ತುರುವೇಕೆರೆ: 2023-24 ನೇ ಸಾಲಿನ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.7ರಂದು ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಡಿ.ಕೆ.ನಾಗರಾಜು ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷವೂ ಸಹಾ ಜಿ.ಸಿ.ಶ್ರೀನಿವಾಸ್ ಅವರ ಅಧ್ಯಕ್ಷರ ನೇತೃತ್ವದಲ್ಲಿ ನಮ್ಮ ಸಂಸ್ಥೆ ನೂರಾರು ವಿವಿಧ ಸೇವಾ ಚಟುವಟಿಕೆ ಗಳನ್ನು ನಡೆಸಿ ಉತ್ತಮ ಪ್ರಶಸ್ತಿಯನ್ನೂ ಸಹಾ ಪಡೆದುಕೊಂಡಿದೆ ಎಂದರು.
2023-24 ರ ಅವಧಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲೋಕೇಶ್ ಮಾತನಾಡಿ, ನನ್ನ ಪ್ರಸಕ್ತ ಅವಧಿಯಲ್ಲಿ ಪ್ರತಿ ತಿಂಗಳು ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಜೊತೆಗೆ ಗಿಡಗಳನ್ನು ನೆಡುವುದು, ಶೈಕ್ಷಣಿಕ ಮತ್ತು ಆರೋಗ್ಯ ಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕ್ಯಾನ್ಸರ್ ಮತ್ತು ಡಯಾಬಿಟೀಸ್ ಬಗ್ಗೆ ಜಾಗೃತಿ ಜಾಥಾ, ಅನಾಥರಿಗೆ ರಕ್ಷಣೆ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸುವ ಪ್ರಯತ್ನ, ಶಾಲೆಗಳಿಗೆ ಅಗತ್ಯವಿರುವ ಸೌಕರ್ಯವನ್ನು ಕಲ್ಪಿಸುವುದು ಎಂದು ವಿವರಿಸಿದರು.
ತಾಲ್ಲೂಕಿನ ಅತ್ಯುತ್ತಮವಾಗಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ಲ್ಯಾಪ್‌ಟಾಪ್ ವಿತರಣೆ, ಎಂದಿನಂತೆ ತಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿರುವ ನೇತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಜುಲೈ 7 ರ ಶುಕ್ರವಾರ ಪಟ್ಟಣದ ಚೌದ್ರಿ ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿರುವ ಅಧಿಕಾರ ಪದಗ್ರಹಣ ಸಮಾರಂಭವನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸುವರು. ಪ್ರಮಾಣ ವಚನವನ್ನು ಮಾಜಿ ಜಿಲ್ಲಾ ರಾಜ್ಯಪಾಲ ಜಿ.ಶ್ರೀನಿವಾಸ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಜಿ.ಸಿ.ಶ್ರೀನಿವಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಾಂತ್ಯಾಧ್ಯಕ್ಷ ಜಿ.ಗುರುಪ್ರಸಾದ್, ವಲಯಾಧ್ಯಕ್ಷ ಜೆ.ಮಿಹಿರಕುಮಾರ್, ಟ್ರಸ್ಟ್ ಅಧ್ಯಕ್ಷ ಪಿ.ಹೆಚ್.ಧನಪಾಲ್ ಸೇರಿದಂತೆ ಹಲವರು ಉಪಸ್ಥಿತರಿರುವರು.
ಇದೇ ಸಂಧರ್ಬದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಡಾ.ಆಶಾಚೌದ್ರಿ ಮತ್ತು ಡಾ.ಚೌದ್ರಿ ನಾಗೇಶ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಪಿ.ಹೆಚ್.ಧನಪಾಲ್, ಡಾ.ನಾಗರಾಜ್, ಗಂಗಾಧರ ದೇವರಮನೆ, ಎಸ್.ಎಂ.ಕುಮಾರಸ್ವಾಮಿ, ವಿವಿದ ಪದಾಧಿಕಾರಿಗಳಾದ ಟಿ.ವಿ.ಮಹೇಶ್, ಮಿಹಿರಕುಮಾರ್, ಬಸವರಾಜು, ರವಿಕುಮಾರ್, ಸುಮಾಮಲ್ಲಿಕ್, ವೆಂಕಟೇಶ್ಶೆಟ್ಟರು. ಶಿವಾನಂದ್, ಸುನಿಲ್ಬಾಬು, ಪ್ರದೀಪ್ ಗುಪ್ತಾ, ರಂಗನಾಥ್, ಪ್ರಸನ್ನ, ಮನು ಸೇರಿದಂತೆ ಇತರರು ಇದ್ದರು.