Tuesday, December 3, 2024
Google search engine
HomeUncategorizedಸುರೇಶಗೌಡರ ಭಾವನಾತ್ಮಕ ಮಾತು

ಸುರೇಶಗೌಡರ ಭಾವನಾತ್ಮಕ ಮಾತು

ತುಮಕೂರು: ಕ್ಷೇತ್ರದಲ್ಲಿ ಸಮಬಾಳ್ವೆ, ಸಾಮರಸ್ಯದ ಬದುಕು ಹಾಗೂ ಇಡೀ ದೇಶವೇ ತಿರುಗಿ ನೋಡುವಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ಮುಂದಿನ ಐದು ವರ್ಷಗಳ ಕಾಲದ ನಮ್ಮ ಗುರಿಯಾಗಿರಬೇಕು ಎಂದು ಶಾಸಕ ಬಿ.ಸುರೇಶಗೌಡರು ಹೇಳಿದರು.

ತುಮಕೂರು ತಾಲ್ಲೂಕು ಪಂಚಾಯತಿ
ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿದರು.

ನಾನು ಮಾಡಿದ ಅಭಿವೃದ್ಧಿಗಾಗಿ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ನಂಬಿಕೆ ಹುಸಿಗೊಳಿಸದಂತೆ ಕೆಲಸ ಮಾಡಬೇಕಾಗಿದೆ ಎಂದು ಭಾವನಾತ್ಮಕ ಗೊಂಡರು.

ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಗಲಾಟೆ, ಗೋಜಿಗೆ ಹೋಗಬಾರದು. ಪ್ರತಿಯೊಬ್ಬರು ಸಹೋದರರಂತೆ ಇರಬೇಕು. ಈ ಕ್ಷೇತ್ರದ ಪ್ರತಿ ಮನೆಯ ಮಗ ನಾನು. ನಾನು ಎಲ್ಲರಿಗಾಗಿಯೂ ಕೆಲಸ ಮಾಡುವೆ. ಕಾಂಗ್ರೆಸ್, ಜೆಡಿಎಸ್ ನ ಸಾವಿರಾರು ಕಾರ್ಯಕರ್ತರೂ ಸಹ ನನಗೆ ಮತ ಹಾಕಿದ್ದಾರೆ. ನಿಮಗೆ ದುಃಖ, ನೋವು, ಸಮಸ್ಯೆ ಇದ್ದರೆ ನೇರ ನನ್ನಲ್ಲಿಗೆ ಬಂದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದರು.

ಪ್ರತಿ ಸಮಸ್ಯೆ, ಪ್ರತಿ ಗಲಾಟೆಗೂ ರಾಜಕೀಯ ಬಣ್ಣ, ದ್ವೇಷ ಬಳಿಯುವ ಕೆಲಸವನ್ನು ಕೆಲವರು ಮಾಡಿಸುತ್ತಾರೆ. ಅದನ್ನು ಯಾರೂ ನಂಬಬಾರದು, ಕಿವಿಗೊಡಬಾರದು. ಎಲ್ಲ ಪಕ್ಷದ ಕಾರ್ಯಕರ್ತರು ನನ್ನಲ್ಲಿ ಬರಬಹುದು. ನಾನೀನ ಎಲ್ಲರ ಶಾಸಕ. ನಿಮ್ಮ ಕಷ್ಟಗಳನ್ನು ಬಗೆಹರಿಸುವುದೇ ನನ್ನ ಗುರಿಯಾಗಿದೆ ಎಂದರು.

ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಾನು ಮಾಡಿದ ಕೆಲಸಗಳನ್ನು ಕಳೆದ ಐದು ವರ್ಷಗಳಲ್ಲಿ ಮಾಜಿ ಶಾಸಕರು ಹಾಳು ಮಾಡಿದರು. ಇದರಿಂದ ಎಲ್ಲ ಪಕ್ಷಗಳ ಕಾರ್ಯಕರ್ತರೂ, ಮುಗ್ದ ಜನರು ನಲುಗುವಂತಾಯಿತು ಎಂದು ಬಾವುಕರಾದರು.

ಕ್ಷೇತ್ರದ ಅಂರ್ಜಲದಲ್ಲಿ ಅರ್ಸೆನಿಕ್, ಫ್ಲೋರೈಡ್
ಬೆರೆತಿದೆ ಎಂಬ ಕಾರಣಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಾಡಿದ್ದೆ. ಆದರೆ ಅದನ್ನು ರಾಜಕೀಯ ಕಾರಣಕ್ಕಾಗಿ ಹಾಳು ಮಾಡಿದ್ದರು. ಹೀಗಾಗಿ ನನ್ನ ಕ್ಷೇತ್ರದ ಜನರು ರಾಸಾಯನಿಕ ಬೆರೆತ ನೀರು ಕುಡಿದು ಆರೋಗ್ಯ ಹಾಳು ಮಾಡಿಕೊಂಡರು. ಮಕ್ಕಳ ಬೆಳವಣಿಗೆ ಕುಂಠಿತವಾಯಿತು. ಹೀಗಾಗಿಯೇ ನಾನು ಗೆದ್ದ ತಕ್ಷಣವೇ ಕುಡಿಯುವ ನೀರು ಸರಿಪಡಿಸಲು ಮುಂದಾದೆ ಎಂದು ಹೇಳಿದರು.

