ಪ್ರೀತಿ ಎಂದಾಕ್ಷಣ ಎಲ್ಲರ ಮನಸ್ಸಿನಲ್ಲಿ ಒಂದು ರೀತಿಯ ಸಂತೋಷ ಭಾವ ಮೂಡುತ್ತದೆ. ಯಾರಿಗೆ ತಾನೆ ಪ್ರೀತಿ ಎಂದರೆ ಇಷ್ಟವಿಲ್ಲ ಹೇಳಿ?
ಅದು ಒಂದು ರೀತಿಯ ಉನ್ಮತ್ತ ಭಾವನೆಗೆ ಒಳಪಡಿಸುತ್ತದೆ. ಜಗತ್ತಿನ ಹೊರ ರೂಪಗಳು ಪ್ರೀತಿಯ ಕಣ್ಣಿಗೆ ಕುರುಡಾಗುತ್ತದೆ, ಪ್ರೀತಿ ಎಂದಾಕ್ಷಣ ಹುಡುಗಿ ಮಾತ್ರ ನೆನಪಾಗುವುದು ಸಾಮಾನ್ಯ. ಆದ್ದರಿಂದಲೇ ಹೇಳಿರುವುದು ಪ್ರೀತಿ ಕುರುಡು ಎಂದು.
, ಅದು ನಮ್ಮ ಸುತ್ತಮುತ್ತಲಿರುವ ಅನಂತ ಅಪರೂಪದ ವೈಭವಗಳನ್ನು ನೋಡದಂತೆ ಮಾಡುತ್ತದೆ. ಇವತ್ತಿಗೆ ಪ್ರೀತಿಯನ್ನು ಹುಡುಗ ಹುಡುಗಿಗೆ ಮಾತ್ರ ನೀಡಬೇಕು ಎಂತಲೋ ಉಪಭಾವಗಳೆದ್ದಿರಬಹುದು, ಆದರೆ ನಮ್ಮ ಜಗತ್ತು ಜಿ. ಎಸ್ ಶಿವರುದ್ರಪ್ಪನವರ ಪ್ರೀತಿ ಇಲ್ಲದ ಮೇಲೆ ಕವಿತೆಯ ಸಾಲುಗಳನ್ನು ಒಮ್ಮೆ ಗಮನಿಸಬಾರದೆ. ಒಂದು ಹೂ ಅರಳುವಲ್ಲಿ, ಕಾಲೇಜಿಗೆ ತಯಾರಾಗುವಲ್ಲಿ, ಪರೀಕ್ಷೆ ಬರೆಯುವಲ್ಲಿ, ಚಳಿಯನ್ನು ಬಿಸಿಲನ್ನು ಅನುಭವಿಸುವಲ್ಲಿ, ಊಟ ಮಾಡುವಲ್ಲಿ ಕಷ್ಟ- ಸುಖದಲ್ಲಿ ಜೀವನದ ಪ್ರತಿಯೊಂದರಲ್ಲಿಯೂ ಪ್ರೀತಿಯನ್ನು ಕಾಣಬಾರದೆ. ಪ್ರೀತಿಯ ವಿಶಾಲದೃಷ್ಟಿಯನ್ನು ಅರಿಯದೆ ಕೇವಲ ಯಾರಿಗೋ ಒಬ್ಬರಿಗೆ ಸೀಮಿತ ಮಾಡಿದರೆ ಅದೇ ಪ್ರೀತಿಯ ಸಾವಲ್ಲವೇ.
ಇಂದಿನ ಯುವ ಸಮುದಾಯಕ್ಕೆ ಪ್ರೀತಿ ಮಾಡುವುದಕ್ಕೂ ಬರುತ್ತಿಲ್ಲ, ಯಾರೋ ಒಬ್ಬರಿಗಾಗಿ ತಮ್ಮ ಬಾಳಿನ ಪ್ರೀತಿ ಸ್ವಾರಸ್ಯತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಪ್ರೀತಿಯಲ್ಲಿ ಸುಖವಿದೆ ಆದರೆ ಅದನ್ನು ಒಬ್ಬರಿಗಾಗಿ ಸಾಯಿಸದಿದ್ದಾಗ ಮಾತ್ರ, ಎಲ್ಲರದಲ್ಲೂ ಪ್ರೀತಿ ಸೇರಿಸಿ ಆಸ್ವಾದಿಸುವ ಸರಳ ಸಾರ್ಥಕ ಜೀವನಕ್ಕಾಗಿ ಪ್ರೀತಿಯನ್ನು ಸಮರ್ಪಿಸಿ.
ಚರಣ್ ರಾಜ್. ಆರ್
ದ್ವಿತೀಯ ಬಿ.ಎ
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ತಿಪಟೂರು.
ತುಮಕೂರು ಜಿಲ್ಲೆ.