Publicstory
ಶಿರಾ:ತಾಲೂಕಿನ ಕಳುವರಹಳ್ಳಿ ಜುಂಜಪ್ಪನ ಗುಡ್ಡೆ ಬಳಿ ನಾಟಿ ದನಗಳ ಸಂರಕ್ಷಣೆ ಮತ್ತು ಸಂವರ್ಧನ ಕೇಂದ್ರ ಸ್ಥಾಪಿಸುವಂತೆ ಶಿರಾ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಸಂಭವನೀಯ ಅಭ್ಯರ್ಥಿ ಅಂಕಸಂದ್ರ ಪ್ರೇಮಕುಮಾರ್ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಆಮ್ ಆದ್ಮಿ ಪಾರ್ಟಿಯ ಸಭೆಯಲ್ಲಿ ಶಿರಾ ಸಂಭವನೀಯ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಅವರು ಸೋಮವಾರ ಜುಂಜಪ್ಪನ ಗುಡ್ಡೆಯಲ್ಲಿ ಪೂಜೆ ಸಲ್ಲಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಜುಂಜಪ್ಪನ ಗುಡ್ಡೆಯಲ್ಲಿ ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆ ಜೊತೆಗೂಡಿ ಪ್ರತಿವರ್ಷ ಶಿವೋತ್ಸವ ಅಯೋಜಿಸುತಿದ್ದನ್ನು ಸ್ಮರಿಸಿರುವ ಅವರು, ಜುಂಜಪ್ಪ ಪಶುಪಾಲನೆ ಮಾತ್ರವಲ್ಲದೆ ಜನಪದ, ಸಂಗೀತ, ಜೀವಸಂಕುಲದ ಪರ ಹೋರಾಟಗಾರರಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಹ ಸಾಂಸ್ಕೃತಿಕ ನಾಯಕ. ಆದರೆ ಈವರೆಗೆ ಬಂದು ಹೋದ ಸರ್ಕಾರಗಳು ಜುಂಜಪ್ಪನ ಬಗ್ಗೆ ಯಾವುದೇ ಗಮನಹರಿಸಲು ನಿರ್ಲಕ್ಷ್ಯ ತೋರಿವೆ ಎಂದು ದೂರಿದ್ದಾರೆ.
ಈಗ ಬಿಜೆಪಿ ಸರ್ಕಾರ ಜುಂಜಪ್ಪನ ಗುಡ್ಡೆ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಒಂದು ಕೋಟಿ ರೂಪಾಯಿ ಹಣ ಏನೇನು ಸಾಲದು. ಆದರೂ ಈಗಾಗಲೇ ಸ್ಥಳೀಯರು ತಿಳಿಸಿರುವಂತೆ ಜುಂಜಪ್ಪನ ಗುಡ್ಡೆ ಮತ್ತು ಸುತ್ತಲಿನ ಪೌಳಿಗೆ ಯಾವುದೇ ಧಕ್ಕೆ ತರದಂತೆ ಅಭಿವೃದ್ಧಿ ಕಾರ್ಯ ನಡೆಸುವ ನೀಲನಕ್ಷೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.