ನನ್ನ ಕ್ಷೇತ್ರದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಇದಕ್ಕಾಗಿ ನಾವೆಲ್ಲರೂ ಸೇರಿ ದುಡಿಯೋಣ ಎಂದು ಕರೆಕೊಟ್ಟರು.

ಜನರ ಕಷ್ಟ ಕಂಡಾಗ ನನಗೆ ಯಾವುದೇ ಪಕ್ಷ ನೆನಪಿಗೆ ಬರುವುದಿಲ್ಲ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ಎಲ್ಲ ನಾಯಕರು ಬಡವರ ಸೇವೆಯಲ್ಲಿ ತಾರತಮ್ಯ ಮಾಡಬಾರದು ಎಂದೇ ಹೇಳಿದ್ದಾರೆ. ಹೀಗಾಗಿ ಕ್ಷೇತ್ರದ ಎಲ್ಲಾ ಬಡವರು, ನೊಂದವರ ಸೇವಕ ನಾನು. ದಿನಪೂರಾ ನಿಮಗಾಗಿ ಕೆಲಸ ಮಾಡುತ್ತೇನೆ. ಯಾರಿಗೂ ಭಯ, ಅಪನಂಬಿಕೆ ಬೇಡ. ಕಷ್ಟದಲ್ಲಿರುವ ಎಲ್ಲರಿಗೂ ನನ್ನ ಮನೆ, ನನ್ನ ಕಚೇರಿಯ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದರು.

ಅದ್ವಾನವಾಗಿರುವ ಕ್ಷೇತ್ರವನ್ನು ಆರಂಭದಲ್ಲಿ ಸರಿ ದಾರಿಗೆ ತರಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಯಾರಿಗೆ ನೋವಾದರೂ ಅದನ್ನು ಕ್ಷೇತ್ರಕ್ಕಾಗಿ ಸಹಿಸಿಕೊಳ್ಳಿ. ಸುಧಾರಣೆಯ ಹಾದಿಗೆ ಮುಳ್ಳು ಹಾಕಲು ರಾಜಕೀಯ ಬಣ್ಣ ಬಳಿಯುವವರಿಗೆ ಜನರೇ ಉತ್ತರಿಸಬೇಕು. ಆಹಾರ ಆಗಬಾರದು ಎಂದರು.

ನನ್ನ ಜೀವಾಳವಾಗಿರುವ ನನ್ನ ಪಕ್ಷದ ಸಾಮಾನ್ಯ ಕಾರ್ಯಕರ್ತನೇ ನನಗೆ ದೊಡ್ಡ ಕಾರ್ಯಕರ್ತರು. ಇವರುಗಳು ಯಾವುದೇ ಕಾರಣಕ್ಕೂ ವೈಷಮ್ಯ, ರಾಜಕೀಯ ಒಳಸುಳಿಗೆ ಒಲಿಯಾಗಬಾರದು. ಗ್ರಾಮಗಳಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಯಾರೇ ಕಷ್ಷದಲ್ಲಿರೂ ಅವರಿಗೆ ಕೈ ಚಾಚಿ ಅನುಕೂಲ ಮಾಡಿಕೊಡಬೇಕು. ನಿಮ್ಮ ನಿಮ್ಮ ಸಂಬಂಧಿಕರು, ಹಿರಿಯರ ಮುಂದಾಳತ್ವದಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಅನಿವಾರ್ಯವಾದಲ್ಲಿ ಮಾತ್ರ ನ್ಯಾಯಾಲಯಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ. ಹೊಡೆದಾಟ, ಪರಸ್ಪರ ಆರೋಪಗಳ ಮೂಲಕ ನಿಮ್ಮ ಸಮಯ, ಮನಶಾಂತಿಯನ್ನು ಹಾಳು ಮಾಡಿಕೊಳ್ಳಬಾರದು ಎಂದು ಬುದ್ದಿವಾದ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಡಿ.ಎನ್. ಶಂಕರ್, ವಿಜಯಕುಮಾರ್, ಜಯಂತ್ ಗೌಡ, ಮೈದಾಳ ಮಂಜುನಾಥ್,ವೆಂಕಟೇಶ್, ರಮೇಶ್,ರಾಮಚಂದ್ರಯ್ಯ,ಶಿವಕುಮಾರ್, ವೈಟಿ ನಾಗರಾಜ್, ಮದನ್, ರೇಣುಕಮ್ಮ,ರಾಜಶೇಖರ್, ಮಾಯರಂಗಯ್ಯ, ರಗುನಾಥಪ್ಪ ಮತ್ತಿತರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?