ಪೊಲೀಸರಿಗೆ ಮಾಸ್ಕ್ ವಿತರಿಸಿದ ಆರ್.ರಾಜೇಂದ್ರ
Publicstory. in
ಇವರಿಗೆಲ್ಲ ಊಟ ತಯಾರಿಸಲೆಂದೇ ಚೌಟ್ರಿ ಬಿಡಿಸಿಕೊಂಡಿದ್ದಾರೆ. ಪ್ರತಿ ದಿನ ಒಬ್ಬರು ಆಹಾರ ನಿರೀಕ್ಷಕರು ಬಂದು ಆಹಾರ ಪರೀಕ್ಷಿಸುತ್ತಾರೆ. ವೈದ್ಯರೊಬ್ಬರು ಅಡುಗೆ ಸಿಬ್ಬಂದಿ ಪರೀಕ್ಷೆ ಮಾಡಿದ ಬಳಿಕ ಆಹಾರ ಸಿದ್ಧತೆ ಆರಂಭಗೊಳ್ಳುತ್ತದೆ.
Tumkuru: ವೈದ್ಯರಿಗಾಗಿ ಎಲ್ಲರೂ ಮನೆಗಳ ಮೇಲೆ ನಿಂತು ಚಪ್ಪಾಳೆ ತಟ್ಟಿದವು. ಆದರೆ ಆಸ್ಪತ್ರೆಗಳಲ್ಲಿ ಏನಿದೆ, ಏನಿಲ್ಲ ಎಂಬ ಪ್ರಶ್ನೆಗಳನ್ನು ಮೌನವಾಗಿಸಿದೆವು.
ಕೆಲವು ಜನಪ್ರತಿನಿಧಿಗಳು ಮನೆಯಿಂದ ಈಚೆಯೇ ಬಂದಿಲ್ಲ. ಇನ್ನೂ ಕೆಲವು ಶಾಸಕರು ಮನೆಯಿಂದಲೇ ಸಭೆ ನಡೆಸುತ್ತಿದ್ದಾರೆ.
ಆದರೆ ಇಲ್ಲೊಬ್ಬ ಸಹಕಾರಿ ದುರೀಣ ಆಸ್ಪತ್ರೆಗಳ ಕಡೆ, ಪೊಲೀಸ್ ಠಾಣೆ, ರಸ್ತೆಯಲ್ಲಿರುವ ಅನಾಥರು, ರೂಂ ಗಳಲ್ಲಿ ಒಬ್ಬಂಟಿಯಾಗಿ ಉಳಿದಿರುವ ವಿದ್ಯಾ ರ್ಥಿಗಳು, ನಮಗಾಗಿ ದುಡಿಯುತ್ತಿರುವ ಪೌರ ಕಾರ್ಮಿಕರ ಕಡೆ ನೋಡುತ್ತಿದ್ದಾರೆ. ಇವರೆಗೆಲ್ಲ ಊಟ ನೀಡುವ ಕೆಲಸ ಮಾಡುತ್ತಿದ್ದಾರೆ. ಅದರ ಹಿಂದಿನ ಕತೆಯೂ ಕುತೂಹಲವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಗಾಗಿ ಹಾಗೂ ಸಿಬ್ಬಂದಿಗಾಗಿ ಅಡುಗೆ ಮಾಡುತ್ತಿದ್ದ ಸಿಬ್ಬಂದಿ ಕರೊನಾಗೆ ಹೆದರಿ ಕಾಲು ಕಿತ್ತಿದ್ದಾರೆ.ಈಗ ವೈದ್ಯರಿಗೆ, ಅಲ್ಲಿನ ಸಿಬ್ವಂದಿಗೆ ಊಟವೇ ಇಲ್ಲ. ಹಗಲಿರುಳು ನಮಗಾಗಿ ದುಡಿಯುತ್ತಿರುವ ಇವರಿಗೆ ಉಟಕ್ಕು ಪರದಾಡುವ ಸ್ಥಿತಿ.
ವಿಷಯ ತಿಳಿಯುತ್ತಿದ್ದಂತೆ, ಸಹಕಾರಿ ದುರೀಣರೂ ಆಗಿರುವ ಆರ್.ರಾಜೇಂದ್ರ ಅಭಿಮಾನಿಗಳ ಸಂಘ ಅವರಿಗೆ ಕೈ ಚಾಚಿದೆ.
