ಚಿಕ್ಕನಾಯಕನಹಳ್ಳಿ: ರಂಜಾನ್ ಹಬ್ಬದ ಅಂಗವಾಗಿ ಸಾಮಾಜಿಕ ಕಾರ್ಯಕರ್ತ ಇಮ್ರಾಜ್ ಮತ್ತು ಸ್ನೇಹಿತರು ಕೊರೊನಾ ವಾರಿಯರ್ ಆಗಿ ಹಗಲುರಾತ್ರಿ ಶ್ರಮವಹಿಸಿರುವ, ಲಾಕ್ ಡೌನ್ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕರೋನಾ ಹರಡದಂತೆ ತಡೆಗಟ್ಟಲು ಯಶಸ್ವಿಯಾಗಿರುವ ಹುಳಿಯಾರು ಪಟ್ಟಣದ ಸಬ್ ಇನ್ಸ್ಪೆಕ್ಟರ್ ಕೆ.ಟಿ ರಮೇಶ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸೈಯದ್ ಹಮಿತ್, ಸಾದತ್ ಶರೀಫ್, ಇಮ್ರಾನ್, ಜಬಿ ಉಲ್ಲಾ ,ಅರಫಾತ್, ಮುಜಮಿಲ್, ಸಲ್ಮಾನ್ ,ಫರ್ಮಾನ್ ಹಾಜರಿದ್ದರು.