರು ಡಾ.ರಜನಿ
Madam ನೀವು ನನ್ನ ಅಮ್ಮ ನವರ ಬಗ್ಗೆ ಬರೆದ ಕವನ ನುಡಿ ನಮನ ತುಂಬಾ ಅರ್ಥಪೂರ್ಣ ಹಾಗೂ ಭಾವಪೂರ್ಣ ವಾಗಿ ಮೂಡಿ ಬಂದಿದೆ.
ಧನ್ಯವಾದಗಳು.
ಸ್ಮಿತ ಜಿ ಕುಲಕರ್ಣಿ