ಬೀದಿ ಬದಿಯಲ್ಲಿ ಇರುವ, ಕಡು ಬಡವರಿಗೆ ಲಾಕ್ ಡೌನ್ ಸಮಯದಲ್ಲಿ ಊಟ, ನೀರು ನೀಡುವ ಕೆಲಸಕ್ಕೆ ಮುಂದಾದೆವು. ನಂತರ ಗೊತ್ತಾಯಿತು, ಜಿಲ್ಲಾಸ್ಪತ್ರೆ ಸಮಸ್ಯೆ. ಪೊಲೀಸರಿಗೆ ಊಟ ಯಾರು ನೀಡುತ್ತಾರೆ, ಹೋಟೆಲ್ ಗಳೇ ಇಲ್ಲದ ಮೇಲೆ ಊಟ ಎಲ್ಲಿ ತಿನ್ನುತ್ತಾರೆ? ಪೌರ ಕಾರ್ಮಿಕರ ಸಮಸ್ಯೆ ಏನು… ಹೀಗೆ ಕೆದಕುತ್ತಾ ಹೋಗುತ್ತಿದ್ದಂತೆ ಸಮಸ್ಯೆ ಅನಾವರಣವಾಯಿತು ಎನ್ನುತ್ತಾರೆ ಆರ್. ರಾಜೇಂದ್ರ.
ಪ್ರತಿ ದಿನ 1500 ಊಟ ಪೂರೈಕೆ ಮಾಡುತ್ತಿದ್ದೇವೆ. ತುಮಕೂರು ನಗರದ ಪೊಲೀಸರು, ಜಿಲ್ಲಾಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಎರಡು ಸಲ ಊಟ ನೀಡುತ್ತಿದ್ದೇವೆ. ಇದಕ್ಕಾಗಿ ಯಾರಿಂದಲೂ ಹಣ ಪಡೆದಿಲ್ಲ. ಅಭಿಮಾನಿ ಬಳಗದವರೇ ಎಲ್ಲವನ್ನು ಒದಗಿಸುತ್ತಿದ್ದಾರೆ ಎಂದು Publicstory. in. ಗೆ ಮಾಹಿತಿ ನೀಡಿದರು.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಯಾರೂ ನೆರವಾಗುತ್ತಿಲ್ಲ. ಮನೆಗಳಲ್ಲಿ ಒಬ್ಬಂಟಿಯಾಗಿ ಸಿಲುಕಿಕೊಂಡಿರುವ ಹಲವು ಮಂದಿ ಸರ್ಕಾರಿ ನೌಕರರು ಊಟ ಪಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅಭಿಮಾನಿ ಬಳಗದ ರಾಜೇಶ್ ದೊಡ್ಡಮನೆ.
R. ರಾಜೇಂದ್ರ ( ಸಂಗ್ರಹ ಚಿತ್ರ)
ಪ್ರತಿದಿನ ಅಡುಗೆ ತಯಾರಿ ನೋಡಲೆಂದೇ ರಾಜೇಂದ್ರಣ್ಣ ಬರುತ್ತಾರೆ. ಆಹಾರ ಪೂರೈಕೆಗಾಗಿಯೇ 5 ತಂಡಗಳನ್ನು ಮಾಡಿದ್ದೇವೆ. ಎಲ್ಲ ಕಡೆ, ಸಾಧ್ಯವಾದಷ್ಟು ಪೋನ್ ನಂಬರುಗಳನ್ನು ಪ್ರಚುರಪಡಿಸಿದ್ದೇವೆ. ಯಾರೇ ಕರೆ ಮಾಡಿದರೂ ಊಟ ನೀಡುತ್ತೇವೆ. ಲಕ್ಷ ಸಂಬಳ ಪಡೆಯುವವರು ಊಟ ಕೇಳಿ ಪಡೆಯುತ್ತಿದ್ದಾರೆ. ಎಲ್ಲ ಸಮಯದಲ್ಲೂ ಹಣ ಬಳಕೆಗೆ ಬರುವುದಿಲ್ಲ ಎಂಬ ಮಾತು ನಿಜವಾಗುತ್ತಿರುವುದನ್ನು ಕಾಣುತ್ತಿದ್ದೇನೆ ಎನ್ನುತ್ತಾರೆ ರಾಜೇಶ್.
ಪ್ರತಿ ದಿನ ಕರೆಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಈಗಾಗಲೇ ಗೃಹ ರಕ್ಷಕ ಸಿಬ್ಬಂದಿಗೆ ಮಾಸ್ಕ್ ನೀಡಿದ್ದೇವೆ. ನಾಳೆಯಿಂದ ಊಟದ ಜತೆಗೆ ಸ್ಯಾನಿಟೈಜರ್ ಸಹ ನೀಡಲಾಗುವುದು ಎನ್ನುತ್ತಾರೆ ರಾಜೇಂದ್ರ.